*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…*
*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…*
ಶಿವಮೊಗ್ಗದ ಮೊದಲ ಸ್ಥಳೀಯ ಕಲರ್ ಫುಲ್ ಪತ್ರಿಕೆ ಕರುನಾಡು ಸಂಜೆ ಮತ್ತು ರಾಜ್ಯ ಮಟ್ಟದ ಮೊದಲ ಕಲರ್ ಫುಲ್ ಪತ್ರಿಕೆ ಜನವಾಹಿನಿಯಲ್ಲಿ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಗಳ ಬ್ಯೂರೋಚೀಫ್ ಆಗಿ ಕೆಲಸ ಮಾಡಿದ ತೃಪ್ತಿ ಜೀವನದಲ್ಲಿ ಇದ್ದೇ ಇದೆ.
ಇತ್ತೀಚೆಗಷ್ಟೇ ಸೂರ್ಯೋದಯ ಪತ್ರಿಕೆ ಸಂಪಾದಕರಾಗಿದ್ದ ಡಿ.ಮಹಾದೇವಪ್ಪರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಲಂಕೇಶ್ ಪ್ರಶಸ್ತಿ ನೀಡಿಲಾಗಿತ್ತು.
ಆಗ ಗುರುಟೀಕ್ ಗಂಗಾಧರ್ ಮಾಲೀಕರಾಗಿದ್ದ ಸೂರ್ಯೋದಯ ಪತ್ರಿಕೆಯ ಬಗ್ಗೆ, ಅಲ್ಲಿ ಮಹಾದೇವಪ್ಪ ಸಂಪಾದಕರಾಗಿದ್ದ ಸಂದರ್ಭದಲ್ಲಿ ಪದೇ ಪದೇ ಎಂ.ಸಿ.ಶೋಭಾ ಮಳವಳ್ಳಿಯವರ ಮೂಲಕ ಭೇಟಿಯಾಗಿ ಮಾತಾಡುತ್ತಿದ್ದ ಬಗ್ಗೆ ನೆನಪು ಮಾಡಿಕೊಂಡಿದ್ದೆ. ಅಷ್ಟು ಬೇಗ ಗುರುಟೀಕ್ ಗಂಗಾಧರ್ ನಿಧನರಾದರೆಂಬ ಸುದ್ದಿ ಬಂದು ತಲುಪಿದೆ.
ಅವರು ವ್ಯವಹಾರಿಕವಾಗಿ ಹೇಗಿದ್ದರೋ ಗೊತ್ತಿಲ್ಲ. ಅವರು ಮಾಡುತ್ತಿದ್ದ ವ್ಯವಹಾರಗಳ ಮೇಲೆ ಕಣ್ ದೃಷ್ಟಿ ಬೀಳಬಾರದೆಂದೇ ಕರುನಾಡು ಸಂಜೆ, ಸೂರ್ಯೋದಯ ಪತ್ರಿಕೆಗಳನ್ನು ಹುಟ್ಟು ಹಾಕಿದರು.
ಆ ಕರುನಾಡು ಸಂಜೆ ಸ್ಥಳೀಯ ಪತ್ರಿಕೆ ಆಗಿನ ಕಾಲದಲ್ಲೇ ತನ್ನ ವಿನ್ಯಾಸ( ಈಗ ಆ ಪುಟ ವಿನ್ಯಾಸಕಾರ ಹರೀಶ್ ವಿಜಯವಾಣಿಯಲ್ಲಿದ್ದಾರೆ), ಸುದ್ದಿ ವಿಶ್ಲೇಷಣೆಗಳಿಂದ ಪ್ರಸಿದ್ಧಿ ಪಡೆದುಕೊಳ್ಳತೊಡಗಿತ್ತು. ಆಗ ನನ್ನ ಜೊತೆಗಿದ್ದವರು ಈಗಿನ ಪ್ರಜಾವಾಣಿ ಉನ್ನತ ಸ್ಥಾನದಲ್ಲಿರುವ ಗೆಳೆಯ ವೈ.ಗ.ಜಗದೀಶ್, ಬೇರೆ ಬೇರೆ ಪತ್ರಿಕೆಗಳ ಆಧಾರ ಸ್ತಂಭಗಳಾಗಿರುವ ಸತ್ಯನಾರಾಯಣ, ಗಾಡಿಕೊಪ್ಪ ಗಿರೀಶ, ಭಾಗ್ಯ, ಶಾರದಾ ಸೇರಿದಂತೆ ಹಲವರು…
ಶಿವಮೊಗ್ಗದ ಪತ್ರಕರ್ತರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದೆಲ್ಲ ಬೇಕಾಗಿಲ್ಲದ ವಿಷಯ…
ಏನಾದರಾಗಲಿ, ಗುರುಟೀಕ್ ಗಂಗಾಧರ್ ರವರು ಸಿಬ್ಬಂದಿಗಳ ವಿಚಾರದಲ್ಲಿ ತೆಗೆದುಕೊಳ್ಳುತ್ತಿದ್ದ ಕಾಳಜಿಯನ್ನು ಮತ್ತೆಲ್ಲೂ ಕಾಣಲಿಲ್ಲ…
ಹೋಗಿ ಬನ್ನಿ…🙏


