ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಕಟು ಟೀಕೆ; ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಬಿಲ್ಲನ್ನು ತಂದಿದ್ದೇ ಭ್ರೂಣ ಹತ್ಯೆಗೆ ಸಮಾನ

ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಕಟು ಟೀಕೆ;

ಸೋಲುತ್ತೇವೆ ಎಂದು ಗೊತ್ತಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಬಿಲ್ಲನ್ನು ತಂದಿದ್ದೇ ಭ್ರೂಣ ಹತ್ಯೆಗೆ ಸಮಾನ

ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಶೇಕಡ 50ರಷ್ಟು ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ ಎಂದು ಗರ್ವದಿಂದ ಲ ಪ್ರಧಾನ ಮಂತ್ರಿ ಅವರಿಗೂ ಹಾಗೂ ಬಿಜೆಪಿ ಪಕ್ಷದವರಿಗೂ ತಿಳಿಯಬಯಸುತ್ತೇನೆ ಎಂದು ಕಾಂಗ್ರೆಸ್ ಮುಖಂಡರೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದ ಹೆಚ್.ಸಿ.ಯೋಗೇಶ್ ತಿಳಿಸಿದ್ದಾರೆ.

ಈ ದೇಶದ ಪ್ರತಿಷ್ಠಿತ ರಾಜ್ಯಗಳಾದ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರೇ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿರುವುದು ನಾವುಗಳು ನೋಡಿದ್ದೇವೆ. ಸುಮಾರು ಆರು ಅವಧಿಗೆ ದಿವಂಗತ ಜಯಲಲಿತಾ ರವರು ಮುಖ್ಯಮಂತ್ರಿಗಳಾಗಿ ತಮಿಳುನಾಡಿನಲ್ಲಿ ಸೇವೆ ಸಲ್ಲಿಸಿರುವುದು, ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಶ್ರೀಮತಿ ಮಮತಾ ಬ್ಯಾನರ್ಜಿರವರು 3 ಅವಧಿಗಳಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ ಎಂದು ವಿವರಿಸಿದ್ದಾರೆ.

ಎರಡು ರಾಜ್ಯದ ಚುನಾವಣೆಗೆ ಸಂಬಂಧಿಸಿದಂತೆ ಮಹಿಳಾ ಮೀಸಲಾತಿ ಅಂಗೀಕರಿಸಿರುವುದು ಚುನಾವಣಾ ಸಾಂದರ್ಬ್ಭಿಕ ಕನಿಕರವೆಂದು ತೋರುತ್ತದೆ. ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆಗೆ ನಮ್ಮ ದೇಶದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮರ್ಮೋ ರವರನ್ನು ಕರೆಯದೆ ಇರುವುದು, ಮಣಿಪುರದ ಹೆಣ್ಣು ಮಕ್ಕಳ ಅತ್ಯಾಚಾರದ ಬಗ್ಗೆ ಮಾತನಾಡದೆ ಇರುವುದು ಹೆಣ್ಣು ಮಕ್ಕಳಿಗೆ ತೋರುವ ಅವಮಾನದ ವಿಚಾರವಾಗಿರುತ್ತದೆ, ಇದನ್ನೆಲ್ಲ ಗಮನಿಸಿದರೆ ನರೇಂದ್ರ ಮೋದಿ ರವರು ಚುನಾವಣೆಗಾಗಿ ಹೆಣ್ಣುಮಕ್ಕಳ ಮೇಲೆ ತೋರಿರುವ ನಾಟಕ ಎನಿಸುತ್ತದೆ ರಾಜ್ಯಸಭೆಯಲ್ಲಿ ಕೆಲವು ಮಸೂದೆಗಳನ್ನು ಅಂಗೀಕರಿಸಲು ರಾಜ್ಯಸಭೆಯ ಸದಸ್ಯರ ಮತ ಪಡೆಯಲು ಹಣದ ಆಮೀಷವನ್ನು ಹಾಗೂ ಅಧಿಕಾರದ ಆಮಿಷವನ್ನು ಮತ್ತು ಈಡಿ ಸಿಬಿಐ ಬೆದರಿಕೆ ತೋರಿಸುವ ಮುಖಾಂತರ ಅಂಗೀಕಾರ ಮಾಡಿಕೊಂಡಿರುತ್ತೀರಿ ಆದರೆ ಇಂಥ ಒಂದು ಮಹಿಳಾ ಮಸೂದೆಯನ್ನು ಅಂಗೀಕಾರ ಮಾಡಲು ವಿರೋಧ ಪಕ್ಷ ನಾಯಕರೊಂದಿಗೆ ಚರ್ಚೆ ಹಾಗೂ ಚುನಾವಣೆಯ ನಂತರ ವಿಶೇಷ ಸಭೆಯನ್ನು ಕರೆಸಿ, ದೇಶವನ್ನು ಉದ್ದೇಶಿಸಿ ಮಾತನಾಡುವಾಗ ನರೇಂದ್ರ ಮೋದಿ ರವರು ಸುಮಾರು 53 ಬಾರಿ ಕಾಂಗ್ರೆಸ್ ಪಕ್ಷವನ್ನು ನೆನೆಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಯ್ಯುವ ಮುಖಾಂತರ ಸಾರ್ವಜನಿಕರ ಹಣದಲ್ಲಿ ತಮ್ಮ ಈ ಸುಳ್ಳಿನ ಪ್ರಚಾರ ಮಾಡುವ ಮುಖಾಂತರ ತಮ್ಮದೇ ಆದ ಸುಳ್ಳಿನ ಕ್ಯಾಮರಗಳನ್ನು ಹಿಡಿದುಕೊಂಡು ಭಾಷಣ ಮಾಡಿರುತ್ತೀರಿ. ಈ ರೀತಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಸಾರ್ವಜನಿಕರ ಹಣವನ್ನು ಬಳಸಿರುವುದು ಈ ದೇಶದ ದುರ್ಬಲ ಪ್ರಧಾನಿ ನರೇಂದ್ರ ಮೋದಿ ರವರು ತಮ್ಮ ಮಂಕಿ ಬಾತ್ ದೇಶದ ಜನತೆಯ ನುದ್ದೇಶಿಸಿ ಮಾತನಾಡಲು ಬಳಸಿಕೊಂಡಿರುತ್ತಾರೆ ಮಹಿಳೆಯರು ಇದನ್ನೆಲ್ಲ ಗಮನಿಸಿ, ಕಾಂಗ್ರೆಸ್ ಪಕ್ಷವು ಎಂದಿಗೂ ಮಹಿಳೆಯರೊಂದಿಗೆ ನಿಂತಿರುವುದನ್ನು ಗಮನಿಸಬೇಕು ಭೇಟಿ ಬಚಾವೂ ಇಲ್ಲ ಭೇಟಿ ಪಡಾವೂ ಇಲ್ಲ ಖಾಲಿ ಮಂಕಿ ಬಾತ್ ನಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹೊಟ್ಟೆಯನ್ನು ತುಂಬಿಸುವ ನಿಮ್ಮ ಡೋಂಗಿ ಭಾಷಣಕ್ಕೆ ನಮ್ಮ ಧಿಕ್ಕಾರ ಈ ರೀತಿಯಾಗಿ ಹೆಚ್ ಸಿ ಯೋಗೇಶ್ ರವರು ಮಹಿಳಾ ಮೀಸಲಾತಿ ಮಸೂದೆಯ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.