*ಶಿವಮೊಗ್ಗ ನಗರದಲ್ಲಿಲ್ಲದ ಕಾನೂನು ಬಾಹಿರ ಅಕ್ರಮ ದಂಧೆಗಳು ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೇಗೆ ಎಸ್ ಪಿ ನಿಖಿಲ್ ರವರೇ?!* *ಅಕ್ರಮ ಮರಳು- ತೂರುಬಿಲ್ಲೆ- ಇಸ್ಪೀಟು- ಓಸಿಯಲ್ಲೇ ಮುಳುಗಿದ ಹೊಳೆಹೊನ್ನೂರು ಠಾಣಾ ವ್ಯಾಪ್ತಿ!* *ಗಟ್ಟಿ ಕ್ರಮಕ್ಕೆ ಎಸ್ ಪಿ ನಿಖಿಲ್ ಮುಂದಾಗುತ್ತಿಲ್ಲ ಯಾಕೆ? ದಾರಿ ತಪ್ಪಿಸಲಾಗುತ್ತಿದ್ದೆಯೇ?*

*ಶಿವಮೊಗ್ಗ ನಗರದಲ್ಲಿಲ್ಲದ ಕಾನೂನು ಬಾಹಿರ ಅಕ್ರಮ ದಂಧೆಗಳು ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೇಗೆ ಎಸ್ ಪಿ ನಿಖಿಲ್ ರವರೇ?!*

*ಅಕ್ರಮ ಮರಳು- ತೂರುಬಿಲ್ಲೆ- ಇಸ್ಪೀಟು- ಓಸಿಯಲ್ಲೇ ಮುಳುಗಿದ ಹೊಳೆಹೊನ್ನೂರು ಠಾಣಾ ವ್ಯಾಪ್ತಿ!*

*ಗಟ್ಟಿ ಕ್ರಮಕ್ಕೆ ಎಸ್ ಪಿ ನಿಖಿಲ್ ಮುಂದಾಗುತ್ತಿಲ್ಲ ಯಾಕೆ? ದಾರಿ ತಪ್ಪಿಸಲಾಗುತ್ತಿದ್ದೆಯೇ?*

ಶಿವಮೊಗ್ಗದ ಸೆರಗಿನಲ್ಲೇ ಇರುವ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏನೆಲ್ಲ ನಡೆಯಬಾರದೋ ಅದೆಲ್ಲ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆ ಅಪರಾಧ ಮುಕ್ತವಾಗಿರಲೆಂಬ ಎಸ್ ಪಿ ನಿಖಿಲ್ ರವರ ಪ್ರಯತ್ನದ ಭಾಗವಾಗಿ ದ್ರೋಣ್ ಕಣ್ಗಾವಲು ಹಾಸಲಾಗಿದ್ದರೂ ಹೊಳೆಹೊನ್ನೂರು, ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಈ ದ್ರೋಣ್ ಓಡಾಡುತ್ತಿಲ್ಲವೇ? ಅಥವಾ ದ್ರೋಣ್ ಇಲ್ಲಿ ಕಣ್ಮುಚ್ಚಿ ಹಾರಾಡುತ್ತಿದೆಯೇ?

ಬೆಳಗ್ಗಿನಿಂದಲೇ ಆರಂಭವಾಗುವ ತೂರುಬಿಲ್ಲೆ, ಇಸ್ಪೀಟ್, ಓಸಿ, ಅಕ್ರಮ ಮರಳು ಮಾಫಿಯಾ ರಾತ್ರಿಯಾದರೂ ಮುಗಿಯುವುದಿಲ್ಲ. ಈ ಮಾಫಿಯಾದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಹೊಳೆಹೊನ್ನೂರು ಪೊಲೀಸರಾಗಲೀ, ಭದ್ರಾವತಿ ಗ್ರಾಮಾಂತರದ ಖಾಕಿಯಾಗಲೀ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಅತ್ಯಾಶ್ಚರ್ಯದ ವಿಚಾರ.

ಲಕ್ಷ ಲಕ್ಷ, ಕೋಟಿ ಕೋಟಿ ಹಣದ ಓಡಾಟ ಈ ಮಾಫಿಯಾದಿಂದಲೇ ಓಡಾಟ ಆರಂಭಿಸಿದೆ ಎಂದು ಸಾರ್ವಜನಿಕರು ದೂರಿದರೂ ಹಣದ ಪ್ರಭಾವದ ಕಾರಣದಿಂದ ಯಾವುದೂ ಬೆಳಕಿಗೆ ಬರಲು ಬಿಡುತ್ತಿಲ್ಲ ಎನ್ನಲಾಗುತ್ತಿದೆ.

ಶಿವಮೊಗ್ಗ ಗ್ರಾಮಾಂತರದಲ್ಲಿ ಹರಿಯುವ ತುಂಗಾ, ಭದ್ರಾ ನದಿ ತೀರಗಳಲ್ಲಿ ದೊಡ್ಡಮಟ್ಟದಲ್ಲೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಪೊಲೀಸರು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮೌನವಹಿಸಿರುವುದು ಅನುಮಾನಕ್ಕೆಡೆ ಮಾಡಿಕೊಡುತ್ತಿದೆ.

ತಟ್ಟಿಹಳ್ಳಿ, ಕಲ್ಯಾಲ, ಮಲ್ಲಾಪುರ, ಹೊಳೆಹೊನ್ನೂರು ಸೇರಿದಂತೆ ಹತ್ತು ಹಲವು ಕಡೆ ಅಂದರ್ ಬಾಹರ್, ತೂರುಬಿಲ್ಲೆ ದಿನನಿತ್ಯ ಅಜಾನುಬಾಹು ರೂಪ ತಾಳುತ್ತಿರುವುದರ ಹಿಂದಿನ ಲೆಕ್ಕಾಚಾರ ಅರ್ಥವಾಗುತ್ತಿಲ್ಲ.

ಈಗಲಾದರೂ ಪೊಲೀಸ್ ಇಲಾಖೆ ತನ್ನ ಖದರು ಈ ಮಾಫಿಯಾದ ವಿರುದ್ಧ ತೋರಿಸುವುದೇ?