ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ; ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?

*ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ;*
*ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?*

ಶಿರಾಳಕೊಪ್ಪದಲ್ಲಿ ಬುಧವಾರದಂದು *ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ* ವತಿಯಿಂದ, ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ *ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿ* ಉತ್ತಮ ಕರ್ತವ್ಯ ನಿರ್ವಹಿಸಿದ, *ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಸ್ ಪಿ ಮಿಥುನ್ ಕುಮಾರ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಅವರು ಏನೆಂದರು?

1) *ಸಾರ್ವಜನಿಕರ ದೂರು, ಅಹವಾಲು ಮತ್ತು ಸಮಸ್ಯೆಗಳಿಗೆ* ಸೂಕ್ತ ರೀತಿಯಲ್ಲಿ ಸ್ಪಂದಿಸುವುದು ಮತ್ತು ಸಹಾಯ ಮಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿರುತ್ತದೆ.

2) ಬೆಳೆಗಾರರು ಮತ್ತು ವರ್ತಕರು ಈ ರೀತಿಯ ಸಂಘಗಳನ್ನು ಮಾಡಿಕೊಂಡಾಗ, ಇದರಿಂದ ರೈತರಿಗೆ ಶಕ್ತಿ ಬರಲಿದೆ. *ರೈತ ಸಂಘ, ವರ್ತಕರ ಸಂಘಗಳ* ಸದಸ್ಯರು ಮತ್ತು ಪದಾಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ *ಸಂಪರ್ಕ ಮತ್ತು ಒಡನಾಟದಲ್ಲಿದ್ದಾಗ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ* ಸಿಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು *ಪೊಲೀಸ್ ಇಲಾಖೆಯೊಂದಿಗೆ ಉತ್ತಮ ಬಾಂದವ್ಯ* ಇಟ್ಟುಕೊಂಡು ಸಂಘದ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ.

3) *ಕೃಷಿ ಕ್ಷೇತ್ರದಲ್ಲಿ ವಿಮೆ ಮಾಡಿಸುವ ಪದ್ದತಿಯು* ತುಂಬಾ ವಿರಳವಾಗಿದ್ದು, ದಯಮಾಡಿ *ಎಲ್ಲಾ ರೈತರು ವರ್ತಕರು ಕಡ್ಡಾಯವಾಗಿ ನಿಮ್ಮ ಬೆಳೆ ಮತ್ತು ದಸ್ತಾನಿಗೆ* ವಿಮೆ ಮಾಡಿಸಿ. ಇದರಿಂದ ಬೆಳೆಹಾನಿ ಮತ್ತು ಕಳ್ಳತನದಂತಹ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನ ಒಳಗೆ ಶೀಘ್ರವಾಗಿ *ಆರ್ಥಿಕವಾಗಿ ಪರಿಹಾರ ಸಿಗಲಿದೆ.* ಆದ್ದರಿಂದ ವರ್ತಕರು ಹೊರ *ರಾಜ್ಯಗಳಿಗೆ ಮತ್ತು ದೂರದ ಪ್ರದೇಶಕ್ಕೆ* ತಮ್ಮ ದಸ್ತಾನು ಸಾಗಾಟ ಮಾಡುವಾಗ ಕಡ್ಡಾಯವಾಗಿ ವಿಮೆ ಮಾಡಿಸಿ.

4) *ಅಡಿಕೆ ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವಾಗ* ಮುಂಚಿತವಾಗಿ ಟ್ರಾನ್ಸ್ಪೋರ್ಟ್ ಏಜೆನ್ಸಿಗಳು, ವಾಹನದ ಮಾಲೀಕರು, ವಾಹನದ ಚಾಲಕರು ಮತ್ತು ಸಹಾಯಕರ *ಪೂರ್ವಪರಗಳನ್ನು ಪರಿಶೀಲಿಸಿ* ಅವರ ಮಾಹಿತಿಯನ್ನು ಪಡೆದು *ಖಚಿತಪಡಿಸಿಕೊಂಡ ನಂತರವೇ* ಸಾಗಾಟ ಮಾಡುವುದು ಸೂಕ್ತವಿರುತ್ತದೆ.

5) *ಅಡಿಕೆ ಮತ್ತು ಕೃಷಿ ಉತ್ಪನ್ನಗಳ ಸಾಗಾಟ ಮಾಡುವ ವಾಹನಗಳಿಗೆ GPS ಅಳವಡಿಕೆ* ಮಾಡಿಕೊಳ್ಳುವುದು ಅಥವಾ *GPS ಅನ್ನು ಅಳವಡಿಸಿದಾ ವಾಹನಗಳಲ್ಲಿಯೇ* ಸಾಗಾಟ ಮಾಡುವುದು ಉತ್ತಮವೆಂದು ತಿಳಿಸಿದರು.

ಈ ಸಂದರ್ಭದಲ್ಲಿ *ಆಯನೂರಿನ ಶುಂಠಿ ಕಳ್ಳತನ* ಪ್ರಕರಣದಲ್ಲಿ, ಸಕಾಲದಲ್ಲಿ *ಸಮಸ್ಯೆಗೆ ಸ್ಪಂದಿಸಿ, ಸಹಕಾರ* ನೀಡಿದ ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಪ್ರಕರಣದಲ್ಲಿ ಕೂಡಲೇ *ಕಾರ್ಯ ಪ್ರೌವೃತ್ತರಾಗಿ ಆರೋಪಿಯನ್ನು ಪತ್ತೆ ಹಚ್ಚಿ, ಕರ್ತವ್ಯ ನಿಷ್ಠೆ* ಮೆರೆದ ಕುಂಸಿ ಪೊಲೀಸ್ ಠಾಣೆಯ * ಶಾಂತರಾಜ್, ಪಿಎಸ್ಐ ಮತ್ತು ಶಶಿಕುಮಾರ್ ಸಿಪಿಸಿ* ರವರಿಗೆ ಶುಂಠಿ ಬೆಳೆಗಾರರ ಮತ್ತು ವರ್ತಕರ ಸಂಘದಿಂದ ಅಭಿನಂದಿಸಿ, ಸನ್ಮಾನ ಮಾಡಲಾಯಿತು.