ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ

ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ

ತಳಸಮುದಾಯಗಳ ಅಲಕ್ಷಿತ ಅನುಭವಗಳನ್ನು ಮತ್ತು ಆ ಸಮುದಾಯಗಳ ಒಳಗಣ ಈ ಹೊತ್ತಿಗೂ ಕುದಿಯುತ್ತಲೇ ಇರುವ ಮಹಿಳೆಯ ಸಂಕಟ ಮತ್ತು ಬೆರಗುಗಳ ಸಂವೇದನೆಗಳನ್ನೆಲ್ಲ ಒಟ್ಟಿಗೆ ಕಡೆದು ಕನ್ನಡ ಸಾಹಿತ್ಯ ಲೋಕದ ಮುಂದೆ ಇರಿಸಿದ ಮೊದಲ ತಲೆಮಾರಿನ ಬರಹಗಾರ್ತಿ ಬಿ.ಟಿ. ಜಾಹ್ನವಿ. ಲಂಕೇಶರಂತಾ ಲಂಕೇಶರ ಸದಾ ನಿಗಿನಿಗಿ ಉರಿಯುವ ಕುಲುಮೆಯಲ್ಲೇ ಹದಗೊಂಡು ಅಪಾರ ಓದುಗರನ್ನು ತಲುಪಿದ ಜಾಹ್ನವಿಯವರ ಕತೆಗಳು ವಿಮರ್ಶಾರಾಜಕಾರಣದಲ್ಲಿ ಮಾತ್ರ ಅತ್ಯಂತ ವ್ಯವಸ್ಥಿತವಾಗಿ ಹಿಂದಕ್ಕೆ ಸರಿಸಲ್ಪಟ್ಟವು. ವಿಶೇಷವೆಂದರೆ ಜಾಹ್ನವಿಯವರ ಬರಹಗಳಿಗೆ ಈ ಹೊತ್ತಿಗೂ ದೊಡ್ಡ ಓದುಗ ವರ್ಗವಿದೆ. ಈ ಹೊತ್ತಿಗೂ ಕನ್ನಡದ ಓದುಗರೊಂದಿಗೆ ಸಂವಾದಿಸುತ್ತಲೇ ಇವೆ, ತಮ್ಮ ವಾಗ್ವಾದವನ್ನು ಕಟ್ಟುತ್ತಲೇ ಇವೆ.

ಈ ನೆಲಮೂಲದ ಲೇಖಕಿಗೆ ರಾಜ್ಯ ಸರ್ಕಾರದ ಪ್ರತಿಷ್ಟಿತ ಡಾ.ಸಿದ್ಧಲಿಂಗಯ್ಯ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷದ ಸಂಗತಿ. ಇದೇ ಹೊತ್ತಲ್ಲಿ ಅವರ ಸಮಗ್ರ ಕಥಾಸಂಕಲನವೂ ಪ್ರಕಟಗೊಂಡಿದೆ.

ಈ ಹೊತ್ತಲ್ಲಿ ಶಿವಮೊಗ್ಗದ ‘ಮಿಲಿಂದ’ ಸಾಂಸ್ಕೃತಿಕ ಸಂಸ್ಥೆಯು ಬಿ.ಟಿ.ಜಾಹ್ನವಿಯವರ ಸಾಧನೆಯನ್ನು
ಗುರುತಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ದಿನಾಂಕ.07.03.2024 ರಂದು ಶಿವಮೊಗ್ಗದಲ್ಲಿ ಆಯೋಜಿಸಿದೆ.( ಆಹ್ವಾನ ಪತ್ರಿಕೆ ಗಮನಿಸಿ)

ಸ್ನೇಹಿತರೇ, ತಾವೂ ಈ ಅಭಿನಂದನಾ ಸಮಾರಂಭದ ಭಾಗವಾಗಬೇಕೆಂದು ನಮ್ಮ ನಿರೀಕ್ಷೆ. ಬನ್ನಿ ಜಾಹ್ನವಿಯವರನ್ನು ಅಭಿನಂದಿಸೋಣ.

ಬಿ.ಎಲ್.ರಾಜು.
ಶಿವಮೊಗ್ಗ.