*ಕೊನೆಗೂ ಮುಗಿದ ಅನಿಶ್ಚಿತತೆ;* *ತಮಿಳುನಾಡಿನ ಇತಿಹಾಸದಲ್ಲೇ ಮೊದಲ ಮೈತ್ರಿ ಸರ್ಕಾರ;* *ವಿಜಯ್ ಕೈಹಿಡಿದ ತಿರುಮಾವಳವನ್!*

*ಕೊನೆಗೂ ಮುಗಿದ ಅನಿಶ್ಚಿತತೆ;*

*ತಮಿಳುನಾಡಿನ ಇತಿಹಾಸದಲ್ಲೇ ಮೊದಲ ಮೈತ್ರಿ ಸರ್ಕಾರ;*

*ವಿಜಯ್ ಕೈಹಿಡಿದ ತಿರುಮಾವಳವನ್!*

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ಸೂಪರ್‌ಸ್ಟಾರ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ವಿಸಿಕೆ (VCK) ಪಕ್ಷವು ವಿಜಯ್‌ಗೆ ಬೇಷರತ್ ಬೆಂಬಲ ಘೋಷಿಸುವುದರೊಂದಿಗೆ, ತಮಿಳುನಾಡಿನಲ್ಲಿ ಮೊದಲ ಬಾರಿಗೆ ‘ಮೈತ್ರಿ ಸರ್ಕಾರ’ ಅಸ್ತಿತ್ವಕ್ಕೆ ಬರಲಿರುವುದು ದೃಢಪಟ್ಟಿದೆ.

ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ವಿಜಯ್ ಮೈತ್ರಿಕೂಟವು ಈ ಮೊದಲು 116 ಶಾಸಕರ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4) ಬಲ ಹೊಂದಿತ್ತು. ಈಗ ವಿಸಿಕೆಯ ಇಬ್ಬರು ಶಾಸಕರು ಬೆಂಬಲ ಸೂಚಿಸಿರುವುದರಿಂದ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ತಲುಪಿದೆ.