*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….*

*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?*

*ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….*

ಶಿವಮೊಗ್ಗದ ನಿಜವಾದ ಜನನಾಯಕ ಅಂತ ಇದ್ದವರು ಎಸ್.ಪೂರ್ಯಾನಾಯ್ಕರು. ಅವರನ್ನು ಕಳೆದುಕೊಂಡು 27 ವರ್ಷಗಳೇ ಆಗಿ ಹೋದವು.

ನಾನು(ಶಿ.ಜು.ಪಾಶ) ಆಗ ಎಚ್ಚರಿಕೆ ಪತ್ರಿಕೆಯಲ್ಲಿದ್ದೆ. ಪೂರ್ಯಾನಾಯ್ಕರೆಂದರೆ ಅಲ್ಲೊಂದು ಅಯಸ್ಕಾಂತದ ಸೆಳೆತ ಇರ್ತಿತ್ತು. ಮುಂದೊಬ್ಬರು ಶಾಸಕರಾಗುತ್ತಾರೆ ಅಂತ ಜನರ ಮನಸ್ಸಲ್ಲಿ ಚರ್ಚೆಗಳಿದ್ದಿದ್ದೇ ಪೂರ್ಯಾನಾಯ್ಕರ ಚಹರೆ…

ಅದಾಗಲೇ, ಶಿವಮೊಗ್ಗದಲ್ಲಿ ಜನಜನಿತರಾಗಿದ್ದ ಪೂರ್ಯಾನಾಯ್ಕರ ವಿಶೇಷತೆ ಇದ್ದಿದ್ದೇ ರಾಜಕಾರಣ ಕಂಡವರ ದುಡ್ಡಲ್ಲಿರಬಾರದು ಎಂಬ ಚಿಂತನೆ ಯಲ್ಲಿ.

ನಾನೊಮ್ಮೆ ಕೇಳಿದ ನೆನಪು; ನಿಮ್ಮದೇನು ಗುರಿ? ಅಂತ. ಅವರು ನಾನು ಪತ್ರಿಕೋದ್ಯಮಕ್ಕೆ ಬಂದ ಆರಂಭದ ದಿನದಿಂದ ಈವರೆಗೆ ಇಂಥ ಪ್ರಶ್ನೆ ಮತ್ತೊಬ್ಬ ರಾಜಕಾರಣಿಗೆ ಕೇಳಲು ಹೋಗಿಲ್ಲ; ಅವರೆಲ್ಲ ಕಂಡವರ ಹೆಬ್ಬೆರಳೋ, ರಕ್ತವೋ ಬಲಿ ಪಡೆದು ಬೆಳೆದವರು…

ಆಗುವುದೆಲ್ಲ ಒಳ್ಳೇದಕ್ಕೆ ಅಂತಾರೆ ಜನಪದರು…ಪೂರ್ಯಾನಾಯ್ಕರಂಥ ಮುತ್ಸದ್ದಿ ಸಿಗಲು ಸಾಧ್ಯವಿರಲಿಲ್ಲ. ಆದರೆ, ಸಾವು ಅದಕ್ಕೆ ಅವಕಾಶ ಕೊಡದೇ ಶಾರದಕ್ಕನ ಹೆಗಲಿಗೆ ಶಾಸಕ ಸಂಭ್ರಮ ಕಟ್ಟಿತು…ಹೋರಾಟದ ಬದುಕೇನೆಂಬುದನ್ನು ರಾಜಕಾರಣ ದ ಸ್ಥಿತ್ಯಂತರಗಳು ಶಾರದಾ ಪೂರ್ಯಾನಾಯ್ಕರನ್ನು ಬೆಳೆಸುತ್ತಿವೆ…ಪೂರ್ಯಾನಾಯ್ಕರ ಕೊರತೆ ಶಾದರಮ್ಮನ ಮೂಲಕ ಪೂರ್ಣವಾಗುತ್ತಿದೆ.

ಪೂರ್ಯಾನಾಯ್ಕರ ಪ್ರೀತಿಯಲ್ಲಿ ನೆನೆದಿದ್ದ ನಾನು ಒಂದಿಷ್ಟು ದಾಖಲಿಸಿದ್ದೇನೆ…ಅವರ ಸಾವು ಕೂಡ ಅನುಮಾನಾಸ್ಪದ ಎಂಬ ಚರ್ಚೆಗೆ ಒಳಗಾಗಿ ಆಮೇಲೆ ತಣ್ಣಗಾಗಿ ಹೋಯ್ತು…

– *ಶಿ.ಜು.ಪಾಶ*