*ಶಿವಮೊಗ್ಗ ತುಂಗಾ ಹೊಳೆ ನೂತನ ಸೇತುವೆ ನಿರ್ಮಾಣಕ್ಕೆ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡದಿಂದ ಮನವಿ* *ನಿರ್ಮಾಣಕ್ಕೆ 40 ಕೋಟಿ ರೂ., ಮೀಸಲಿಡುವ ಭರವಸೆ ನೀಡಿದ ಲೋಕೋಪಯೋಗಿ ಸಚಿವರು*

*ಶಿವಮೊಗ್ಗ ತುಂಗಾ ಹೊಳೆ ನೂತನ ಸೇತುವೆ ನಿರ್ಮಾಣಕ್ಕೆ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡದಿಂದ ಮನವಿ*

*ನಿರ್ಮಾಣಕ್ಕೆ 40 ಕೋಟಿ ರೂ., ಮೀಸಲಿಡುವ ಭರವಸೆ ನೀಡಿದ ಲೋಕೋಪಯೋಗಿ ಸಚಿವರು*

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್. ಸಿ. ಯೋಗೇಶ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿರವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ತುಂಗಾ ಹೊಳೆ ಸೇತುವೆಯ ಸಮಸ್ಯೆ ಬಗ್ಗೆ ಮಾತಾಡಿದ್ದು, ಸಚಿವರು ಕೂಡಲೇ 40 ಕೋಟಿ ರೂ., ಬಿಡುಗಡೆಗೊಳಿಸಲು ಒತ್ತಾಯಿಸಿದರು.

ಶಿವಮೊಗ್ಗ ನಗರಕ್ಕೆ ಮಹಾದ್ವಾರವಾಗಿರುವ ತುಂಗಾ ನದಿ ಸೇತುವೆ ಸುಮಾರು ನೂರು ವರ್ಷಗಳಾಗಿದ್ದು, ಈ ಒಂದು ಸೇತುವೆಗೆ ಇದರದ್ದೇ ಆದ ಇತಿಹಾಸವು ಇದೆ. ಅಂದಿನ ಮಹಾರಾಜರುಗಳಿಂದ ಹಿಡಿದು ಈಗಲೂ ಸಹ ಸುಮಾರು ಕೋಟ್ಯಂತರ ಜನರು ಈ ಸೇತುವೆ ಮೇಲೆ ಓಡಾಡಿದ್ದಾರೆ. ಇದುವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಅನಾಹುತಗಳು ಸಹ ಆಗಿರುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಶಿವಮೊಗ್ಗ ನಗರದಲ್ಲಿನ ತುಂಗಾ ಹೊಳೆಯನ್ನು ದಾಟಿ ಬೇರೆ ಬೇರೆ ನಗರಗಳಿಗೆ ಸಂಪರ್ಕ ಒದಗಿಸಿ ಪ್ರಯಾಣಿಸಲು ಅನುಕೂಲವಾಗಿದೆ. ಮಳೆಗಾಲದಲ್ಲಿ ಬಾಗಿನ ಬಿಡುವುದು, ಪೂಜೆಗಳನ್ನು ನೆರವೇರಿಸಿದ್ದು ಸಹ ಇದೆ. 2019ರ ಸಂದರ್ಭದಲ್ಲಿ ಆದಂತಹ ಭಾರಿ ಮಳೆಗೆ ಈ ಸೇತುವೆಯ ಬಹಳಷ್ಟು ಭಾಗ ತೊಂದರೆಯಾಗಿದ್ದು, ತಾತ್ಕಾಲಿಕವಾಗಿ ಆ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಾಮಗಾರಿ ಮಾಡಲಾಗಿತ್ತು. ಶಿವಮೊಗ್ಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ನೂತನ ಉದ್ಯಮಗಳು ಪ್ರಾರಂಭವಾಗಿವೆ. ಜನರ ಹೋರಾಟವು ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಈ ಸೇತುವೆ ಮೇಲೆ ಓಡಾಡಲು ತೊಂದರೆಯಾಗುತ್ತಿದೆ. 2026–27ನೇ ಸಾಲಿನಲ್ಲಿ ಸುಮಾರು 2,000 ಕೋಟಿ ರೂಪಾಯಿಗಳನ್ನು ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣಕ್ಕೆಂದು ಇಟ್ಟಿರುವ ಹಣದಲ್ಲಿ ಹೊಸ ಶಿವಮೊಗ್ಗದ ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 40 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ನಿರ್ಮಿಸಬೇಕೆಂದು ಒತ್ತಾಯಿಸಿದರು.

ಈ ಹಣವನ್ನು ಬಿಡುಗಡೆಗೊಳಿಸಿ ತಕ್ಷಣ ಈ ಕಾಮಗಾರಿಗೆ ಚಾಲನೆ ನೀಡಬೇಕಾಗಿ ಹಾಗೂ ಪ್ರಮುಖ ಆದ್ಯತೆಯನ್ನು ನೀಡಬೇಕು. ಭಾರೀ ವಾಹನಗಳು ಈಗಿರುವ ಸೇತುವೆಯಲ್ಲಿ ಓಡಾಡಲು ಸಾಧ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ವಿವರಿಸಿ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಶಿವಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ, ಜಾಮಿಯಾ ಮಸೀದಿ ಅಧ್ಯಕ್ಷರಾದ ಮುನಾವರ್ ಪಾಷ, ಮಧುಸೂದನ್ ಉಪಸ್ಥಿತರಿದ್ದರು.