*ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 5 ಯುವಕರ ಮೇಲೆ ಪೊಲೀಸ್ ದಾಳಿ* *ಶಿವಮೊಗ್ಗದ ಆರ್ ಎಂ ಸಿ ಆವರಣದಲ್ಲಿ ಘಟನೆ*

*ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 5 ಯುವಕರ ಮೇಲೆ ಪೊಲೀಸ್ ದಾಳಿ*

*ಶಿವಮೊಗ್ಗದ ಆರ್ ಎಂ ಸಿ ಆವರಣದಲ್ಲಿ ಘಟನೆ*

ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರು ಯುವಕರ ಮೇಲೆ ದಾಳಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುರುವಾರದಂದು ರಾತ್ರಿ ಶಿವಮೊಗ್ಗದ *ಆರ್‌ಎಂಸಿ ಯಾರ್ಡ್‌ ಹತ್ತಿರ ಕಾರಿನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌* ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪಿಎಸ್‌ಐ ವಿನೋಬನಗರ ಪೊಲೀಸ್‌ ಠಾಣೆ ರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದರು.
*5 ಜನ ಯುವಕರು ಕ್ರಿಕ್‌ ಲೈನ್‌ ಗುರು ಎಂಬ ಮೊಬೈಲ್‌ ಅಪ್ಲಿಕೇಷನ್‌* ಮುಖಾಂತರ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಆಡುತ್ತಿದ್ದರು.

ನಂತರ ಈ ಆರೋಪಿತರನ್ನು ದಸ್ತಗಿರಿ ಮಾಡಿ, *ಅವರಿಂದ 35,000/- ರೂ ನಗದು ಹಣ, 7 ಮೊಬೈಲ್‌, XUV 300 ಕಾರ್‌ U/s-112 BNS &U/s 78(1)(a)(vi) KP Act ರೀತ್ಯಾ* ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.