ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ* *ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ* *300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!* *ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ*

*ತೀರ್ಥಹಳ್ಳಿ ಮಹಿಷಿ ಮಠ ದರೋಡೆ ಪ್ರಕರಣ*

*ಪ್ರಮುಖ ಆರೋಪಿ ಸೇರಿ ಒಟ್ಟು 12 ಜನ ದರೋಡೆಕೋರರ ಬಂಧನ*

*300 ಕೋಟಿ ₹ ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000₹ ಮಾತ್ರ!*

*ಒಂಭತ್ತು ಜನ ದರೋಡೆಕೋರರ ಬಂಧನ ಬಾಕಿ*

ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದ ಉತ್ತರಾದಿ ಮಠದ ಮೇಲೆ ಸಂಚು ರೂಪಿಸಿ ದಾಳಿ ಮಾಡಿ ಹಣ ದರೋಡೆ ಮಾಡಿದ್ದ ಸುಮಾರು 15 ಜನ ದರೋಡೆಕೋರರಲ್ಲಿ 12 ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ಎಸ್ ಪಿ. ಮಿಥುನ್ ಕುಮಾರ್ ಹೇಳಿದರು.

ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಬಂಧಿತರ ವಿವರ ಹಾಗೂ ಆದ ದರೋಡೆಯ ವಿವರ ನೀಡಿದರು.

ಏಪ್ರಿಲ್ 5 ರಂದು ರಾತ್ರಿ 09-45 ರ ಸುಮಾರಿಗೆ ಮಠಕ್ಕೆ ಸುಮಾರು 12ರಿಂದ 15 ಜನ ದರೋಡೆಕೋರರ ತಂಡ ದಾಳಿ ಮಾಡಿತ್ತು. ಮಠದಲ್ಲಿದ್ದ ಉಸ್ತುವಾರಿ ಕುಮಾರ ಆಚಾರ್ಯ ಮತ್ತು ಮಠದಲ್ಲಿದ್ದವರಿಗೆ ಹೆದರಿಸಿ, ಹಲ್ಲೆ ಮಾಡಿ ಮಠದಲ್ಲಿದ್ದ 50,000₹ ನಗದು, ಸಿಸಿಟಿವಿ ಡಿವಿಆರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿತ್ತು. ಈ ಬಗ್ಗೆ ಮಾಳೂರು ಠಾಣೆಯಲ್ಲಿ ಗುನ್ನೆನಂ. 45/0925 ಕಲಂ 3294 324(4), 352, 18(1). 351(2) ಬಿ.ಎನ್.ಎಸ್ ರೀತ್ಯಾ ದಾಖಲಾಗಿತ್ತು.

ಪತ್ತೆಕಾರ್ಯಕ್ಕೆ 4 ತಂಡಗಳನ್ನು ರಚಿಸಿದ್ದು, ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಈಗಾಗಲೇ 12 ಜನ ಆರೋಪಿತರನ್ನು ಬಂಧಿಸಿದೆ. 21 ಜನ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

ಸುರೇಶ@ ನೇರಲೆ ಸುರೇಶ, ಸತೀಶ @ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ @ ಶ್ರೀಕಾಂತ, ಅಭಿಲಾಷ್ @ ಅಭಿ, ರಾಕೇಶ, ಭರತ @ ಚಿಟ್ಟೆ, ಪವನ @ ಗಿಡ್ಡ ಪವನ್, ರಮೇಶ್ @ ನವೀನ್, ನವೀನ್ ಕುಮಾರ್ @ ಡೈಮಂಡ್ ನವೀನ್, ದರ್ಶನ್, ಕರಿಬಸಪ್ಪ ಆರ್ ರವರನ್ನು ಬಂಧಿಸಲಾಗಿದೆ.

ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿತನಾದ ಶ್ರೀನಿವಾಸ @ ಸೀನನನ್ನು ವಶಕ್ಕೆ ಪಡೆಯಲು ಹೋದ ಮಾಳೂರು ಪಿಎಸ್ ಐ ಕುಮಾರ್ ಕೂರಗುಂದ ಮತ್ತು ಸಿಬ್ಬಂದಿ ಸಂತೋಷ್ ಕುಮಾರ್ ಮೇಲೆ ಮಚ್ಚು ಬೀಸಿ ಗಾಯಗೊಳಿಸಿದ. ಆಗ, ಆತ್ಮರಕ್ಷಣೆಗಾಗಿ ಕುಮಾರ್ ಗುಂಡು ಹಾರಿಸಿದ್ದು, ಆರೋಪಿ ಕಾಲಿಗೆ ಗುಂಡು ತಾಕಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

ಶಿಕಾರಿಪುರ, ಆನಂದಪುರ, ಹೊಸನಗರ ವಾಸಿಗಳೇ ಈ ಆರೋಪಿಗಳಾಗಿದ್ದಾರೆ ಎಂದು ಎಸ್ ಪಿ ಮಿಥುನ್ ಕುಮಾರ್ ವಿವರಿಸಿದರು.

ವಶಕ್ಕೆ ಪಡೆದಿದ್ದು;
1) ಕೆಎ-51-ಎಜಿ-5604 ನೊಂದಣಿ ಸಂಖ್ಯೆಯ ಆಟ ವಾಹನ, ಅಂದಾಜು ಮೌಲ್ಯ 1 ಲಕ್ಷ ರೂಪಾಯಿ

2) ಕೆಎ-01-ಎಂಜಿ-2700 ನೊಂದಣಿ ಸಂಖ್ಯೆಯ ಮಹೀಂದ್ರ ಸ್ಥಾರ್ಪಿಯೋ ಕಾರು ಅಂದಾಜು ಮೌಲ್ಯ 4 ಲಕ್ಷ ರೂಪಾಯಿ.

3) ಕೃತ್ಯಕ್ಕೆ ಬಳಸಿದ ಆಯುವ ಮತ್ತು ಇನ್ನಿತರ ವಸ್ತುಗಳನ್ನು ವರ ಪಡಿಸಿಕೊಳ್ಳಬೇಕಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ ಪಿ ಕಾರಿಯಪ್ಪ, ತೀರ್ಥಹಳ್ಳಿ ಡಿವೈಎಸ್ ಪಿ ಅರವಿಂದ್ ಉಪಸ್ಥಿತರಿದ್ದರು.