*ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಏನೇನಂದ್ರು?* *ಹೈಕಮಾಂಡ್ ಸೂಚಿಸಿದಂತೆ ರಾಜೀನಾಮೆ* *ಅಭಿಮಾನಿಗಳೇ ದೇವರು ಎಂದ ಸಿದ್ದರಾಮಯ್ಯ*
*ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಏನೇನಂದ್ರು?*
*ಹೈಕಮಾಂಡ್ ಸೂಚಿಸಿದಂತೆ ರಾಜೀನಾಮೆ*
*ಅಭಿಮಾನಿಗಳೇ ದೇವರು ಎಂದ ಸಿದ್ದರಾಮಯ್ಯ*
ನಟ ರಾಜಕುಮಾರ್ ಅಭಿಮಾನಿ ದೇವರು ಅಂತಾ ಕರೀತಿದ್ರು, ನಾನು ರಾಜಕಾರಣಿ, ಸಂವಿಧಾನವನ್ನೇ ನಮ್ಮ ಧರ್ಮ ಎಂದು ತಿಳಿದಿದ್ದೇನೆ. ಮತದಾರರೇ ನಮ್ಮ ಅಭಿಮಾನಿ ದೇವರು. ಕನ್ನಡ ನಾಡಿನ ಕರ್ನಾಟಕದ 7 ಕೋಟಿ ಕೋಟಿ ಜನಸಂಖ್ಯೆ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು, ಎರಡು ಬಾರಿ ವಿಪಕ್ಷ ನಾಯಕನಾಗುವ ಅವಕಾಶ ಸಿಕ್ಕಿತ್ತು. ಈ ಅವಕಾಶ ಒದಗಿಸಿಕೊಟ್ಟಿರುವ ಸೋನಿಯಾ ಗಾಂಧಿ ಅವರಿಗೆ ರಾಹುಲ್ ಗಾಂಧಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
*ಹೈಕಮಾಂಡ್ ಸೂಚಿಸಿದಂತೆ ರಾಜೀನಾಮೆ*
ನಾನು ಮೊದಲಿಂದಲೂ ಹೇಳುತ್ತಿದ್ದೆ ಅನೇಕ ಸಾರಿ ಹೊರಗಡೆಯೂ ಹೇಳ್ತಿದ್ದೆ. ಹೈಕಮಾಂಡ್ ಯಾವಾಗ ಸೂಚಿಸ್ತಾರೆ ಆವಾಗ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ಅದರ ಪ್ರಕಾರ ಹೈಕಮಾಂಡ್ ನವರು ರಾಜೀನಾಮೆ ಕೊಡಿ ಅಂತ ಹೇಳಿದ ಮೇಲೆ ರಾಜೀನಾಮೆ ಕೊಟ್ಟಿದ್ದೇನೆ.
*ರಾಜ್ಯಪಾಲರು ಅಂಗೀಕರಿಸಬೇಕು*
ರಾಜ್ಯಪಾಲರು ಬಂದ ಮೇಲೆ ನನ್ನ ಪತ್ರವನ್ನು ಅಂಗೀಕಾರ ಮಾಡ್ತಾರೆ ಅಂತ ಸಂಪೂರ್ಣ ವಿಶ್ವಾಸವಿದೆ. ಸಂವಿಧಾನ ಪ್ರಕಾರ ರಾಜೀನಾಮೆ ಅಂಗೀಕಾರ ಮಾಡಲೇಬೇಕು. ಅವರು ಪ್ರೊಸಿಜರ್ ಏನು ಮಾಡ್ತಾರೆ ಅವರಿಗೆ ಬಿಟ್ಟಿದ್ದು. ಒಂದು ಸಾರಿ ಸಿಎಂ ರಾಜೀನಾಮೆ ನೀಡಿದ ಮೇಲೆ ಅಂಗೀಕಾರ ಮಾಡಿ ಮುಂದಿನ ಮುಖ್ಯ ಮಂತ್ರಿಗೆ ಅವಕಾಶ ಮಾಡಿಕೊಡಬೇಕಾಗಿದ್ದು ಅವರ ಜವಾಬ್ದಾರಿ.
*2006ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ*
2006ರಲ್ಲಿ ನಾನು ಕಾಂಗ್ರೆಸ್ ಸೇರಿದ್ದೆ. 2006ರಿಂದ ಕಾರ್ಯಕರ್ತರು, ಶಾಸಕರು, ಸಂಸದರು ಸೇರಿ ಎಲ್ಲರೂ ಪ್ರೀತಿ ತೋರಿಸಿದ್ದಾರೆ, ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಅವರಿಗೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. 2013ರಿಂದ 18ರವರೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದೆ. ಬಳಿಕ 2023ರಿಂದ ಇಲ್ಲಿವರೆಗೆ ಸಿಎಂ ಆಗಿದ್ದೆ. ಸಿಎಂ ಆಗಿದ್ದಾಗ ನನ್ನ ಜತೆ ಕೆಲಸ ಮಾಡಿದವರು ಸಹಕರಿಸಿದ್ದರು.
*ಕುವೆಂಪು ಹೇಳಿದಂತೆ ಶಾಂತಿಯ ತೋಟ ಆಗಬೇಕು*
ಇಡೀ ಸಮಾಜ ಕುವೆಂಪು ಹೇಳಿದಂತೆ ಶಾಂತಿಯ ತೋಟ ಆಗಬೇಕು ಅಂತ ಬಯಸಿದವನು. ಸಮಾಮತೆಯ ಸಮಾಜ ನಿರ್ಮಾಣ ಆಗಬೇಕು. ಸಮಾನತೆಯ ಅವಕಾಧ ಎಲ್ಲರಿಗೂ ಸಿಗಬೇಕು. ಸಮಾನ ಅವಕಾಶ ಇಲ್ಲದಿರುವುದರಿಂದಲೇ ನಮ್ಮ ಸಮಾಜದಲ್ಲಿ ಅಸಮಾನತೆ ನೋಡುತ್ತಿದ್ದೇವೆ. ಈ ಅಸಮಾನತೆ ತೊಲಗಬೇಕಾದರೆ ಎಲ್ಲರಿಗೂ ಸಮಾನತೆಯ ಅವಕಾಶ ಸಿಗಲೇಬೇಕು ಎಂದರು.
*ಸಹೋದ್ಯೋಗಿಗಳಿಗೆ ಸಿದ್ದರಾಮಯ್ಯ ಧನ್ಯವಾದ*
ನಾನು ಎರಡು ಸಾರಿ ಸಿಎಂ ಆಗಿರುವಾಗ, 2023 ರಿಂದ ಇಲ್ಲಿವರೆಗೆ ಈ ಸಂದರ್ಭದಲ್ಲಿ ನನ್ನ ಜೊತೆಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಅವರೆಲ್ಲ ರೀತಿಯಲ್ಲೂ ಬೆಂಬಲ ಸಹಕಾರವನ್ನು ಪ್ರೀತಿ ನನ್ನ ಮೇಲೆ ವ್ಯಕ್ತ ಮಾಡಿದ್ದಾರೆ. ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.


