ರಾಜ್ಯಾದ್ಯಂತ ಉಚಿತ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ;ಮನೀಶ್ ಸುತ್ರಾವೆ
ರಾಜ್ಯಾದ್ಯಂತ ಉಚಿತ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ;ಮನೀಶ್ ಸುತ್ರಾವೆ

ಶಿವಮೊಗ್ಗ : ಬಿವಿಐ ಕುಟುಂಬ ಸದಸ್ಯರಿಗೆ ಹಾಗೂ ಭಾವಸಾರರ ಆರೋಗ್ಯದ ದೃಷ್ಟಿಯಿಂದ ವಿನೂತನವಾಗಿ ರಾಜ್ಯಾದ್ಯಂತ ಉಚಿತವಾಗಿ ಲಿವರ್ ಫೈಬ್ರೋ ಸ್ಕ್ಯಾನಿಂಗ್ ಶಿಬಿರ ನಡೆಸಲಾಗುತ್ತಿದೆ ಎಂದು ಬಿವಿಐ ರಾಷ್ಟ್ರೀಯ ಅಧ್ಯಕ್ಷ ಮನೀಶ್ ಸುತ್ರಾವೆ ಹೇಳಿದರು.
ರಾಷ್ಟ್ರೀಯ ಮೆಗಾ ಯೋಜನೆ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅವರು, ಲಿವರ್ ಪರೀಕ್ಷಾ ಶಿಬಿರ ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ನಮ್ಮ ಬಿವಿಐ ನ ಮೆಗಾ ರಾಷ್ಟ್ರೀಯ ಯೋಜನೆ ಅನುಕರಣೀಯವಾಗಿದ್ದು, ಅತ್ಯಾಧುನಿಕ ಹಾಗೂ ಅಧಿಕ ವೆಚ್ಚ ತಗಲುವ ಈ ಪರೀಕ್ಷೆ ಉಚಿತವಾಗಿ ಆಯೋಜಿಸಿರುವುದಕ್ಕೆ ರೋಟರಿ ಸೇರಿದಂತೆ ಹಲವು ಸಂಸ್ಥೆಗಳು ಮೆಚ್ಚುಗೆ ಸೂಚಿಸಿರುವುದು ಹೆಮ್ಮೆಯ ವಿಷಯ ಎಂದರು.
ಬಿವಿಐ ಸಂಸ್ಥೆ ಒಂದು ರಾಷ್ಟ್ರೀಯ ಸಂಸ್ಥೆಯಾಗಿದ್ದು, ನಿರಂತರ ಸೇವಾ ಚಟುವಟಿಕೆಗಳೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.
8 ಸಾವಿರದಿಂದ 10,000/- ವೆಚ್ಚ ತಗಲುವ ಈ ಸ್ಕ್ಯಾನಿಂಗ್ ಟೆಸ್ಟ್, ನುರಿತ ತಜ್ಞರಿಂದ ನಮ್ಮ ಬಿವಿಐ ಸದಸ್ಯರಿಗೆ ಹಾಗು ಅವರ ಕುಟುಂಬದ ಸದಸ್ಯರಿಗೆ ಉಚಿತ ಪರೀಕ್ಷೆ ನಡೆಸಲಾಗಿದೆ. ನಮ್ಮ ಸಮಾಜದ ಹಿರಿಯ ನಾಗರಿಕರು ಇದರ ಲಾಭ ಪಡೆದುಕೊಂಡಿದ್ದಾರೆ. ಇವೆಲ್ಲವೂ ಕೂಡ ದೂರದೃಷ್ಟಿ ಇದ್ದರೆ ಮಾತ್ರ ಯೋಜನೆ ಸಫಲವಾಗಲು ಸಾಧ್ಯ ಎಂದರು.
ಅದರಂತೆ ಈ ಬಾರಿಯ ರಾಷ್ಟ್ರೀಯ ಸಮ್ಮೇಳನ ಮೈಸೂರಿನಲ್ಲಿ ನಡೆಯುತಲಿದ್ದು, ವಿನೂತನವಾಗಿ ರೂಪುರೇಷೆ ಸಿದ್ಧಪಡಿಸಿ ಸಮ್ಮೇಳನ ನಡೆಸಲು ಯೋಜಿಸಲಾಗಿದೆ. ಅದರಲ್ಲೂ, ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದೊಂದು ಯಶಸ್ವಿ, ಹಾಗೂ ಅಪರೂಪದ ಸಮ್ಮೇಳನವಾಗಲಿದೆ ಎಂದು ಹೇಳಿದರು.
ಈಗಾಗಲೇ ಬಿವಿಐ ನ ಸದಸ್ಯರು, ಆರೋಗ್ಯದ ಕುರಿತಂತೆ ಉಚಿತ ಶಿಬಿರಗಳು ಸಾಕಷ್ಟು ಪ್ರಮಾಣದಲ್ಲಿ ನಡೆಸಲಾಗುತ್ತಿದ್ದು, ಅರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇದು ಸಹಕಸರಿಯಾಗಿದೆ. ದೇಶದ ಪ್ರಧಾನಿಯವರ ಆಶಯವೂ ಇದೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ಬಿವಿಐ ರಾಷ್ಟ್ರೀಯ ಸಂಚಾಲಕರಾದ ಗಜೇಂದ್ರನಾಥ್ ಮಾಳೋದೆ, ಬಿವಿಐ ರಾಷ್ಟ್ರೀಯ ಕಾರ್ಯದರ್ಶಿ ವಿನಾಯಕ ಡೋಯಿಜೋಡೆ, ಬಿವಿಐ ಕ್ಲಬ್ ಕೋ-ಆರ್ಡಿನೇಟರ್ ಸುನಿಲ್ ಬೇದ್ರೆ, ಏರಿಯಾ-102 ಡೆಪ್ಯುಟಿ ಗವರ್ನರ್ ಪ್ರಭಾಕರ್ ವಂಡ್ಕರ್ ಸೇರಿದಂತೆ ಬಿವಿಐ ಸಂಸ್ಥೆಗಳ ಅಧ್ಯಕ್ಷರು, ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಗೋ.ವ. ಮೋಹನಕೃಷ್ಣ ವಂದಿಸಿದರು.


