*ಮನೆಯಿಂದ 7 ಲಕ್ಷ ರೂ ನಗದು ಕದ್ದಿದ್ದ ಟಿಪ್ಪುನಗರದ ಇಬ್ಬರು ಕಳ್ಳರ ಬಂಧನ* *ಪಿಎಸ್ ಐ ತಿರಲೇಶ್ ತಂಡದ ಮತ್ತೊಂದು ಸಾಧನೆ*

*ಮನೆಯಿಂದ 7 ಲಕ್ಷ ರೂ ನಗದು ಕದ್ದಿದ್ದ ಟಿಪ್ಪುನಗರದ ಇಬ್ಬರು ಕಳ್ಳರ ಬಂಧನ*

*ಪಿಎಸ್ ಐ ತಿರಲೇಶ್ ತಂಡದ ಮತ್ತೊಂದು ಸಾಧನೆ*

ಮನೆಯೊಂದಕ್ಕೆ ನುಗ್ಗಿ 7 ಲಕ್ಷ ರೂ., ಹಣ ಕದ್ದಿದ್ದ ಶಿವಮೊಗ್ಗದ ಟಿಪ್ಪುನಗರ ಎಡಭಾಗದ ಯುವಕರಿಬ್ಬರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.

ಕಾಶಿಪುರದ ಲಕ್ಕಪ್ಪ ಲೇಔಟಿನ ಎರಡನೇ ಕ್ರಾಸಿನಲ್ಲಿರೋ ಮನೆಗೆ ನುಗ್ಗಿದ್ದ ಮೊಹಮ್ಮದ್ ಸಲೀಂ(27) ಮತ್ತು ಮೊಹಮ್ಮದ್ ರಝಾಖ್ ನನ್ನು ಬಂಧಿಸಿದ ಪೊಲೀಸರು, ಕಳವು ಮಾಡಿದ ಹಣದಲ್ಲಿ 5.13 ಲಕ್ಷ ರೂ.,ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ ಪಿ ನಿಖಿಲ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಸಂಜೀವ್ ಕುಮಾರ್ ರವರ ನೇತೃತ್ವದಲ್ಲಿ ಸಿಪಿಐ ಸಂತೋಷ್ ಕುಮಾರ್ ಉಸ್ತುವಾರಿಯಲ್ಲಿ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ನೇತೃತ್ವದ ತಂಡ ಈ ಕಳ್ಳರನ್ನು ಬಂಧಿಸಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆಗಳಾದ ಕೆ.ಆರ್.ರಾಜು, ಚಂದ್ರಾನಾಯ್ಕ, ಎಸ್ ಜಿ ಮಲ್ಲಪ್ಪ, ಎನ್ ಕೆ ಅರುಣ ಕುಮಾರ್, ಮನುಶಂಕರ ಪಾಲ್ಗೊಂಡಿದ್ದರು.