*ಮಧು ಬಂಗಾರಪ್ಪ ಹೆಸರು ಎರಡೂ ಪಟ್ಟಿಗಳಲ್ಲಿ!* *ಸಿದ್ದರಾಮಯ್ಯ- ಡಿಕೆಶಿ ಇಬ್ಬರ ಪಟ್ಟಿಯಲ್ಲೂ ಮಧು ಬಂಗಾರಪ್ಪ ಇದ್ದಾರೆ!* *ಬಂದೀಖಾನೆ ಸಚಿವರಾಗಲಿದ್ದಾರಾ ಮಧು ಬಂಗಾರಪ್ಪ?*

*ಮಧು ಬಂಗಾರಪ್ಪ ಹೆಸರು ಎರಡೂ ಪಟ್ಟಿಗಳಲ್ಲಿ!*

*ಸಿದ್ದರಾಮಯ್ಯ- ಡಿಕೆಶಿ ಇಬ್ಬರ ಪಟ್ಟಿಯಲ್ಲೂ ಮಧು ಬಂಗಾರಪ್ಪ ಇದ್ದಾರೆ!*

*ಬಂದೀಖಾನೆ ಸಚಿವರಾಗಲಿದ್ದಾರಾ ಮಧು ಬಂಗಾರಪ್ಪ?*

ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ ಅಚ್ಚರಿಯ ವಿಷಯವೊಂದು ಬಹಿರಂಗವಾಗಿದೆ!

ಶಿಕ್ಷಣ ಸಚಿವರಾಗಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಪಾದರಸದಂತೆ ಕೆಲಸ ಮಾಡಿದ ಎಸ್.ಮಧು ಬಂಗಾರಪ್ಪ ರವರ ಹೆಸರು ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಬ್ಬರ ಪಟ್ಟಿಯಲ್ಲೂ ಇದೆ! ಹಾಗಂತ ಮೂಲಗಳು ಹೇಳುತ್ತಿವೆ…

ಮಧು ಬಂಗಾರಪ್ಪರವರನ್ನು ಕೈಬಿಟ್ಟು ಬೇರೆಯವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂತ್ರಿ ಪಟ್ಟ ನೀಡಲಾಗುತ್ತಿದೆ ಎಂಬ ಊಹಾಪೋಹಗಳ ನಡುವೆ ಈ ಸುದ್ದಿ ಹೊಸ ಚರ್ಚೆಗೆ ಗ್ರಾಸವಾಗುತ್ತಿದೆ.

ಸಿದ್ದರಾಮಯ್ಯರ ಸಂಪುಟದಲ್ಲಿದ್ದು ಯಶಸ್ವಿಯಾಗಿ ಶಿಕ್ಷಣ ಕ್ಷೇತ್ರವನ್ನು ನಿಭಾಯಿಸಿ, ಹಲವು ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣಕರ್ತರಾಗಿರುವ ಮಧು ಬಂಗಾರಪ್ಪರವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಮಾಡಲಿದ್ದಾರೆಂಬ ಚರ್ಚೆಗಳು ರೆಕ್ಕೆಪುಕ್ಕ ಕಟ್ಟಿಕೊಂಡಿದ್ದವು.

ಇದೀಗ ದೆಹಲಿ ಮೂಲಗಳು ಬೇರೆಯದನ್ನೇ ಹೇಳುತ್ತಿವೆ… ಮಧು ಬಂಗಾರಪ್ಪರವರಿಗೆ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ವರವಾಗಿ ಪರಿಣಮಿಸಲಿದ್ದಾರೆ.

ಡಿಕೆಶಿ ಮೊದಲಿಗೆ ಮಂತ್ರಿಯಾಗಿದ್ದೇ ಬಂಗಾರಪ್ಪ ಸಿಎಂ ಆಗಿದ್ದಾಗ. ಅದೂ, ಬಂದೀಖಾನೆ ಸಚಿವರಾಗಿ ಇದೀಗ ಸಿಎಂ ಪಟ್ಟದವರೆಗೆ ಬಂದಿದ್ದಾರೆ.

ಇಂಥ ಗುರು ಬಂಗಾರಪ್ಪರನ್ನು ಪದೇ ಪದೇ ನೆನಪು ಮಾಡಿಕೊಳ್ಳುವ ಡಿಕೆಶಿ ಅವರ ಮಗ ಮಧು ಬಂಗಾರಪ್ಪರವರಿಗೆ ಬಂದೀಖಾನೆ ಸಚಿವ ಮಾಡುವ ಆಶ್ಚರ್ಯಭರಿತ ಸಂಭವಗಳೂ ಇವೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ಯಾರು ಮಂತ್ರಿಗಳಾಗಬೇಕೆಂದು ಹೈಕಮಾಂಡಿಗೆ ಪಟ್ಟಿ ಕೊಟ್ಟಿದ್ದಾರೋ ಆ ಎರಡೂ ಪಟ್ಟಿಗಳಲ್ಲಿ ಮಧು ಬಂಗಾರಪ್ಪ ಹೆಸರಿದೆ ಅನ್ನೋದೇ ವಿಶೇಷ ಮತ್ತು ಕುತೂಹಲದ ವಿಷಯ!

*(ಒಬ್ಬರು ಕೊಡುವ ಪಟ್ಟಿಯಲ್ಲೇ ಹೆಸರು ಕಾಣಿಸಿಕೊಳ್ಳುವುದು ಪರಮಾಶ್ಚರ್ಯವಾಗಿರುವ ಈ ಸಂದರ್ಭದಲ್ಲಿ!)*

ಯಾವುದಕ್ಕೂ ಕಾದು ನೋಡೋಣ…