*ಮೂರು ಜನ ಬುರ್ಖಾಧಾರಿ ಗಂಡಸರು ಮಹಿಳೆಯೊಬ್ಬರ ಕೊಲೆ ಮಾಡಲೆಂದೇ ಬಂದಿದ್ದರಾ?* *ಕುಖ್ಯಾತ ರೌಡಿಯ ಪತ್ನಿಯನ್ನು ಕೊಲ್ಲಲೆಂದು ಬಂದವರಾ?* *ಊಹಾಪೋಹಗಳಿಗೆ ಪರದೆ ಬೀಳಿಸುತ್ತಾರಾ ತನಿಖೆ ನಡೆಸುತ್ತಿರುವ ದೊಡ್ಡಪೇಟೆ ಪೊಲೀಸರು?*

*ಮೂರು ಜನ ಬುರ್ಖಾಧಾರಿ ಗಂಡಸರು ಮಹಿಳೆಯೊಬ್ಬರ ಕೊಲೆ ಮಾಡಲೆಂದೇ ಬಂದಿದ್ದರಾ?*

*ಕುಖ್ಯಾತ ರೌಡಿಯ ಪತ್ನಿಯನ್ನು ಕೊಲ್ಲಲೆಂದು ಬಂದವರಾ?*

*ಊಹಾಪೋಹಗಳಿಗೆ ಪರದೆ ಬೀಳಿಸುತ್ತಾರಾ ತನಿಖೆ ನಡೆಸುತ್ತಿರುವ ದೊಡ್ಡಪೇಟೆ ಪೊಲೀಸರು?*

ಶಿವಮೊಗ್ಗದ ಕೆ.ಆರ್.ಪುರಂ ರಸ್ತೆಯಲ್ಲಿ ಮೂರು ಜನ ಬುರ್ಖಾಧಾರಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳರೆಂದು ಭಾವಿಸಿ ಧರ್ಮದೇಟು ಹಾಕಿದ ಘಟನೆ ಬುಧವಾರ ಸಂಜೆ ನಡೆದಿದೆ.

ಮೂವರು ಯುವಕರು ಬುರ್ಖಾ ಧರಿಸಿಕೊಂಡು ಕೆ.ಆರ್.ಪುರಂ ರಸ್ತೆ ಸುತ್ತಮುತ್ತ ಓಡಾಡುತ್ತಿದ್ದರು. ಅಲ್ಲಿಯೇ ಇದ್ದ ಸಾರ್ವಜನಿಕರು ಇವರ ಚಲನವಲನದ ಮೇಲೆ ಅನುಮಾನಗೊಂಡು, ಮಕ್ಕಳ ಕಳ್ಳರೆಂದು ಭಾವಿಸಿ ಹಿಡಿದುಕೊಂಡು ವಿಚಾರಣೆ ಆರಂಭಿಸಿದರು. ಅವರ ಬುರ್ಖಾ ಕಳಚಿದಾಗ ಯುವಕರ ಮುಖ ಕಂಡು ಕ್ರೋಧಿತರಾದ ಸಾರ್ವಜನಿಕರು ಆ ಮೂರೂ ಅನುಮಾನಾಸ್ಪದ ಯುವಕರು ಮಕ್ಕಳ ಕಳ್ಳರೆಂದೇ ಭಾವಿಸಿ ಧರ್ಮದೇಟು ಹಾಕಿದ್ದಾರೆ.

ವಿಷಯ ತಿಳಿದ ದೊಡ್ಡಪೇಟೆ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಕೈಯಿಂದ ಮೂವರು ಯುವಕರನ್ನು ಬಿಡಿಸಿ, ತಮ್ಮ ವಶಕ್ಕೆ ತೆಗೆದೊಯ್ದಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಈ ಯುವಕರ ವಿಚಾರಣೆ ನಡೆಯುವ ಹೊತ್ತಲ್ಲೇ, ಮತ್ತೊಂದು ವಿಚಾರ ಚರ್ಚೆಗೊಳಗಾಗಿದೆ. ಅವರು ಮಕ್ಕಳ ಕಳ್ಳರಲ್ಲ, ಜೈಲಲ್ಲಿರುವ ಕುಖ್ಯಾತ ರೌಡಿಯ ನಿರ್ದೇಶನದ ಮೇರೆಗೆ ಶಿವಮೊಗ್ಗದಲ್ಲಿರುವ ಆತನ ಪತ್ನಿಯನ್ನೇ ಕೊಲ್ಲಲೆಂದು ಬಂದವರೆಂಬ ಚರ್ಚೆಗಳಿದ್ದರೂ ಪೊಲೀಸರು ಇನ್ನೂ ಏನೆಂದು ವಿಚಾರ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ…