*ಕವಿಸಾಲು*
(25/06/2026)
1.
ಜೀವವಿದ್ದವರು ಹೋಗಲಾರರು
ಸತ್ತವರು ಎದ್ದು ಹೇಳಲಾರರು
ಮತ್ಯಾರು ಈ
ಸ್ವರ್ಗ- ನರಕದ ಸಂಶೋಧಕರು?
2.
ಮಳೆ ಬಂದಾಗ
ಅದರ ಹನಿಗಳಲ್ಲಿ ನೀನಿರುತ್ತೀ
ಬಿಸಿಲು ಬಿದ್ದಾಗ
ಅದರ ಕಿರಣಗಳಲ್ಲೂ ನೀನೇ ಕಾಣುತ್ತೀ…
3.
ಇಲ್ಲಿ
ಮಂದಿರ ಮಸೀದಿ ಚರ್ಚುಗಳು
ತುಂಬಿತುಳುಕುತ್ತಿವೆ…
ಸ್ವರ್ಗವೋ
ಸ್ಮಶಾನ ಮೌನ!
– *ಶಿ.ಜು.ಪಾಶ*
8050112067