*ಸರ್ಕಾರಿ ಭೂಮಿ ಕಳ್ಳರು; ಭಾಗ 1 ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆಯ ಅಭಿನಂದನ್, ರಘು, ವಿನಯ್, ಚಂದ್ರಕಲಾ, ಸಹನಾ ಕಥೆ ಏನು? ಮತ್ತೆಲ್ಲೆಲ್ಲಿ ನಡೆದಿದೆ- ನಡೆಯುತ್ತಿದೆ ಸರ್ಕಾರಿ ಭೂಮಿ ಲಪಟಾಯಿಸುವ ಕಳ್ಳಾಟ? ಸುಳ್ಳು ದಾಖಲೆಗಳ ಸೃಷ್ಟಿಯ ಹಿಂದಿದೆ ಮಹಾ ಚೋರರು!
*ಸರ್ಕಾರಿ ಭೂಮಿ ಕಳ್ಳರು; ಭಾಗ 1
ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆಯ ಅಭಿನಂದನ್, ರಘು, ವಿನಯ್, ಚಂದ್ರಕಲಾ, ಸಹನಾ ಕಥೆ ಏನು?
ಮತ್ತೆಲ್ಲೆಲ್ಲಿ ನಡೆದಿದೆ- ನಡೆಯುತ್ತಿದೆ ಸರ್ಕಾರಿ ಭೂಮಿ ಲಪಟಾಯಿಸುವ ಕಳ್ಳಾಟ? ಸುಳ್ಳು ದಾಖಲೆಗಳ ಸೃಷ್ಟಿಯ ಹಿಂದಿದೆ ಮಹಾ ಚೋರರು!

ಶಿವಮೊಗ್ಗ ತಾಲ್ಲೂಕು ಕಚೇರಿ ಹಣ, ಸರ್ಕಾರಿ ಭೂಮಿ ಕೊಳ್ಳೆ ಹೊಡೆಯುವವರ ಸ್ವರ್ಗವಾಗುತ್ತಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಈ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ಮಾಡಿದ್ದು ಗೋವಿಂದಾಪುರದ ಸರ್ಕಾರಿ ಜಮೀನಿನ ಲೂಟಿಗೆ ಸಂಬಂಧಿಸಿದ್ದಾದರೂ ಬಹಳಷ್ಟು ಪ್ರಕರಣಗಳು ದಾಖಲೆಗಳ ಸಮೇತ ಹೊರಬೀಳುತ್ತಿವೆ!
ಸರ್ಕಾರಿ ಜಮೀನುಗಳನ್ನು ಇದೇ ತಹಶೀಲ್ದಾರ್ ಕಚೇರಿಯಲ್ಲಿರುವ ಹೆಗ್ಗಣಗಳೇ ರಿಯಲ್ ಎಸ್ಟೇಟ್ ನ ಕೆಲ ಕ್ರಿಮಿಗಳ ಜೊತೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯಾಪಾರ ಮಾಡುತ್ತಿರುವ ದೊಡ್ಡ ಜಾಲ ಹೊರಕ್ಕೆ ಕಾಣಿಸತೊಡಗಿದೆ.
ಶಿವಮೊಗ್ಗಕ್ಕೆ ತಾಗಿಕೊಂಡೇ ಇರುವ ಸರ್ಕಾರಿ ಜಮೀನುಗಳನ್ನು ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಲೂಟಿ ಮಾಡುವ ಮಾಫಿಯಾ ಅರ್ಧ ಹೊರಕ್ಕಿದ್ದರೆ ಇನ್ನರ್ಧ ಶಿವಮೊಗ್ಗದ ತಾಲ್ಲೂಕು ಕಚೇರಿಯಲ್ಲೇ ಬೀಡುಬಿಟ್ಟಿದೆ, ಅದೂ ಅಧಿಕಾರಿಗಳ ಮುಖವಾಡ ಹೊತ್ತು!!
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ರವರು ನೀಡಿದ ಸರ್ಚ್ ವಾರಂಟ್ ಆಧಾರದ ಮೇಲೆ ಶಿವಮೊಗ್ಗದ ಲೋಕಾಯುಕ್ತ ಪೊಲೀಸರು ಅಗಸವಳ್ಳಿ ಗ್ರಾಮ ಪಂಚಾಯತ್ ಮತ್ತು ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಮೇಲೆ ದಾಳಿ ಮಾಡಿ ಕಡತಗಳನ್ನು ಪರಿಶೀಲಿಸಿದ್ದಾರೆ.
ಸುಮಾರು 20 ಕೋಟಿ ರೂ.,ಗಳ ಮೌಲ್ಯದ 12 ಎಕರೆಯಷ್ಟು ಸರ್ಕಾರಿ ಜಾಗ, ಅಂದರೆ, ಪ್ರತ್ಯೇಕವಾಗಿ 5 ಎಕರೆ, 6ಎಕರೆ ಮತ್ತು 1 ಎಕರೆ ಸರ್ಕಾರಿ ಜಾಗದಲ್ಲಿ ಅಕ್ರಮ ಒತ್ತುವರಿ ಮಾಡಿಕೊಂಡು ಖಾಸಗಿ ವ್ಯಕ್ತಿಗಳ ಮೂಲಕ ಲೇಔಟ್ ಗಳನ್ನು ಸೃಷ್ಟಿಸಿ ಶೆಡ್ ಗಳನ್ನು ನಿರ್ಮಿಸಲಾಗಿದೆ. ಈ ಜಾಗಗಳ ಪಹಣಿಗಳಲ್ಲಿ ಸರ್ಕಾರಿ ಜಾಗವೆಂದೇ ನಮೂದಾಗಿರುವುದನ್ನು ಲೋಕಾಯುಕ್ತ ಪೊಲೀಸರು ಗಮನಿಸಿದ್ದಾರೆಂದು ತಿಳಿದು ಬಂದಿದೆ.
ಈಗ ಭಯಾನಕ ಸುದ್ದಿಯಲ್ಲಿರುವುದು ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿನಂದನ್, ರಘು, ವಿನಯ್, ಚಂದ್ರಕಲಾ, ಸಹನಾ…
ಇಲ್ಲಿರುವ ಕೆಲವರ ಹೆಸರಿಗೆ, ಅವರ ಫೋನ್ ಪೇ ನಂಬರುಗಳಿಗೆ ನಕಲಿ ದಾಖಲೆ ಸೃಷ್ಟಿಗೋ, ಲಂಚ ಕೇಳಿದ್ದೋ ಹಣ ಓಡಾಡಿದೆ ಎಂಬುದು ಸುಳ್ಳೇನಾಗಿ ಉಳಿದಿಲ್ಲ…
ಶಿವಮೊಗ್ಗ ನಗರದ ಸುತ್ತಮುತ್ತಲೇ ಇರುವ ಸರ್ಕಾರಿ ಜಾಗಗಳನ್ನು ಗುರುತು ಮಾಡಿಕೊಳ್ಳುವುದು, ಆ ಜಾಗಗಳಿಗೆ ಸಂಬಂಧಿಸಿದಂತೆ ಫೈಲ್ ತಯಾರಿಸಿಕೊಂಡು ಭೂ ಸುರಕ್ಷಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಂಪೂರ್ಣ ನಕಲಿ ದಾಖಲೆಗಳನ್ನೇ ಅಸಲಿ ಮಾಡಿಬಿಡುವ ಚಮತ್ಕಾರಗಳು ಇಲ್ಲಿ ಹಗಲು ರಾತ್ರಿ ನಡೆಯುತ್ತಿವೆ. ಒಬ್ಬನಂತೂ ಇದೇ ಹೇರಾಪೇರಿ ಹಣದಿಂದ ಬಂಗಲೆ ನಿರ್ಮಿಸುತ್ತಿದ್ದಾನೆಂಬುದು ಸುಳ್ಳೇನಲ್ಲ…
ಮತ್ತೆಲ್ಲೆಲ್ಲಿ ನಡೆದಿದೆ- ನಡೆಯುತ್ತಿದೆ ಸರ್ಕಾರಿ ಭೂಮಿ ಲಪಟಾಯಿಸುವ ಕಳ್ಳಾಟ? ಸುಳ್ಳು ದಾಖಲೆಗಳ ಸೃಷ್ಟಿಯ ಹಿಂದಿದೆ ಮಹಾ ಚೋರರು!
(ಮುಂದಿನ ಸಂಚಿಕೆಗೆ…)


