ವಿಪ್ರ ಸೌಹಾರ್ದ ಸಹಕಾರಿ ಸಂಘದ ನೌಕರರ ವಾರ್ಷಿಕ ಕ್ರೀಡಾಕೂಟ
ವಿಪ್ರ ಸೌಹಾರ್ದ ಸಹಕಾರಿ ಸಂಘದ ನೌಕರರ ವಾರ್ಷಿಕ ಕ್ರೀಡಾಕೂಟ
ವಿಪ್ರ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇವರ ವತಿಯಿಂದ ಶುಕ್ರವಾರ ಆಲ್ಕೋಳದ ವಿಕಾಸ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಸಂಘದ ನೌಕರರ ವಾರ್ಷಿಕ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ನಿರ್ದೇಶಕ ಗುರುರಾಜ್.ಎಂ.ಎಸ್, ಬ್ಯಾಂಕಿನ ಲೆಕ್ಕಾಚಾರದ ನಡುವೆ ಮುಳುಗಿ ಹೋಗುತ್ತಿರುವ ನಮಗೆ ಇಂತಹ ಕ್ರೀಡಾಕೂಟಗಳು ಮಾನಸಿಕ ಉಲ್ಲಾಸವನ್ನು ನೀಡುತ್ತದೆ. ಗ್ರಾಹಕ ಸೇವೆ, ಸಾಲ, ಮರುಪಾವತಿಯ ವಿಷಯಗಳನ್ನ ಇಟ್ಟುಕೊಂಡು ಕಂಪ್ಯೂಟರ್ ಮುಂದೆ ಕುಳಿತಿದ್ದ ನಾವುಗಳು ಈಗ ಮೈದಾನಕ್ಕೆ ಬಂದು ಆಟಗಳನ್ನು ಆಡುವ ಮೂಲಕ ಸಂತೋಷ ಪಡುವುದಲ್ಲದೆ ನಾವು ಕೇವಲ ನೌಕರರಲ್ಲ ನಾವೆಲ್ಲ ಒಂದೇ ಕುಟುಂಬ ಎಂಬ ಮನೋಭಾವನೆಯನ್ನ ಇದು ಮೂಡಿಸುತ್ತದೆ ಎಂದರು.
ಕ್ರೀಡೆಗಳು ಸಾಮರಸ್ಯದ ಜೊತೆಗೆ ದೈಹಿಕಕ ಮತ್ತು ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ. ಕೇವಲ ಮನರಂಜನೆ ಮಾತ್ರವಲ್ಲ ಮಾನಸಿಕ ಉತ್ತೇಜನ ಕೂಡ ನೀಡಿ ಕ್ರಿಯಾಶೀಲತೆ ಮೂಡಿಸಿ ನಮ್ಮ ನಮ್ಮ ದೈನಂದಿನ ಕೆಲಸಗಳಿಗೂ ಸ್ಪೂರ್ತಿ ಆಗುತ್ತದೆ. ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.
ಮತ್ತೋರ್ವ ನಿರ್ದೇಶಕಿ ವಾರಿಜಾ ಜಗದೀಶ್ ಮಾತನಾಡಿ, ಕೆಲಸದ ಒತ್ತಡಗಳ ನಡುವೆ ಈ ಕ್ರೀಡಾಕೂಟಗಳೇ ವಿಶ್ರಾಂತಿ ಇದ್ದಂತೆ ಕ್ರೀಡಾಕೂಟವನ್ನು ಬ್ಯಾಂಕಿನ ಲಾಭ ನಷ್ಟದಂತೆ ನೋಡಬೇಡಿ ಸೋತರು, ಗೆದ್ದರು ಅವರಿಗೆ ಚಪ್ಪಾಳೆ ನೀಡಿ ಹುರಿದುಂಬಿಸಿ. ಈ ಕ್ರೀಡಾಕೂಟಗಳು ಒಂದು ರೀತಿಯಲ್ಲಿ ನಮ್ಮ ಆರೋಗ್ಯದ ಠೇವಣಿ ಇದ್ದಾಗೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಘದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಕ್ರೀಡೆಯಲ್ಲಿ ಒಂದು ರೀತಿಯ ವ್ಯಾಯಾಮ ಸಿಗುತ್ತದೆ. ಮೆದುಳು ಕೂಡ ಚುರುಕಾಗುತ್ತದೆ. ನಾವು ಮೈದಾನದಲ್ಲಿ ಒಂದು ಕುಟುಂಬದವರು ಎಂಬ ಭಾವನೆಯಿಂದ ಆಟ ಆಡಿದರೆ. ಸೋಲು ಗೆಲುವಲ್ಲೂ ಕೂಡ ಸಮಾನವಾಗಿ ಸ್ವೀಕರಿಸುವ ಮನೋಭಾವ ಉಂಟಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಎಸ್.ಎ.ನಾರಾಯಣ ಮೂರ್ತಿ, ಸಿಇಓ ಮಾಲತಿ ಎಂ.ಪಿ, ಆ.ನಾ.ವಿಜಯೇಂದ್ರ ರಾವ್, ಎಸ್.ಜಿ.ಗೋಪಾಲ್ ಸೇರಿದಂತೆ ಹಲವರು ಇದ್ದರು.
ಪ್ರಸ್ತಾವಿಕವಾಗಿ ಮಾಲತಿ ಮಾತನಾಡಿದರು. ಈಶ್ವರಯ್ಯ ಸ್ವಾಗತಿಸಿ, ವಿನಯ್ ನಿರೂಪಿಸಿ, ನೇಹಾ ವಂದಿಸಿದರು.
ಕ್ರೀಡಾಕೂಟದಲ್ಲಿ ಸ್ಕೀಪಿಂಗ್, ಜಾವಲಿಂಗ್, ಮ್ಯೂಸಿಕ್ ಚೇರ್, ಪಾಸಿನಂದ ಬಾಲ್ ಸೇರಿದಂತೆ ಹಲವು ಆಟಗಳಿದ್ದವು. ಕ್ರೀಡೆಗಳು ಬೆಳಿಗ್ಗಿನಿಂದ ಸಂಜೆಯವರೆಗೆ ನಡೆದವು.


