*ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಕಾರ್ಗಲ್ ನತ್ತ ಹೊರಟ ರಾಷ್ಟ್ರಭಕ್ತರ ಬಳಗದ ಬಸ್ ಗಳು…*

*ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಕಾರ್ಗಲ್ ನತ್ತ ಹೊರಟ ರಾಷ್ಟ್ರಭಕ್ತರ ಬಳಗದ ಬಸ್ ಗಳು…*

ಶರಾವತಿ ಪಿಎಸ್‌ಪಿ ವಿರುದ್ಧ ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿರುವ ರಾಷ್ಟ್ರಭಕ್ತರ ಬಳಗ ಅದರ ಭಾಗವಾಗಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ಫ್ರೀಡಂಪಾರ್ಕ್‌ನಿಂದ ಸುಮಾರು 108 ಬಸ್ಸುಗಳ ಮೂಲಕ 5 ಸಾವಿರಕ್ಕೂ ಹೆಚ್ಚು ಪರಿಸರ ಹೋರಾಟಗಾರರು ಶಿವಮೊಗ್ಗದಿಂದ ಹೊರಟಿದ್ದು, ಕಾರ್ಗಲ್ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಶ್ರೀಗಳು ಮತ್ತು ಬಿಳಿಕೆ ಮಠದ ಶ್ರೀಗಳು, ರಾಚೋಟೇಶ್ವರಿ ಶ್ರೀಗಳು, ತ್ಯಾವರೆಕೆರೆ ಮಠದ ಅಭಿನವ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರು.

ಶಿವಮೊಗ್ಗ ಬೆಳಿಗ್ಗೆ 7 ಗಂಟೆಗೆ ಹೊರಟು 10.30ಕ್ಕೆ ಸಾಗರ ಗಾಂಧಿವೃತ್ತದಲ್ಲಿ ಎಲ್ಲಾ ಹೋರಾಟಗಾರರು ಸಮ್ಮಿಲನಗೊಂಡು ಅಲ್ಲಿ ಬೃಹತ್ ಸಭೆ ಜರುಗಿತು. ಈ ಸಭೆಯನ್ನುದ್ದೇಶಿಸಿ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿಯವರು ಭಾಷಣ ಮಾಡಿದರು. ಸಾಗರ ನಗರದ ಹಲವಾರು ಪರಿಸರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳು ಹಾಗೂ ಈ ಯೋಜನೆಯಿಂದ ಸಂತ್ರಸ್ತರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಮಧ್ಯಾಹ್ನ ಸಿಂಗಧೂರು ದೇವಿಯ ದರ್ಶನ ಪಡೆದು ಅಲ್ಲಿ ಪ್ರಸಾದ ಭೋಜನ ಸ್ವೀಕರಿಸಿ, ಸಂಜೆ 4 ಗಂಟೆಗೆ ಕಾರ್ಗಲ್ ತಲುಪಿ ಬೃಹತ್ ಸಭೆ ಆಯೋಜಿಸಲಾಗಿದೆ.
ಸಭೆಯ ನಂತರ ಕೆಪಿಸಿ ಅಧಿಕಾರಿಗಳಿಗೆ ಶರಾವತಿ ಪಿಎಸ್‌ಪಿ ವಿರುದ್ಧ ಮನವಿ ಸಲ್ಲಿಸಲಾಗುವುದು. ನಂತರ ಸಾಗರದ ಮೂಲಕ ವರದಹಳ್ಳಿಯ ಶ್ರೀಧರಾಶ್ರಮ ತಲುಪಿ ಅಲ್ಲಿ ರಾತ್ರಿ ಭೋಜನ ಮುಗಿಸಿ ಶಿವಮೊಗ್ಗಕ್ಕೆ ಹಿಂತಿರುಗುವ ಕಾರ್ಯಕ್ರಮವಿದ್ದು, ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕೆ.ಎಸ್.ಈಶ್ವರಪ್ಪ ಮತ್ತು ಕೆ.ಇ.ಕಾಂತೇಶ್ ಕೋರಿದ್ದಾರೆ.

.