*1.52 ಲಕ್ಷ ರೂ.,ಮೌಲ್ಯದ ಎಂಡಿಎಂಎ ಮಾದಕ ವಸ್ತು ಮಾರುತ್ತಿದ್ದವನ ಬಂಧನ* *ಶಿವಮೊಗ್ಗದ ಅಣ್ಣಾನಗರ ಬಳಿ ಬಂಧಿಸಿದ ದೊಡ್ಡಪೇಟೆ ಪೊಲೀಸರು*

*1.52 ಲಕ್ಷ ರೂ.,ಮೌಲ್ಯದ ಎಂಡಿಎಂಎ ಮಾದಕ ವಸ್ತು ಮಾರುತ್ತಿದ್ದವನ ಬಂಧನ*

*ಶಿವಮೊಗ್ಗದ ಅಣ್ಣಾನಗರ ಬಳಿ ಬಂಧಿಸಿದ ದೊಡ್ಡಪೇಟೆ ಪೊಲೀಸರು*

ಎಂಡಿಎಂಎ ಮಾದಕ ವಸ್ತು ಮಾರುತ್ತಿದ್ದ ಓರ್ವನನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ 100 ಅಡಿ ರಸ್ತೆಯಿಂದ ಅಣ್ಣಾನಗರ ಕಡೆಗೆ ಬರುವ ತುಂಗಾ ಚಾಲನ್ ಏರಿಯಾ ರಸ್ತೆ ಬದಿಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಕಾನೂನುಬಾಹಿರವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು.

ದೊಡ್ಡಪೇಟೆ ಪೊಲೀಸ್ ಠಾಣೆಸಿಪಿಐ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿತನಾದ ಶಾಹೀದ್ ಖಾನ್ (40 ವರ್ಷ) ಎಂಬಾತನನ್ನು ದಸ್ತಗಿರಿ ಮಾಡಿ ಸುಮಾರು1,52,000/- ರೂ ಮೌಲ್ಯದ 15.21 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಹಾಗೂ ಮಾರಾಟ ಮಾಡಲು ಬಳಸಿದ ಸುಮಾರು 40,000/- ರೂ ಮೌಲ್ಯದ ಮೋಟಾರ್ ಬೈಕ್ ಅನ್ನು* ಅಮಾನತ್ತುಪಡಿಸಿಕೊಂಡು ಈ ಆರೋಪಿತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0229/2026 ಕಲಂ: NDPS ACT, 1985 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.