*ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಹಾಸ್ಯ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸ್ ಕೇಸ್* *ಪೊಲೀಸರಿಗೂ ಮಹಿಳೆಯರಿಗೂ ತೊಂದರೆಕೊಡುತ್ತಿದ್ದ ಯುವಕರಿಂದ ಕ್ಷಮೆ ಕೇಳಿಸಿದ ಪೊಲೀಸ್*
*ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಅಪಹಾಸ್ಯ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸ್ ಕೇಸ್*
*ಪೊಲೀಸರಿಗೂ ಮಹಿಳೆಯರಿಗೂ ತೊಂದರೆಕೊಡುತ್ತಿದ್ದ ಯುವಕರಿಂದ ಕ್ಷಮೆ ಕೇಳಿಸಿದ ಪೊಲೀಸ್*
ಹೆಲ್ಮೆಟ್ ಧರಿಸದೇ ಪೊಲೀಸ್ ಸಿಬ್ಬಂದಿ, ಮಹಿಳಾ ಚಾಲಕರನ್ನು ಅಪಹಾಸ್ಯ ಮಾಡಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಇಬ್ಬರ ಮೇಲೆ ಶಿವಮೊಗ್ಗ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ಪ್ರಕರಣ ದಾಖಲಿಸಿದ್ದು, ಅವರ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಜು.6ರಂದು ಕೆಎ- 14, EZ 3167 ಸಂಖ್ಯೆಯ ಮೊಪೆಡನ್ನು ಚೇತನ ಎಂಬಾತ ಹಿಂಬದಿಯೊಬ್ಬನನ್ನು ಕೂರಿಸಿಕೊಂಡು ಹೆಲ್ಮೆಟ್ ಇಲ್ಲದೇ ಚಲಾಯಿಸುತ್ತಿದ್ದ. ಇಬ್ಬರೂ ಗೋಪಿ ಸರ್ಕಲ್ ಮಾರ್ಗದಲ್ಲಿ ಸಾಗುವಾಗ ಪೊಲೀಸ್ ಪೇದೆ ಹಾಗೂ ಸಂಚರಿಸುತ್ತಿದ್ದ ಮಹಿಳೆಯರನ್ನು ಅಪಹಾಸ್ಯ ಮಾಡಿ, ವೀಡಿಯೋ ಚಿತ್ರೀಕರಿಸಿಕೊಂಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಹರಿಯಬಿಟ್ಟಿದ್ದರು.
ಇಬ್ಬರೂ ಪೊಲೀಸ್ ಠಾಣೆಯ ಮುಂದೆ ನಿಂತು ಕ್ಷಮೆ ಕೇಳುತ್ತಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.


