ಕವಿಸಾಲು
01
ಈಶ್ವರಪ್ಪ ಬಿಜೆಪಿ ಬಿಡೋದು ಡೌಟು! ಏನಂದ್ರು ಕೆಎಸ್ ಈ!!
ಶಿವಮೊಗ್ಗ: ಯಡಿಯೂರಪ್ಪ ನಮ್ಮ ನಾಯಕರು, ಅದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮವರು. ನಮ್ಮ ನಾಯಕರು ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ, ಅವರು ಏಕೆ ನನಗೆ ಅನ್ಯಾಯ ಮಾಡಿದ್ರು? .ಕೊನೆ ಕ್ಷಣದವರೆಗೂ ಹೇಳ್ತಿದ್ದರೂ ನಿನಗೆ ಟಿಕೇಟ್ ಅಂತಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ.
ಇಂದು ಕಾಂತೇಶ್ ಹಾವೇರಿಯಲ್ಲಿ ನಿಂತುಕೊಂಡರೆ 100 ಕ್ಕೆ 100 ಗೆಲ್ಲುತ್ತಾನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕಾಂತೇಶ್ ಗೆ ಟಿಕೆಟ್ ಕೊಡಿ ಅಂದಿದ್ದರು. ಟಿಕೇಟ್ ಸಿಗುತ್ತಿದ್ದಾಗೆ ಉಲ್ಟಾ ಮಾತನಾಡಿದ್ರೆ ಹೇಗೆ? ನನಗೆ ಆರೋಗ್ಯ ಸರಿ ಇಲ್ಲ ಬೇಡ ಅಂದಿದ್ದರು ಎಂದು ತಿಳಿಸಿದರು.
ಈ ಲೋಕಸಭೆ ಚುನಾವಣೆಯಲ್ಲಿ ಖಂಡಿತ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಅಸಮಾಧಾನ ಎಲ್ಲಾ ಕಡೆ ಇದೆ. ದೊಡ್ಡವರು ಅಸಮಾಧಾನ ಸರಿ ಮಾಡ್ತಾರೆ. ಇಡಿ ರಾಜ್ಯದಲ್ಲಿ ಪಕ್ಷ ಕಟ್ಟಿದವರು ನೋವು ಅನುಭವಿಸುತ್ತಿದ್ದಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಇದೆ ಅಂತಿದ್ದಾರೆ ಎಂದರು.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆದ ಬಳಿಕ ಯಾರನ್ನು ಕೇಳದೇ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, 18 ರಂದು ಮೋದಿ ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೋಗ್ತೀನೋ ಇಲ್ವೋ ಎನ್ನುವ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡ್ತೇನೆ. ಎಂಎಲ್ ಸಿ ಮಾಡ್ತೀನಿ ಅಂತಾರೆ. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಈ ಹಿಂದೆ ಎಂಎಲ್ಎ ಮಾಡ್ತೀನಿ ಅಂದ್ರು, ಎಂಪಿ ಮಾಡ್ತೀನಿ ಅಂದ್ರು ಈಗ ಎಂಎಲ್ಸಿ ಅಂತಾರೆ ಯಾವುದನ್ನು ನಂಬಲ್ಲ ಎಂದರು.
ಯಡಿಯೂರಪ್ಪ ವಿರುದ್ದ ಪೋಕ್ಸೋ ಪ್ರಕರಣ ಬಗ್ಗೆ ಮಾತನಾಡಿದ ಈಶ್ವರಪ್ಪ, ಯಡಿಯೂರಪ್ಪ ಅವರ ವಿರುದ್ದ ಷಡ್ಯಂತ್ರ, ಪಿತೂರಿ ನಡೆದಿದೆ. ಆ ಮಹಿಳೆ ಇದುವರೆಗೆ 53 ಜನರ ವಿರುದ್ದ ಕೇಸ್ ಹಾಕಿದ್ದಾಳೆ. ಯಡಿಯೂರಪ್ಪ ಅವರು ಈ ಆರೋಪದಿಂದ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.