ಮೇ 7 ಕ್ಕೆ ಕರ್ನಾಟಕ ಲೋಕಸಭೆ ಚುನಾವಣೆ* *7 ಹಂತಗಳಲ್ಲಿ ಲೋಕಸಭಾ ಚುನಾವಣೆ* ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಚುನಾವಣೆ *ಲೋಕಸಭಾ ಚುನಾವಣೆ ಘೋಷಣೆ*
*ಮೇ 7 ಕ್ಕೆ ಕರ್ನಾಟಕ ಲೋಕಸಭೆ ಚುನಾವಣೆ*
*7 ಹಂತಗಳಲ್ಲಿ ಲೋಕಸಭಾ ಚುನಾವಣೆ*
ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಚುನಾವಣೆ
*ಲೋಕಸಭಾ ಚುನಾವಣೆ ಘೋಷಣೆ*
26 ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವೂ ಘೋಷಣೆ. ಕರ್ನಾಟಕದ ಉಪ ಚುನಾವಣೆಯನ್ನೂ ಘೋಷಿಸಿದ ಆಯೋಗ. ಕರ್ನಾಟಕದ ಸುರಪುರ ಉಪ ಚುನಾವಣೆ.
*ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ*
*ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ*
*543 ಸಂಸತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ*
*ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಣೆ*
*ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವ ಸನ್ನದ್ಧ*
*ಜಗತ್ತಿನ ಅತ್ಯಂತ ದೊಡ್ಡ ಚುನಾವಣೆ ಇದು.10.05 ಲಕ್ಷ ಮತಗಟ್ಟೆಗಳಲ್ಲಿ
ಚುನಾವಣೆ ನಡೆಯಲಿದೆ.*
ದೇಶದಲ್ಲಿ 97 ಕೋಟಿ ಮತದಾರರಿದ್ದಾರೆ. 1.5 ಕೋಟಿ ಸಿಬ್ಬಂದಿಗಳ ಮೂಲಕ ಚುನಾವಣೆ.
55 ಲಕ್ಷ ಇವಿಎಂಗಳ ಮೂಲಕ ಚುನಾವಣೆ.
49.7 ಪುರುಷ ಮತದಾರರು. 47.1 ಮತದಾರರು ಮಹಿಳೆಯರು. 19.74 ಕೋಟಿ ಯುವ ಮತದಾರರು.
85 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಓಟ್ ಮಾಡುವ ವ್ಯವಸ್ಥೆ.
2100 ಜನ ಚುನಾವಣಾ ವೀಕ್ಷಕರ ನೇಮಕ.4 ಲಕ್ಷ ಚುನಾವಣಾ ವಾಹನಗಳು. ತೃತೀಯ ಲಿಂಗಿ ಮತದಾರರು 48 ಸಾವಿರ. 100 ವರ್ಷ ದಾಟಿದ ಮತದಾರರ ಸಂಖ್ಯೆ 2.18 ಲಕ್ಷ.
ಹಿಂಸೆ ರಹಿತ ಚುನಾವಣೆಗೆ ಒತ್ತು.
ಅಕ್ರಮ ಹಣ ಹಂಚದಿರಲು ಶಕ್ತಿಮೀರಿ ಪ್ರಯತ್ನ. ಇಂಥ ಅಕ್ರಮಗಳಿಗೆ ಅವಕಾಶ ಕೊಡುವುದಿಲ್ಲ.
ಅಕ್ರಮ ಎಸಗುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ. ಗಲಭೆ ನಡೆಸಿದರೆ ಜಾಮೀನು ರಹಿತ ಕ್ರಮ.
ಮತದಾರರಿಗೆ ಹಣ ಹಂಚಿದ್ರೆ ಕಠಿಣ ಕ್ರಮ. ಆಮಿಷ ನೀಡಲೇಬಾರದು. ಬಲ, ಹಣ ಬಲದ ದುರುಪಯೋಗ ಮಾಡಿದರೆ ಕಠಿಣ ಕಾನೂನು ಕ್ರಮ.
ಸೂರ್ಯಾಸ್ತದ ಬಳಿಕ ಎಟಿಎಂ ವಾಹನ ಓಡಾಡಂಗಿಲ್ಲ. ಸುಳ್ಳು ಸುದ್ದಿ ಹಬ್ಬಿಸೋದು ಕೂಡ ಮಹಾಪರಾಧ. ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು.
ಧಾರ್ಮಿಕ ಭಾವನೆ ಕೆರಳಿಸುವ, ವೈಯಕ್ತಿಕ ಧಾಳಿ ನಿಷೇಧ. ಅವಾಚ್ಯ ಪದಗಳ ಬಳಕೆ ಮಾಡದಂತೆ ಪಕ್ಷಗಳಿಗೆ ಸೂಚನೆ. ಚುನಾವಣಾ ಪ್ರಚಾರದಲ್ಲಿ ಮಕ್ಕಳು ಪಾಲ್ಗೊಳ್ಳುವಂತಿಲ್ಲ.