ಆಯನೂರು ಮಂಜುನಾಥ್ ಕಿಡಿ   ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು

ಆಯನೂರು ಮಂಜುನಾಥ್ ಕಿಡಿ
ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ
ಯಡಿಯೂರಪ್ಪ ಈಗ ರಾಜಕೀಯ ಅನಾಥರು
ಶಿವಮೊಗ್ಗ,
ಕೆ.ಎಸ್.ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ ಮಾಡಿದರು ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಾಂದ್ಲಾಜೆ ಇರುತ್ತಾಳೆ ಎಂದು ಅಪಾರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಇಂತಹ ಮಾತನಾಡಿದರು ಕೂಡ ಯಾರೂ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಒಂದು ರೀತಿಯಲ್ಲಿ ಯಡಿಯೂರಪ್ಪನವರ ಚಾರಿತ್ರ್ಯ್ರೆಕ್ಕೆ ಆರೋಪ ಬರುವ ರೀತಿಯಲ್ಲಿ ಮಾತನಾಡಿದರು ಕೂಡ ಸುಮ್ಮನಿದ್ದರು ಎಂದರು.
ದೇವಿಯ ಉಪಾಸನೆಯೇ ನಮ್ಮ ಗುರಿ, ನಾರಿಯೆ ನಮ್ಮ ಶಕ್ತಿ  ಎಂದು ಹೇಳುವ ಬಿಜೆಪಿಗರು ಶೋಭಾ ಕರಂದ್ಲಾಜೆಯ ಅವಹೇಳನ ಮಾಡಿದರೂ ಕೂಡ ಸುಮ್ಮನಿದ್ದಾರೆ. ಇದು ಕೇವಲ ರಾಜಕೀಯ ಪ್ರಭಾವವಾಗಿ ಕಾಣಿಸಿಕೊಂಡಿದೆ. ನಾನೇ ಆಗಿದ್ದರೆ ಖಂಡಿತ ಬಿ.ಎಸ್. ಯಡಿಯೂರಪ್ಪನವರ ರಕ್ಷಣೆಗೆ ಹೋಗುತ್ತಿದ್ದೆ. ಆದರೆ ಅವರ ಮಕ್ಕಳು ಚಾರಿತ್ರ್ಯ ಹೊದೆ ಆದರು ಸುಮ್ಮನಿದ್ದಾರೆ. ತಂದೆಯ ಉತ್ತರಾಧಿಕಾರ ಬೇಕು, ಆಸ್ತಿ ಬೇಕು, ಅವಮಾನ ಮಾಡಿದರೆ ತಿರುಗಿ ಮಾತನಾಡುವ ಶಕ್ತಿ ಅವರು ಕಳೆದುಕೊಂಡಿದ್ದಾರೆ ಎಂದರು.
ಯಡಿಯೂರಪ್ಪನವರು ಈಗ ರಾಜಕೀಯ ಅನಾಥರಾಗಿದ್ದಾರೆ. ಅವರನ್ನು ಬಿಜೆಪಿಯ ವರಿಷ್ಟರು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಒಂದು ರೀತಿಯಲ್ಲಿ ಮಹಾಭಾರತ ಕಥೆಯ ಭೀಷ್ಮರು ಶರಪಂಜರದಲ್ಲಿ ಅಸಹಾಯಕರಾಗಿ ಮಲಗಿದಂತೆ ಇದ್ದಾರೆ. ಅವರನ್ನು ರಕ್ಷಣೆ ಮಾಡಲು ಈಗ ಯಾರು ಇಲ್ಲ. ಅದು ಅವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ನಾನು ಅವರ ಪ್ರೀತಿಯ ಶಿಷ್ಯನಾಗಿ ನೊಂದು ಮಾತನಾಡುತ್ತಿದ್ದೇನೆ. ಈಶ್ವರಪ್ಪನವರ ಹರಿದ ಬಾಯನ್ನು ಹೊಲೆಯಲು ಈಗ ಬಿಜೆಪಿಯಲ್ಲಿ ಯಾರು ಇಲ್ಲ ಎಂದರು.
ಈಶ್ವರಪ್ಪ ಅಧಿಕಾರ ಕಳೆದುಕೊಂಡಿದ್ದು, ಶೇ ೪೦ರ ಭ್ರಷ್ಟಚಾರದ ಆರೋಪದ ಮೇಲೆ. ಅವರು ಈಗ ಬಂಡಾಯವೆದ್ದಿರುವುದು ಕೂಡ ಕೇವಲ ಆರಂಭ ಶೂರತನ ಅಷ್ಟೇ. ಅವರು ಖಂಡಿತ ಶರಣಾಗತರಾಗುತ್ತಾರೆ. ರಾಜಕೀಯ ಗುಂಡಿಗೆ ಅವರಲ್ಲಿ ಇಲ್ಲ, ನೈಜ ಶಕ್ತಿಯೂ ಇಲ್ಲ. ಈಶ್ವರಪ್ಪನವರು ನಿಜವಾಗಿಯೂ ಚುನಾವಣೆಗೆ ಸ್ಪರ್ಧಿಸಿದರೆ ನಾನು ಈ ಮೊದಲೇ ಹೇಳಿದಂತೆ ಖಂಡಿತ ನನ್ನ ಮಾತನ್ನು ವಾಪಾಸು ತೆಗೆದುಕೊಂಡು ಕ್ಷಮೆ ಕೇಳಿ ಅವರು ರಾಜಕೀಯ ಗಂಡು ಎಂದು ಒಪ್ಪಿಕೊಳ್ಳುತ್ತೇನೆ ಎಂದರು.