ಇವತ್ತು ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್? *ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ಹಿಂದೆ ಬಿಜೆಪಿ ಅಜೆಂಡ* *ತಂದೆ ಬಂಗಾರಪ್ಪ ಸೋಲಿನ ಸೇಡು ತೀರಿಸಿಕೊಳ್ಳಲು ಸ್ಪರ್ಧಿಸಿದ್ದಾರೆ.*
ಇವತ್ತು ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್?
*ಕೆ.ಎಸ್.ಈಶ್ವರಪ್ಪ ಬಂಡಾಯ ಸ್ಪರ್ಧೆಯ ಹಿಂದೆ ಬಿಜೆಪಿ ಅಜೆಂಡ*
*ಶಾಮನೂರು ಶಿವಶಂಕರಪ್ಪ ಅವರು ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ಶೋಷಿತ ಹಿಂದುಳಿದ ವರ್ಗಗಳನ್ನು ಜಾಗೃತಗೊಳಿಸಿದೆ.*
ಇದು ಚುನಾವಣಾ ರಾಜಕಾರಣದ ಒಂದು ಭಾಗವಾಗಿದೆ.
ಹಿಂದುಳಿದ ಜನಾಂಗ ಈಗ ಜಾಗೃತವಾಗಿದೆ.
ಹೀಗಾಗಿ ಬಿಜೆಪಿ ಬಂಡಾಯ ಸ್ಪರ್ಧಿಯಾಗಿ ಈಶ್ವರಪ್ಪ ಅವರನ್ನು ಕಣಕ್ಕಿಳಿಸಿದೆ.
ಚುನಾವಣಾ ತಂತ್ರಗಾರಿಕೆ ಮಾಡಿ ಹಿಂದುಳಿದ ನಾಯಕನ ಮುಖವಾಡ ಹಾಕಿ ಬಂಡಾಯದ ಆಟ ಆಡುತ್ತಿದ್ದಾರೆ.
ಬಿಜೆಪಿಯ ಹೊಂದಾಣಿಕೆ ರಾಜಕೀಯದ ಡೆಮ್ಮಿ ಕ್ಯಾಂಡಿಡೇಟ್.
ಈಶ್ವರಪ್ಪ ಡೆಮ್ಮಿ ಕ್ಯಾಂಡಿಡೇಟ್ ಆಗಿದ್ದಾರೆ.
ಬಿಜೆಪಿ ಜೊತೆ ಆಂತರಿಕ ಒಪ್ಪಂದ ಆಗಿದೆ.
ಚುನಾವಣೆ ಬಳಿಕ ಇವರಿಗೆ ರಾಜ್ಯಪಾಲರನ್ನಾಗಿಸಿ ಮಗನಿಗೆ ಎಂ.ಎಲ್.ಸಿ. ಮಾಡುವ ಹುನ್ನಾರ ಅಡಗಿದೆ.
ತಮ್ಮ ಮಗನ ಹುಳುಕು ಹೊರಗೆ ಬಾರದಂತೆ ಈಶ್ವರಪ್ಪ ನೋಡಿಕೊಂಡಿದ್ದಾರೆ.
ಇವರು ಬಡವರ, ಹಾಗೂ ಕೂಲಿ ಕಾರ್ಮಿಕರ ವಿರೋಧಿಗಳಾಗಿದ್ದಾರೆ.
ಕಾರ್ಖಾನೆ ಕಾರ್ಮಿಕರ ರಕ್ತ ಕುಡಿಯುವ ಇವರು ಎಂದಿಗೂ ಬಡವರ ಪರ ಆಗಲಾರರು.
ಈಶ್ವರಪ್ಪ ಒಬ್ಬ ಹಿರಿಯ ರಾಜಕಾರಣಿಯಾಗಿದ್ದಾರೆ.
40 ಪರ್ಸೆಂಟ್ ಮನೆ ಮೇಲೆ ದಾಳಿ ಮಾಡಿಸುವುದಾಗಿ ಬೆದರಿಸಿ ಈ ರೀತಿ ಈಶ್ವರಪ್ಪರನ್ನು ಕಣಕ್ಕಿಳಿಸಲಾಗುತ್ತಿದೆ.
ಯಡಿಯೂರಪ್ಪ ಹಾಗೂ ಈಶ್ವರಪ್ಪರ ಗಟ್ಟಿ ಸಂಬಂಧದ ಭಾಗವೇ ಇದಾಗಿದೆ.
ಇವರ ನಾಟಕದ ಭಾಗವನ್ನು ಜಿಲ್ಲೆಯ ಜನರು ಇವರನ್ನು ತಿರಸ್ಕರಿಸುತ್ತಾರೆ.
ಈಶ್ವರಪ್ಪ ಮುಖಕ್ಕೆ, ಮೈಯಿಗೆ ಅಲ್ಲ, ನಾಲಿಗೆಗೂ ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಿದ್ದಾರೆ.
ಇನ್ನೊಂದು ರಾಜಕೀಯ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು, ಡೆಮ್ಮಿ ಕ್ಯಾಂಡಿಡೇಟ್ ಆಗಿರುವ ಮುಖವಾಡ ಬಯಲಾಗಲಿದೆ.
ನಿಮ್ಮ ಬಂಡವಾಳ ಕೆಲವೆ ದಿನಗಳಲ್ಲಿ ಬಯಲಾಗಲಿದೆ.
ನೀವು ಸೋತು ಮನೆಗೆ ಹೋಗುತ್ತಿರಾ.
ಈಶ್ವರಪ್ಪ ವಿರುದ್ಧ ಕಿಡಿ ಕಾರಿದ ಆಯನೂರು ಮಂಜುನಾಥ್.
ಈಶ್ವರಪ್ಪ ವಿರುದ್ಧ ಆರೋಪ ಮಾಡಿದ ಆಯನೂರು ಮಂಜುನಾಥ್.
ಈಶ್ವರಪ್ಪರನ್ನ ಕತ್ತಿಯ ಅಲುಗಿನ ರೂಪದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಈಶ್ವರಪ್ಪರ ಹಿಂಧುತ್ವದ ಬಗ್ಗೆ ಎಲ್ಲರಿಗೂ ಗೊತ್ತಿದೆ.
ಈಶ್ವರಪ್ಪ ಬದ್ಧತೆ ಇರುವ ರಾಜಕಾರಣಿಯಲ್ಲ.
ಹಲಾಲ್ ಬಗ್ಗೆ ಮಾತನಾಡಿ, ಆರೋಪಿಸಿ ಬಳಿಕ ಮುಸಲ್ಮಾನ್ ಮನೆಗೆ ಹೋಗಿ ಅದೆ ಮಾಂಸ ಸೇವಿಸಿದ್ದಾರೆ.