ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ; ಸರ್ಕಾರಕ್ಕೂ 2 ಕೋಟಿ ಕೇಳಿದ್ದೇವೆ- ವಾಲ್ಮೀಕಿ ಹಗರಣದ ಸಂತ್ರಸ್ತ ಕುಟುಂಬಕ್ಕೆ ಇನ್ನೆರಡು ದಿನಗಳಲ್ಲಿ 25 ಲಕ್ಷ ರೂ. ಪರಿಹಾರ
ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ;
ಸರ್ಕಾರಕ್ಕೂ 2 ಕೋಟಿ ಕೇಳಿದ್ದೇವೆ- ವಾಲ್ಮೀಕಿ ಹಗರಣದ ಸಂತ್ರಸ್ತ ಕುಟುಂಬಕ್ಕೆ ಇನ್ನೆರಡು ದಿನಗಳಲ್ಲಿ 25 ಲಕ್ಷ ರೂ. ಪರಿಹಾರ
ಮುಖ್ಯಮಂತ್ರಿಗಳ ಭೇಟಿ ಮಾಡಿದ್ದೇವೆ.
ಅದ್ಧೂರಿ ದಸರಾಕ್ಕೆ ಅನುದಾನ ಬಿಡುಗಡೆ ಮಾಡಲು ವಿನಂತಿ ಮಾಡಿದ್ದೇನೆ. ತಕ್ಷಣಕ್ಕೆ ಸ್ಪಂದಿಸಿದ್ದಾರೆ. ಅದ್ಧೂರಿ ದಸರಾಕ್ಕೆ ಹಣ ಬಿಡುಗಡೆ ಮಾಡಲು ಸರ್ಕಾರ ಒಪ್ಪಿದೆ. ವಿಜೃಂಭಣೆಯಿಂದ ದಸರಾ ಆಚರಣೆ ಆಗುತ್ತೆ. ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ದಸರಾ ಶಿವಮೊಗ್ಗದ್ದು. ಎರಡು ಕೋಟಿ ರೂ., ಕೇಳಿದ್ದೇವೆ. ಪಾಲಿಕೆಯ 1.50 ಕೋಟಿ ರೂ., ಇದೆ.
ಆಯುಕ್ತೆ ಕವಿತಾ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ.
ಪೌರ ಕಾರ್ಮಿಕ ದಸರಾ, ಗಮಕ ದಸರಾ, ಪತ್ರಿಕಾ ದಸರಾ- ಮೂರು ದಸರಾ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಒಟ್ಟು 14 ವಿಭಾಗಗಳಲ್ಲಿ ದಸರಾ ನಡೆಯಲಿದೆ. ಆನೆ ಅಂಬಾರಿಗೆ ತಾಲೀಮು ನಡೆಯಲಿದೆ.
ವಾಲ್ಮೀಕಿ ಹಗರಣದಲ್ಲಿ ಅಧಿಕಾರಿಯ ಕುಟುಂಬಕ್ಕೆ ಅನ್ಯಾಯವಾಗಿದೆ. ಸಿ.ಎಂ ಕೂಡ ಪಾಸಿಟೀವ್ ಆಗಿ ಯೋಚಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಕೂಡ ಚರ್ಚಿಸಿದ್ದಾರೆ. ಅಧಿಕಾರಿಯ ಕುಟುಂಬವನ್ನು ಕರೆಸಿ ನ್ಯಾಯ ಒದಗಿಸುತ್ತಿದ್ದಾರೆ. ತಡ ಆದರೂ ಕೂಡ ಒಳ್ಳೆಯ ಕೆಲಸ ಮಾಡಿದ್ದಾರೆ. 25 ಲಕ್ಷ ಕೊಡಲು ನಿರ್ಧರಿಸಿದ್ದಾರೆ.
ಜುಲೈ 17 ರಂದೇ ಸಿಎಂ ಹೇಳಿ ವ್ಯವಸ್ಥೆ ಮಾಡಿದ್ದಾರೆ. ಎರಡು ಮೂರು ದಿನಗಳಲ್ಲಿ ಪರಿಹಾರದ ಚೆಕ್ ಸಿಗಲಿದೆ.
ಕುಟುಂಬದಲ್ಲಿರೋ ಯುವಕನಿಗೆ ಸರ್ಕಾರಿ ಉದ್ಯೋಗದ ಭರವಸೆ ನನಗೆ ನೀಡಿದ್ದಾರೆ.ಫಾಲೋ ಅಪ್ ಗೆ ಬೆಲೆ ಸಿಕ್ಕಿದೆ.