ಡಾ.ಧನಂಜಯ ಸರ್ಜಿ  ಪತ್ರಿಕಾ ಗೋಷ್ಟಿಯ ವಿವರ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸಧನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್‌ ಏಪ್ರಿಲ್‌ 1 ರಂದು ಗ್ರಾಮಾಂತರ ಬೂತ್‌ ಸಮಿತಿ ಕಾರ್ಯಕರ್ತರ ಬೃಹತ್‌ ಸಮಾವೇಶ

ಡಾ.ಧನಂಜಯ ಸರ್ಜಿ 
ಪತ್ರಿಕಾ ಗೋಷ್ಟಿಯ ವಿವರ

ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸಧನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್‌

ಏಪ್ರಿಲ್‌ 1 ರಂದು ಗ್ರಾಮಾಂತರ ಬೂತ್‌ ಸಮಿತಿ ಕಾರ್ಯಕರ್ತರ ಬೃಹತ್‌ ಸಮಾವೇಶ

ರಾಜ್ಯದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸಧನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್‌ ಅವರು. ಇದೀಗ ಕಾಂಗ್ರೆಸ್‌ನಲ್ಲಿದಿನಿ ಎನ್ನುವ ಕಾರಣಕ್ಕೋಸ್ಕರ ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡುತ್ತಿರುವುದು ಸಮರ್ಥನೀಯವಲ್ಲ. ಬಿಜೆಪಿಯಿಂದ ಬೇರೆ ಯಾರೂ ಪಡೆಯಲಾಗದಂತಹ ಎಲ್ಲ ಫಲಗಳನ್ನು ಅವರು ಪಡೆದ ಬಹುದೊಡ್ಡ ಫಲಾನುಭವಿ. ಬರೀ ಮಾತನಾಡಲಿಕ್ಕೊಬ್ಬರು ರಾಜಕಾರಣಿ ಬೇಕೆನ್ನುವ ಕಾರಣಕ್ಕಾಗಿ ಕಾಂಗ್ರೆಸ್‌ ಅವರಿಗೆ ಮನ್ನಣೆ ಹಾಕಿದೆಯಷ್ಟೇ. ಅಂತವರು ಯಡಿಯೂರಪ್ಪ ಅವರ ಬಗ್ಗೆ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗಳಿಸಿಕೊಂಡ ಮತಗಳ ಸಂಖ್ಯೆ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ, ಅದಕ್ಕಿಂತ ಬೇರೆ ಅವರ ಸಾಮರ್ಥ್ಯವನ್ನು ಅಳೆಯಬೇಕಿಲ್ಲ. ಮುಂದಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ವಿದ್ಯಾವಂತರು ಹಾಗೂ ಪ್ರಜ್ಞಾವಂತರು ತಕ್ಕ ಪಾಠವನ್ನು ಕಲಿಸಲಿದ್ದಾರೆ.

-ಡಾ.ಧನಂಜಯ ಸರ್ಜಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ
======================================

ಶಿವಮೊಗ್ಗ : ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಘಟಕದ ವತಿಯಿಂದ ಏಪ್ರಿಲ್‌ 01 ರ ಸಂಜೆ 4 ಗಂಟೆಗೆ ಬಿ.ಎಚ್‌.ರಸ್ತೆಯ ಸೈನ್ಸ್ ಮೈದಾನದಲ್ಲಿ ಪಕ್ಷದ ಬೂತ್‌ ಸಮಿತಿಯ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಡಾ.ಧನಂಜಯ ಸರ್ಜಿ ತಿಳಿಸಿದರು.

ಅವರು ಶನಿವಾರ ಬಿಜೆಪಿ ಗ್ರಾಮಾಂತರ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ಬೂತ್‌ ಕಾರ್ಯಕರ್ತರಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದವರೆಗೆ ಎಲ್ಲರಿಗೂ ಸಮನಾದ ಗೌರವವನ್ನು ನೀಡುತ್ತಾ ಬಂದಿದೆ. ವಿಶ್ವನಾಯಕ ಶ್ರೀ ನರೇಂದ್ರ ಮೋದಿ ಜೀ ಅವರು ಕಳೆದ ಒಂದೂವರೆ ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಂತಹ ಪ್ರಮುಖರ ಕಾರ್ಯಕಾರಿಣಿ ಸಭೆಯಲ್ಲಿ ಸುಮಾರು ಒಂದೂವರೆ ತಾಸು ಮಾತನಾಡಿದರು. ಆದರೆ, ತಮ್ಮ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲಿಲ್ಲ, ಅಷ್ಟೂ ಹೊತ್ತು ಅವರು ಬೂತ್‌ ಕಾರ್ಯಗಳ ಕುರಿತು ಹೇಳಿದರು, ಬೂತ್‌ ಗೆದ್ದರೆ ದೇಶ ಗೆದ್ದಂತೆ , ಬೂತ್‌ ಗೆದ್ದರೆ ಬಿಜೆಪಿ ಗೆದ್ದಂತೆ ಎಂದು ಬಲವಾಗಿ ಪ್ರತಿಪಾದಿಸಿದರು. ದೊಡ್ಡ ದೊಡ್ಡ ಸಮಾವೇಶಕ್ಕಿಂತ ಕಾರ್ಯಚಟುವಟಿಕೆಗಳೆಲ್ಲವೂ ಬೂತ ಮಟ್ಟದಲ್ಲಿಯೇ ನಡೆಯಬೇಕು.

ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ : ಸಬ್‌ ಕಾ ಸಾತ್‌ : ಜಾತಿ ಮತ ಪಂಥ ಬೇಧವಿಲ್ಲದೇ ಜೊತೆಗೂಡಿ ಕೆಲಸ ಮಾಡುವುದು, ಸಬ್‌ ಕಾ ವಿಕಾಸ್‌ : ಎಲ್ಲರ ವಿಕಾಸವಾಗಿದೆ, ವಿಕಾಸದ ಹಾದಿಯಲ್ಲಿ ಭಾರತ ನಡೆಯುತ್ತಿದೆ, ಅದು ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಹೀಗೆ ಎಲ್ಲ ಮತದಾರರ ವಿಕಾಸದೊಂದಿಗೆ ವಿಕಸಿತ ಭಾರತವಾಗಿದೆ, ಸಬ್‌ ಕಾ ವಿಶ್ವಾಸ್‌ : ನಮ್ಮ ವಿಶ್ವಾಸ ಬಿಜೆಪಿಯ ಮೇಲಿದೆ, ನರೇಂದ್ರ ಮೋದಿ ಅವರ ಮೇಲಿದೆ, ಮೋದಿ ಜೀ ಮತ್ತು ಬಿಜೆಪಿಯವರಿಗೆ ಯಾರ ಮೇಲೆ ವಿಶ್ವಾಸ ಇದೆ ಎಂದರೆ, ಭಾರತದ ಅತಿ ದೊಡ್ಡ ಕಾರ್ಯಕರ್ತರಿರುವ ಪಕ್ಷವೆಂದರೆ ಅದು ಬಿಜೆಪಿ, ಅದು ಹೆಚ್ಚು ನಿಷಾವಂತ ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿದೆ, ಹಾಗಾಗಿ ನಿಷ್ಠಾವಂತ ಕಾರ್ಯಕರ್ತರ ಮೇಲೆ ವಿಶ್ವಾಸವಿದೆ, ಇನ್ನು ಸಬ್‌ ಕಾ ಪ್ರಯಾಸ್‌ : ನಮ್ಮ ಭಾರತ ದೇಶದ ಭದ್ರತೆ, ಗೌರವ ಹೆಚ್ಚಬೇಕೆಂದರೆ ಮತ್ತೊಮ್ಮೆ ಮೋದಿಜೀ ಪ್ರಧಾನಿ ಆಗಬೇಕು, ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಕೆಲಸವನ್ನು ಮಾಡಬೇಕು. ಮೋದಿ ಜೀಯವರು ಹೇಳಿದ್ದಾರೆ, ನಮ್ಮ ಕಾರ್ಯಕರ್ತರು ಜನರ ಬಳಿ ಹೋಗಿ ಮತ ಕೇಳಬೇಕೆಂದರೆ ತಲೆ ಎತ್ತಿ ಕೇಳಬೇಕು, ಎದೆಯುಬ್ಬಿಸಿ ಕೇಳಬೇಕು, ಅಂತಹ ಸ್ಥಿತಿಯಲ್ಲಿ ಬಿಜೆಪಿಗಿದೆ, 2 ಜಿ ಹಗರಣ ಮಾಡಲಿಲ್ಲ, ತ್ರಿ ಜಿ ಹಗರಣ ಮಾಡಲಿಲ್ಲ, ಹಾಗಾಗಿ ತಲೆ ಎತ್ತಿ ಮತ ಕೇಳುವಂತೆ ಮಾಡಿದ್ದಾರೆ. ದೇಶದಲ್ಲಿ 3 ಸಾವಿರ ಜಾತಿಗಳಿದ್ದು, 25 ಸಾವಿರ ಉಪ ಜಾತಿಗಳಿದ್ದರೂ ಮೋದಿಜೀಗೆ ನಾಲ್ಕು ಜಾತಿ ಮಾತ್ರ. ಅದುವೇ ಗರೀಬೋ ಕಾ ಕಲ್ಯಾಣ್‌, ಯುವಜನೋ ಕಾ ಉತ್ಥಾನ್‌, ಕಿಸಾನೋ ಕಾ ಸಮ್ಮಾನ್‌, ನಾರಿ ಯೋ ಕಾ ಸಶಸ್ತೀಕರಣ್‌. ಬೂತ್‌ ಮಟ್ಟದಲ್ಲಿ ಫಲಾನುವಿಗಳ ಸಭೆ, ಫಲಾನುಭವಿಗಳ ಪ್ರತಿ ಮೆನೆಗೆ ಸಂಪರ್ಕ ಸಾಧಿಸಬೇಕು,ಯುವಕರ ಸಭೆಗಳು ಆಗಬೇಕು, ರೈತರ ಸಭೆಗಳು ಆಗಬೇಕು, ಮಹಿಳೆಯರ ಸಭೆಗಳು ಬೂತ್‌ ಮಟ್ಟದಲ್ಲಿ ಆಗಬೇಕು, ಓಬಿಸಿಯ ಸಭೆಗಳು ಆಗಬೇಕು, ಕೀ ವೋಟರ್‌ರ‍ಸ ಸಂಪರ್ಕ ಬೂತ್‌ ಮಟ್ಟದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಸಜ್ಜುಗೊಳಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಮಾವೇಶದಲ್ಲಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಹಾಗೂ ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರ, ನಗರ ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ, ಕ್ಲಸ್ಟರ್‌, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ್ರು, ಡಿ.ಎಸ್‌.ಅರುಣ್‌, ಮಾಜಿ ಶಾಸಕ ಎಂ.ಬಿ. ಭಾನುಪ್ರಕಾಶ್‌, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಜಿಲ್ಲಾ ಚುನಾವಣಾ ಸಂಚಾಲಕರಾದ ಆರ್‌.ಕೆ.ಸಿದ್ರಾಮಣ್ಣ, ಗಿರೀಶ್ ಪಟೇಲ್,ಮಾಜಿ ಶಾಸಕರಾದ ಕೆ.ಬಿ.ಅಶೋಕ್‌ ನಾಯ್ಕ್, ಕೆ.ಜಿ.ಕುಮಾರ ಸ್ವಾಮಿ, ಪ್ರಭಾರಿಗಳಾದ ಡಾ.ಧನಂಜಯ ಸರ್ಜಿ ಭಾಗವಹಿಸುವರು. ಶಿವಮೊಗ್ಗ ಗ್ರಾಮಾಂತರ ಮಂಡಲ 156 ಮತ್ತು ಹೊಳೆಹನ್ನೂರು ಮಂಡಲದ 75 ಬೂತ್‌ಗಳಿವೆ. 13 ಜನರ ಕಾರ್ಯಕರ್ತರ ತಂಡದ ಒಟ್ಟು 231 ಬೂತ್‌ಗಳ ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ಪ್ರತಿ ಬೂತ್‌ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಮಹಿಳಾ ಪ್ರಮುಖರು, ಎಸ್‌ಸಿ,ಎಸ್‌ಟಿ, ಓಬಿಸಿ ಹಾಗೂ ಬಿಎಲ್‌ಎ-2 ಗಳ 3000 ಸಾವಿರಕ್ಕೂ ಹೆಚ್ಚು ಬೂತ್‌ ಸಮಿತಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಗ್ರಾಮಾಂತರದಲ್ಲಿ 231 ಬೂತ್‌ಗಳಿವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿದ್ಧತೆಗಳು ನಡೆಯದೆ, ನಿರಂತರವಾಗಿ ನಡೆಯುತ್ತಿದೆ. ಈ ಸಮಾವೇಶದಲ್ಲಿ ಪಕ್ಷದ ಹಿರಿಯರು ಕಾರ್ಯಕರ್ತರಿಗೆ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಎಸ್‌.ಇ.ಸುರೇಶ್‌, ಹೊಳೆಹನ್ನೂರು ಮಂಡಲ ಅಧ್ಯಕ್ಷ ಎಂ. ಮಲ್ಲೇಶಪ್ಪ, ಸಂಚಾಲಕರಾದ ಜಿ.ಇ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಕೆ.ಬಿ.ಅಶೋಕ್‌ ನಾಯ್‌್ಕ, ಕೆ.ಜಿ.ಕುಮಾರ ಸ್ವಾಮಿ, ಗ್ರಾಮಾಂತರ ಮಂಡಲ ಪ್ರಭಾರಿ ರಮೇಶ್‌ (ರಾಮು), ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಂ.ಗಣೇಶ್‌, ಎಸ್‌. ಆರ್‌. ಚಂದ್ರಕುಮಾರ್‌, ಪ್ರಮುಖರಾದ ಅಣ್ಣಪ್ಪ ಆಯನೂರು, ಎಂ.ಬಿ.ಶಂಕರ ಮೂರ್ತಿ ಮತ್ತಿತರ ಪ್ರಮುಖರು ಹಾಜರಿದ್ದರು.