ಡಿವಿಎಸ್ ಎಂದರೆ Rankಗಳ ಕಾಲೇಜೆಂದು ಇಮೇಜ್ ರೂಪಿಸಿದ್ದ ವಿಡಿಆರ್ ಇನ್ನಿಲ್ಲ

*

ವಿಡಿಆರ್ ಎಂದೇ ಹೆಸರಾಗಿದ್ದ ವಿ. ದೇವೇಂದ್ರರವರು ಶುಕ್ರವಾರ ರಾತ್ರಿ 09.30ರ ವೇಳೆಯಲ್ಲಿ ಕೋಟೆ ರಸ್ತೆಯ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.

ವಿ. ದೇವೇಂದ್ರರವರು ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿದ್ದರು..

1972 ರಲ್ಲಿ ವಿ. ದೇವೇಂದ್ರರವರು, ಶಿವಮೊಗ್ಗದ ಡಿ ವಿ ಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಕಾಲೇಜಿನ ಭದ್ರ ಬುನಾದಿ ಹಾಕಿದವರು..

ಸುಧೀರ್ಘ 22 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, 30 ಏಪ್ರಿಲ್ 1994 ರಂದು ನಿವೃತ್ತರಾಗಿದ್ದರು.

ಡಿವಿಎಸ್ ಎಂದರೆ RANK ಗಳ ಕಾಲೇಜೆಂಬ ಹೆಸರನ್ನು ತರುವಲ್ಲಿ ಇವರು ಸಲ್ಲಿಸಿದ ಸೇವೆ ಮತ್ತು ಸಂಸ್ಥೆಯನ್ನು ಮುನ್ನೆಡೆಸಿದ ರೀತಿ ಶ್ಲಾಘನೀಯ.

ಡಿವಿಎಸ್ ಹೈಸ್ಕೂಲ್ ವಿಭಾಗದಲ್ಲಿ ಸಹ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿ, ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಪ್ರಾಚಾರ್ಯರ ಹುದ್ದೆಯಿಂದ ನಿವೃತ್ತಿಯಾದ ನಂತರ ಕೆಲಕಾಲ ಡಿವಿಎಸ್ ಸಂಸ್ಥೆಯ ಆಡಾಳಿಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದರು.

ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೇ ಪದವೀಧರರ ಸಹಕಾರ ಸಂಘದ ಸ್ಥಾಪನೆಯ ಮೂಲ ರೂವಾರಿಗಳಾಗಿದ್ದರು.
ಸಂಘದ ಪ್ರಥಮ ಉಪಾಧ್ಯಾಕ್ಷರಾಗಿ ಮತ್ತು ಕೆಲ ವರ್ಷಗಳ ಕಾಲ ಈ ಸಂಘದ ಅಧ್ಯಕ್ಷರಾಗಿಯೂ ಸಂಘದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದ್ದರು.

ಜಾವಳ್ಳಿ ಸಮೀಪದ ಜ್ಙಾನ ದೀಪ ಶಿಕ್ಷಣ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಮತ್ತು ಶೈಕ್ಷಣಿಕ ನಿರ್ದೇಶಕರಾಗಿಯೂ 1999 ರಿಂದ 2022 ರವರೆಗೆ ಸೇವೆ ಸಲ್ಲಿಸಿ, ಸದರಿ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದವರು.

*ಆರು ದಶಕಗಳಿಗೂ ಹೆಚ್ಚಿನ ಸಾರ್ಥಕ ಸೇವೆ ಸಲ್ಲಿಸಿರುವ ವಿಡಿಆರ್ ಎಂದೇ ಪ್ರಸಿದ್ದಿ* ಪಡೆದ ಒಬ್ಬ ಶ್ರೇಷ್ಟ ಶೈಕ್ಷಣಿಕ ತಜ್ಞರ ಅಗಲಿಕೆ ಈ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ.

ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ, ಅಸಂಖ್ಯಾತ ಶಿಷ್ಯ ವೃಂದ ಮತ್ತು ಸ್ನೇಹಿತರ ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಪೂರ್ವ ವಿಧಿಗಳು ಕೋಟೆ ರಸ್ತೆಯ, ಅಯ್ಯಪ್ಪ ಸ್ವಾಮಿ ದೇವಾಲಯದ ಎದುರಿನ ನಿವಾಸದಲ್ಲಿ, 06.04.2024ರ ಬೆಳಿಗ್ಗೆ 11 ಘಂಟೆಗೆ ಆರಂಭವಾಗಲಿದ್ದು, ಅಲ್ಲಿಯವರೆಗೂ ಮೃತರ ಅಂತಿಮ ದರ್ಶನಕ್ಕೆ ಅವಕಾಶವಿದೆ.

ನಂತರ 12 ರ ವೇಳೆಗೆ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಕಾರ್ಯ ನಡೆಯಲಿದೆ.

A E ರಾಜಶೇಕರ್.
ಪ್ರಾಚಾರ್ಯರು
ಡಿ ವಿ ಎಸ್ ಪ ಪೂ (ಸ್ವ) ಕಾಲೇಜು