ಬಿಜೆಪಿ ಎಷ್ಟು ಗೆಲ್ಲುವುದು ಹೇಳಿ? ಜೆಡಿಎಸ್ ಮಾತ್ರವಲ್ಲ ಬಿಜೆಪಿಯ ಕತೆಯೂ ಭಿನ್ನವಾಗಿಲ್ಲ.

ಬಿಜೆಪಿ ಎಷ್ಟು ಗೆಲ್ಲುವುದು ಹೇಳಿ?

ಜೆಡಿಎಸ್ ಮಾತ್ರವಲ್ಲ ಬಿಜೆಪಿಯ ಕತೆಯೂ ಭಿನ್ನವಾಗಿಲ್ಲ.

ಬೀದರ್ ನಲ್ಲಿ ಖೂಬಾಗೆ ಸ್ವಪಕ್ಷೀಯರೇ ಅಡ್ಡಗಾಲು,
ಕಲಬುರ್ಗಿಯಲ್ಲಿ ಜಾಧವ್ ಹಟಾವೋ ಎಂದು ಸ್ವಜಾತಿಯರೇ ಸಿಡಿದಿದ್ದಾರೆ, ರಾಧಾಕೃಷ್ಣಗೆ ಅದೃಷ್ಟ ಕಡೆಗೂ ಒಲಿದಿದೆ,
ರಾಯಚೂರಿನಲ್ಲಿ ಭಿನ್ನಮತ,
ಬಿಜಾಪೂರದಲ್ಲಿ ಗೌಡರು ಬೇಡ ಎಂದರೂ ಹಠ ತೊಟ್ಟಿರುವ ಜಿಗಜಿನ್ನಿಗೆ ಈ ಬಾರಿ ಭಾರೀ ಅಂತರದ ಸೋಲು ಕಾದಿದೆ, ಬಂಜಾರ, ಒಡ್ಡರು ಸಂಪೂರ್ಣ ಕಾಂಗ್ರೆಸ್ ನತ್ತ ವಾಲಿದ್ದಾರೆ,
ಚಿಕ್ಕೋಡಿಯಲ್ಲಿ ಜೊಲ್ಲೆ ಮುಗಿದ ಕತೆ,
ಪಾಪ ಬೆಳಗಾವಿಯಲ್ಲಿ ಶೆಟ್ಟರ್ ಪಂಚಮಸಾಲಿ ಹೊಡ್ತಕ್ಕೆ ಅಪ್ಪಚ್ಚಿ, ಮರಾಠಾ ಸಮುದಾಯ ಈ ಬಾರಿ ಸಂಪೂರ್ಣ ಕಾಂಗ್ರೆಸ್ ನತ್ತಾ ವಾಲಿದೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಶೂನ್ಯ ದಾಖಲೆ ಮಾಡುತ್ತಿರುವಾಗ,
ಉತ್ತರ ಕನ್ನಡದಲ್ಲಿ ಮರಾಠಾ ಅಂಜಲಿ ಯಾರಿಗೆ ಅಂಜಲಿ,
ಧಾರವಾಡದಲ್ಲಿ ಅಸೂಟಿಗೆ ಅದೃಷ್ಟ, ಜೋಶಿಗೆ ದಿಂಗಾಲೇಶ್ವರ ಕಪಾಳಮೋಕ್ಷ ಶತಸಿದ್ಧ,
ಶಿಗ್ಗಾಂವಿ ಬಿಟ್ಟರೆ ಎಲ್ಲೆಡೆ ಕಾಂಗ್ರೆಸ್ ಪರ ಹಾವೇರಿ ನ್ಯಾಯ, ಕುರುಬರು ಮುಸ್ಲಿಮರು ಒಡ್ಡರು ಬಂಜಾರ ನಾಯಕ ತಳವಾರ ಸಹಿತ, ಪಾಟೀಲ್ ನೆಹರೂ ಒಳಹೊಡ್ತ, ಬಣಕಾರ ಬಾಣಕ್ಕೆ ಬೊಮ್ಮಾಯಿ ಬಾಳುವೆ ಎಲ್ಲಿದೆ,
ದಾವಣಗೆರೆಯಲ್ಲಿ ಮಲ್ಲಣ್ಣನ ಮಾನದ ಪ್ರಶ್ನೆ, ಸಿದ್ದಣ್ಣ ಆಗಲೇ ಡೌನು,
ಬಳ್ಳಾರಿಯಲ್ಲಿ ರಾಮುಲು ಗೆಲ್ಲಲು ರೆಡ್ಡಿ, ಬಂಜಾರರು ಯಾಕೆ ಬಿಡುವರು,
ಕೊಪ್ಪಳದ ಅಭ್ಯರ್ಥಿ ಯಾರಿಗೆ ಗೊತ್ತು,
ಚಿತ್ರದುರ್ಗದಲ್ಲಿ ಕಾರಜೋಳ ನೆತ್ತಿಗೆ ಕಾರ ಅರಿಯಲು ಬಿಜೆಪಿಯವರೇ ಸಾಕು,
ತಮ್ಮನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿರುವ ಸೋಮಣ್ಣನನ್ನು ತುಮಕೂರಿನಲ್ಲಿ ಗೆಲ್ಲಿಸಲು ಯಡಿಯೂರಪ್ಪ ಯಾಕೆ ಬಿಡುವರು,
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆ ಸುಧಾಕರೆ ಶತ್ರು, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೇ ಮುನಿಯಪ್ಪ ಉಪ ಮುಖ್ಯಮಂತ್ರಿ, ರಮೇಶ್ ಕುಮಾರ್ ಮತ್ತೆ ಮಂತ್ರಿ, ನಜಿರೂ ಮಂತ್ರಿ, ಅವಕಾಶ ಬಿಡುವರೆ,
ಗ್ರಾಮಾಂತರ ಬೆಂಗಳೂರಿನಲ್ಲಿ ಡಾಕ್ಟರ್ ಗೆಲ್ಲಿಸಿ ಯಾರಿಗೆ ಪ್ರಯೋಜನ,
ಕುಮಾರಸ್ವಾಮಿ ಗೆಲ್ಲಿಸಿದರೆ ವಿಜಯೇಂದ್ರ ಸುಮಲತಾಗೆ ಮಂಡ್ಯದಲ್ಲಿ ಏನು ಲಾಭ,
ಮೈಸೂರು ಚಾಮರಾಜ ನಗರದಲ್ಲಿ ಮ್ಯಾಚ್ ಫಿಕ್ಸಾಗಿರುವಾಗ ಬಿಜೆಪಿಯ ಬಡಪಾಯಿ ಬಲಿಪಶು ಅಭ್ಯರ್ಥಿಗಳು ಏನು ಮಾಡಬಹುದು
ಮಂಗಳೂರಿನಲ್ಲಿ ಪುಜಾರಿ ಶಿಷ್ಯನೇ ಅಭ್ಯರ್ಥಿ ಬಿಜೆಪಿಯ ಅಪರಿಚಿತ ಚೋಟಾನನ್ನು ಗೆಲ್ಲಿಸಲು ಕಟಿಲುಗೆ ತಲೆ ಕೆಟ್ಟಿದೆಯೆ, ಇನ್ನು
ಉಡುಪಿಯಲ್ಲಿ ಬಂಟರ ಜಯಪ್ರಕಾಶ್ ಮುಂದೆ ಶ್ರೀನಿವಾಸ ಪೂಜಾರಿ ಅಷ್ಟೂ ಆಸ್ತಿ ಮಾರಿದರೂ ಗೆಲ್ಲೊಲ್ಲ ಇನ್ನು ಸಿಟಿ ರವಿ ಯಾಕಾಗಿ ಪೂಜರಿಗೆ ಓಟು ಹಾಕಿಸಿ ಭವಿಷ್ಯ ಕಳೆದುಕೊಳ್ಳುವ,
ಹಾಸನದಲ್ಲಿ ಅದಾಗಲೇ ಪಟೇಲ್ ಗೆದ್ದಾಗಿದೆ,
ಇನ್ನುಳಿದಿರುವುದು ಶಿವಮೊಗ್ಗ, ಈಶ್ವರಪ್ಪ ಬಂಡಾಯ ಆಯನೂರು ಮಂಜುನಾಥ್ , ಸುಕುಮಾರ ಶೆಟ್ಟಿ ಹಾಲಪ್ಪ ಯಾಕಾಗಿ ರಾಘವೇಂದ್ರ ಗೆಲ್ಲಿಸುವರು?…

ಅಲ್ಲಿಗೆ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಗೆಲ್ಲುವುದು ಬಲ್ಲವರು ಹೇಳಿರಿ?

#srs

#ಎಸ್ಸಾರೆಸ್