ಮೋದಿ ಮೋದಿ ಎನ್ನುವ ಮಕ್ಕಳಿಗೆ ಬಂಗಾರಪ್ಪನವರು ಮಾಡಿರುವ ಸಹಾಯವನ್ನು ತಂದೆ-ತಾಯಿಗಳು ನೆನಪಿಸಬೇಕು – ಎಂ.ರಮೇಶ್ ಶೆಟ್ಟಿ ಶಂಕರಘಟ್ಟ  

ಮೋದಿ ಮೋದಿ ಎನ್ನುವ ಮಕ್ಕಳಿಗೆ ಬಂಗಾರಪ್ಪನವರು ಮಾಡಿರುವ ಸಹಾಯವನ್ನು ತಂದೆ-ತಾಯಿಗಳು ನೆನಪಿಸಬೇಕು – ಎಂ.ರಮೇಶ್ ಶೆಟ್ಟಿ ಶಂಕರಘಟ್ಟ


ತೀರ್ಥಹಳ್ಳಿ

ಮೋದಿ ಮೋದಿ ಎಂಬ ಭ್ರಮಲೋಕದಲ್ಲಿ ತೇಲುತ್ತಿರುವ ನಮ್ಮ ಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರು ಮಾಡಿರುವ ಸಹಾಯದಿಂದ ನಮ್ಮ ಬದುಕು ಹಸನಾಗಿದೆ ಮತ್ತು ತೃಪ್ತಿಯಿಂದ ಬದುಕುತ್ತಿದ್ದೇವೆ ಎಂದು ಅವರ ತಂದೆ ತಾಯಿಗಳು ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಲೋಕಸಭಾ ಚುನಾವಣೆ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಇವರು ಅಭಿಪ್ರಾಯಪಟ್ಟರು.

ಅವರು ಇಂದು ತೀರ್ಥಹಳ್ಳಿ ತಾಲ್ಲೂಕಿನ ಗಾಜನೂರು,ಸಿಂಗನಬಿದ್ರೆ,ಮಂಡಗದ್ದೆ, ತೂದೂರು, ಬೆಜ್ಜುವಳ್ಳಿ, ಕನ್ನಂಗಿ ಹಾಗೂ ಹಣಿಗೆರೆಕಟ್ಟೆಯಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

35 ವರ್ಷಗಳ ಹಿಂದೆ ಬಂಗಾರಪ್ಪನವರು ಹತ್ತು ಹೆಚ್ ಪಿ ಪಂಪ್ಸೆಜಟ್ಗಸಳಿಗೆ ಉಚಿತವಾದ ವಿದ್ಯುತ್ ನೀಡದೇ ಹೋಗಿದ್ದಲ್ಲಿ ಸಣ್ಣ ಸಣ್ಣ ರೈತರು ತೋಟ-ಗದ್ದೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ರೈತರು ಇಂದು ತೋಟಗಳಿಗೆ ಬಳಸುತ್ತಿರುವ ವಿದ್ಯುತ್ ಬಿಲ್ ಕಟ್ಟಬೇಕಿದ್ದರೆ ತಿಂಗಳಿಗೆ 4-5 ಸಾವಿರ ರೂಪಾಯಿಗಳನ್ನು ಪಾವತಿಸಬೇಕಿತ್ತು. ಇಂದು ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕು ಕಟ್ಟಿಕೊಂಡಿದ್ದಾರೆಂದರೆ ಅದಕ್ಕೆ ಕಾರಣ ಬಂಗಾರಪ್ಪನವರು. ಗ್ರಾಮೀಣ ಭಾಗದ ಮಕ್ಕಳು ಇಂದು ದೊಡ್ಡ, ಡೊಡ್ಡ ಸರ್ಕಾರಿ ಹುದ್ದೆಯಲ್ಲಿದ್ದಾರೆಂದರೆ ಗ್ರಾಮೀಣ ಕೃಪಾಂಕದ ಕೃಪೆ. ಬಂಗಾರಪ್ಪಜಿಯವರ ಎಲ್ಲಾ ಕಾರ್ಯಕ್ರಮಗಳು ನಮಗೆ ಗೊತ್ತಿದೆ. ಆದರೆ ಮಕ್ಕಳಿಗೆ ಇದರ ಬಗ್ಗೆ ಅರಿವಿಲ್ಲ. ಇದನ್ನು ಮಕ್ಕಳಲ್ಲಿ ಜಾಗೃತೆ ಮೂಡಿಸುವ ಕಾರ್ಯವಾಗಬೇಕಿದೆ ಹಾಗು ನಮಗೆ ಸಹಾಯ ಮಾಡಿದವರ ಋಣ ತೀರಿಸಬೇಕಿದೆ ಎಂದು ತಿಳಿಸಬೇಕು ಎಂದರು.

ಬಡವರ ಮಕ್ಕಳಿಗೆ ಗಗನಕುಸುಮವಾಗಿದ್ದ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ, ಸಿಇಟಿ ಮೂಲಕ ಬಡವರ ಮಕ್ಕಳು ಇಂದು ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಾಗಿದೆ ಎಂದರೆ ಅದು ಕಾಂಗ್ರೆಸ್ ಪಕ್ಷದ ಕೊಡುಗೆ ಎಂದರು.

ಪ್ರಚಾರ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್, ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್,ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಕೆಪಿಸಿಸಿ ಉಸ್ತುವಾರಿ ಅನಿಲ್ ಕುಮಾರ್ ತಡಕಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಪ್ರಮುಖರಾದ ಸುಶ್ಮಾ ಸಂಜಯ್, ಸಚ್ಚೀಂದ್ರ ಹೆಗ್ಗಡೆ, ಡಾ.ಸುಂದರೇಶ್, ಹಾರೋಗಳಿಗೆ ಪದ್ಮನಾಭ್, ವೈ.ಎಚ್.ನಾಗರಾಜ್ ಮೊದಲಾದವರುಗಳು ಇದ್ದರು.