ಕುವೆಂಪು ವಿವಿ: ಪಿಜಿ (ಸ್ನಾತಕೋತ್ತರ) ಅಧ್ಯಾಪಕರಿಗೆ ನ್ಯಾಕ್ ಮೌಲ್ಯಮಾಪನ ಕುರಿತ ಕಾರ್ಯಾಗಾರ ಉನ್ನತ ಶಿಕ್ಷಣ ದೇಶದ ಅಭಿವೃದ್ಧಿ ನಿರ್ಧರಿಸುವ ಸಾಧನ ಎನ್.ಇ.ಪಿ.ಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಗುರಿ: ಡಾ. ಎಡ್ವರ್ಡ್
ಕುವೆಂಪು ವಿವಿ: ಪಿಜಿ (ಸ್ನಾತಕೋತ್ತರ) ಅಧ್ಯಾಪಕರಿಗೆ ನ್ಯಾಕ್ ಮೌಲ್ಯಮಾಪನ ಕುರಿತ ಕಾರ್ಯಾಗಾರ
ಉನ್ನತ ಶಿಕ್ಷಣ ದೇಶದ ಅಭಿವೃದ್ಧಿ ನಿರ್ಧರಿಸುವ ಸಾಧನ
ಎನ್.ಇ.ಪಿ.ಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳ ಗುರಿ: ಡಾ. ಎಡ್ವರ್ಡ್
ದೇಶವೊಂದರ ಯುವಸಮೂಹವನ್ನು ಉತ್ತಮ ಗುಣಮಟ್ಟದಿಂದ ಕೂಡಿದ ಮಾನವ ಸಂಪನ್ಮೂಲವಾಗಿ ರೂಪಿಸಬಲ್ಲ ಸಾಮರ್ಥ್ಯವಿರುವುದು ಉನ್ನತ ಶಿಕ್ಷಣಕ್ಕೆ ಮಾತ್ರ. ಅದನ್ನು ಸಾಧಿಸುವ ಸಶಕ್ತ ಸಾಧನವೇ ರಾಷ್ಟಿçÃಯ ಶಿಕ್ಷಣ ನೀತಿ (ಎನ್.ಇ.ಪಿ.) ಎಂದು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ವಾಣಿಜ್ಯ ನಿಖಾಯದ ಡೀನ ಡಾ. ಅಲೋಶಿಯಸ್ ಜೆ ಎಡ್ವರ್ಡ್ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಆಂತರಿಕ ಗುಣಮಟ್ಟ ಖಾತ್ರಿ ಘಟಕವು (ಐ.ಕ್ಯೂ.ಎ.ಸಿ.) ಶನಿವಾರ ವಿವಿಯ ಸ್ನಾತಕೋತ್ತರ ಅಧ್ಯಾಪಕರಿಗೆ ಪ್ರೊ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ‘ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅಧ್ಯಾಪಕರ ಪಾತ್ರ’ ಕುರಿತ ಕಾರ್ಯಾಗಾರದಲ್ಲಿ ಆಶಯ ನುಡಿಗಳನ್ನಾಡುತ್ತ ಅವರು ಮಾತನಾಡಿದರು. 2024ರಲ್ಲಿ ದೇಶದ ಶೇ. 57ರಷ್ಟು ಜನಸಂಖ್ಯೆಯು ದುಡಿಯುವ ವಯೋಮಾನದಲ್ಲಿರುವ ಜನರನ್ನು ಒಳಗೊಂಡಿದೆ. ಉನ್ನತ ಶಿಕ್ಷಣವು ವಿವಿಧ ಕಾರ್ಯಕ್ರಮಗಳ ಮೂಲಕ ಇವರಿಗೆ ಗುಣಮಟ್ಟದ ಶಿಕ್ಷಣ, ಕೌಶಲಗಳನ್ನು ನೀಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಎನ್‌ಇಪಿಯು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯವಾದ ಸಾಮರ್ಥ್ಯಗಳನ್ನು ರೂಢಿಸಲು ಪ್ರಯತ್ನಿಸುತ್ತಿದೆ. ಯಾವುದೇ ವಿಷಯಗಳನ್ನು ನೆನಪಿಡುವ ಶಕ್ತಿ, ಅರ್ಥೈಸುವಿಕೆ, ವಿಶ್ಲೇಷಣೆ, ತರ್ಕ, ಅನ್ವಯಿಸುವಿಕೆ, ಮೌಲ್ಯಮಾಪನ ಮತ್ತು ಹೊಸದನ್ನು ಉತ್ಪಾದಿಸುವ ಸಾಮರ್ಥ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಎಲ್ಲವನ್ನು ಸಾಧ್ಯವಾಗಿಸುವ ಮೂಲಭೂತ ಪಾತ್ರವನ್ನು ವಿಭಾಗಗಳಲ್ಲಿ ಶಿಕ್ಷಕರು ಹೊಂದಿದ್ದಾರೆ. ಶಿಕ್ಷಕರು ಸ್ವಸಾಮರ್ಥ್ಯವನ್ನು ಸಾಬೀತುಪಡಿಸಲು ನ್ಯಾಕ್ ಸಹಾಯಕವಾಗಲಿದೆ. ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇದನ್ನು ದಾಟಿಸಿದಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ದೇಶದ ಆರ್ಥಿಕತೆ, ಸಾಮಾಜಿಕ ಚಲನೆ, ಒಟ್ಟು ಉತ್ಪಾದಕತ್ವಗಳು ಹೆಚ್ಚಾಗುವ ಮೂಲಕ ದೇಶದ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಶಿಕ್ಷಕರ ಮೊದಲ ಆದ್ಯತೆ ವಿದ್ಯಾರ್ಥಿಗಳು, ಬೋಧನೆ ಮತ್ತು ಸಂಶೋಧನೆ ಆಗಿರಬೇಕು. ಹೆಚ್ಚೆಚ್ಚು ಲೇಖನಗಳು, ಪ್ರಾಜೆಕ್ಟ್ಗಳು, ಮತ್ತು ಪೇಟೆಂಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಇದು ಸಹಜವಾಗಿ ವಿವಿಗೆ ಉತ್ತಮ ರ‍್ಯಾಂಕಿAಗ್ ಒದಗಿಸಲಿದೆ. ಒಟ್ಟಾರೆಯಾಗಿ ವಿವಿ ವ್ಯಾಪ್ತಿಯ ಕ್ಯಾಂಪಸ್ ಹಾಗೂ ಕಾಲೇಜುಗಳಲ್ಲಿ ಉತ್ತಮ ಬೌದ್ಧಿಕ ಸಾಮರ್ಥ್ಯ ಬೆಳೆಯಲಿ ಮತ್ತು ಹೀಗೆಯೆ ವಿವಿಯು ಗುರುತಿಸಿಕೊಳ್ಳುವಂತಾಗಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಎ. ಎಲ್. ಮಂಜುನಾಥ್, ಐಕ್ಯೂಎಸಿ ನಿರ್ದೇಶಕ ಪ್ರೊ. ಎನ್ ಬಿ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿ ತುಮಕೂರು ವಿವಿಯ ಡಾ. ಶರತ್ಚಂದ್ರ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಯ ಸ್ನಾತಕೋತ್ತರ ವಿಭಾಗಗಳ ಎಲ್ಲ ಅಧ್ಯಾಪಕರು ಭಾಗವಹಿಸಿದ್ದರು.