ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಆರ್.ಎಮ್.ಮಂಜುನಾಥ್ ಗೌಡರವರ ಪತ್ರಿಕಾಗೋಷ್ಠಿ… ಕಾಂಗ್ರೆಸ್ ಗೆದ್ದೇ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ ಶರಾವತಿ ಸಂತ್ರಸ್ತರ ಹೆಸರಲ್ಲಿ ಸುಳ್ಳು ಹೇಳುತ್ತಿದೆ ಬಿಜೆಪಿ ಕಾಗೋಡು ತಿಮ್ಮಪ್ಪ ರವರ ಹೆಸರು ಹೇಳೋ ಯೋಗ್ಯತೆಯೂ ಬಿಜೆಪಿಗಿಲ್ಲ

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಆರ್.ಎಮ್.ಮಂಜುನಾಥ್ ಗೌಡರವರ ಪತ್ರಿಕಾಗೋಷ್ಠಿ…

ಕಾಂಗ್ರೆಸ್ ಗೆದ್ದೇ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ

ಶರಾವತಿ ಸಂತ್ರಸ್ತರ ಹೆಸರಲ್ಲಿ ಸುಳ್ಳು ಹೇಳುತ್ತಿದೆ ಬಿಜೆಪಿ

ಕಾಗೋಡು ತಿಮ್ಮಪ್ಪ ರವರ ಹೆಸರು ಹೇಳೋ ಯೋಗ್ಯತೆಯೂ ಬಿಜೆಪಿಗಿಲ್ಲ

ಮೊನ್ನೆ ನಡೆದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಜಿಲ್ಲೆಯ ಜನತೆ ಗೆಲ್ಲುವ ಆತ್ಮ ವಿಶ್ವಾದ ಶಕ್ತಿ ತುಂಬಿದ್ದಾರೆ
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಬಂದಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್, ಶಕ್ತಿ ತುಂಬಿದೆ. ಅವರೊಬ್ಬ ಕಾಂಗ್ರೆಸ್ ಸಂಘಟನೆಯ ಪ್ರಮುಖ ಶಕ್ತಿ ಮತ್ತು ಉತ್ತಮ ಸಂಘಟನಾತ್ಮಕ ನಾಯಕ
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲೆಯ ೮೦೦೦ ಬೂತಗಳಿಂದ ಸ್ವಂಪ್ರೇರಿತವಾಗಿ ಕಾರ್ಯಕರ್ತ ಬಂದು ಕಾಂಗ್ರೆಸ್ ಅಭ್ಯರ್ಥಿ ಬೆಂಬಲ ಸೂಚಿಸಿರುವುದು ನೋಡಿದರೇ ಜಿಲ್ಲೆಯಲ್ಲಿ ಗೀತಾರವರ ಗೆಲುವು ನಿಶ್ಚಿತ.
ಮೊದಲು ಗೆಲುತ್ತೇವೆ ಎನ್ನುತ್ತಿದ್ದೀವಿ ಈಗ ಗೆದ್ದೆ ಗೆಲ್ಲುತ್ತೆವೆ ಎನ್ನುವ ಭಾವನೆ ಬಂದಿದೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರ ಬಂದು ೯ ತಿಂಗಳಲ್ಲಿ ಪೂರ್ಣ ಗೊಳಿಸಿದ ಸರ್ಕಾರ ನಮ್ಮದು.
ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತೆ, ಗ್ರಾಮೀಣ ಪ್ರದೇಶ ಮಹಿಳೆಯರಲ್ಲಿ ಗ್ಯಾರಂಟಿ ಯೋಜನೆ ಹೊಸ ಶಕ್ತಿ ತುಂಬಿದೆ. ಅವರು ಅಶೀರ್ವಾದ ನಮ್ಮ ಅಭ್ಯರ್ಥಿ ಮೇಲಿದೆ.
ಗ್ಯಾರಂಟಿ ಯೋಜನೆ ಜಿಲ್ಲೆ ಸುಮಾರು ೭-೮ ಲಕ್ಷ ಜನರಿಗೆ ನೇರವಾಗಿ ತಲುಪಿಸಿದ ಹೆಮ್ಮೆಯ ಸರ್ಕಾರ ನಮ್ಮದು.
ಕೇವಲ ಸುಳ್ಳು ಹೇಳಿಕೊಂಡು ವ್ಯಾಪಾರ ಮಾಡುವ ಬಿಜೆಪಿಗೆ ತಕ್ಕ ಪಾಠವನ್ನು ಜನರು ಕಳಿಸುತ್ತಾರೆಂದರು.

ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಹಿಡುವಳಿ ಸಾಲ ೫ ಲಕ್ಷ ವರೆ ನೀಡಲಾಗುವುದು, ಕಾಂಗ್ರೆಸ್ ಸರ್ಕಾರ ದಿಂದ ಸುಮಾರು ೫೦೦-೬೦೦ ಕೋಟಿ ರೈತರ ಬಡ್ಡಿ ಮನ್ನಾ ಮಾಡಿದ್ದೇವೆ, ಬಿಜೆಪಿಯಂತೆ ರೈತ ವಿರೋಧಿ ನೀತಿ ಅನುಸರಿಸದೆ, ರೈತರ ಪರವಾಗಿ ನಿಂತ ಸರ್ಕಾರ ನಮ್ಮ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸರ್ಕಾರ.
ಎಮ್‌ಎಸ್‌ಪಿ ಜಾರಿ ತರುತ್ತೇವೆ ಎಂದೇ ಬಿಜೆಪಿ ಇಲ್ಲಿಯವರೆಗೆ ಜಾರಿಗೆ ತಂದಿಲ್ಲಿ, ಇದನ್ನು ಈ ಭಾರಿ ಕಾಂಗ್ರೆಸ್ ಮೈತ್ತಿಕೂಟ ಅಧಿಕಾರಿ ಬಂದರೆ ತರುತ್ತೇವೆ ಎಂದು ಘೋಷಣೆ ಮಾಡಿದೆ, ಇದರಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

(ಕನಿಷ್ಠ ಬೆಂಬಲ ಬೆಲೆ (ಒSP) ಎನ್ನುವುದು ಕೆಲವು ಕೃಷಿ ಉತ್ಪನ್ನಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಲೆಯಾಗಿದ್ದು, ಮುಕ್ತ ಮಾರುಕಟ್ಟೆ ಬೆಲೆಗಳು ತಗಲುವ ವೆಚ್ಚಕ್ಕಿಂತ ಕಡಿಮೆಯಿದ್ದರೆ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಲಾಗುತ್ತದೆ.)
ರೈತರ ಸಾಲದ ಮೇಲೆ ೧೮% ಜಿಎಸ್‌ಟಿ ಹಾಕಲಾಗುತ್ತಿದೆ. ಇದ್ದರಿಂದ ರೈತರಿಗೆ ಬಡ್ಡಿ ಜೊತೆ ಹೆಚ್ಚುವರಿಯಾಗಿ ಜಿಎಸ್‌ಟಿ ಕೂಡ ಹೊರೆಯಾಗಲಿದೆ.
ಮೊದಲು ಶರಾವತಿ ಮುಳುಗಡೆ ಹೋರಾಟ ಪಾದಯಾತ್ರೆ ಮಾಡಿದ್ದು ನಾವು ನಿನ್ನೆ ಯಾರೇ ಪತ್ರಿಕಾಗೋಷ್ಠಿ ಮಾಡಿ ಮುಳುಗಡೆ ಸಂತ್ರಸ್ಥರಿಗೆ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಹೇಳಿದ್ದಾರೆ, ಮೊದಲು ಇತಹಾಸ ತಿಳಿದುಕೊಳ್ಳಲಿ ಎಂದರು.

ಕಾಗೋಡು ತಿಮ್ಮಪ್ಪನವರ ಬಗ್ಗೆ ಮಾತನಾಡುವ ಮೊದಲು, ಅವರು ಏನು ಎಂಬುದು ತಿಳಿದುಕೊಂಡರೇ ಒಳಿತು,
ಮುಳುಗಡೆ ಸಂತ್ರಸ್ಥರು, ಬಗರ್‌ಹುಕುಂ, ಅರಣ್ಯಭೂಮಿ ಬಗ್ಗೆ ಸುಮಾರು ೮-೯ ಭಾರಿ ಮಧುಬಂಗಾರಪ್ಪನವರು ಸಂಬಂಧಪಟ್ಟವರೊಂದಿಗೆ ಮೀಟಿಂಗ್ ಮಾಡಿದ್ದಾರೆ, ಬಿಜೆಪಿಯವರಂತೆ ಸುಳ್ಳು ಹೇಳಿಕೊಂಡು ರೈತ ವಿರೋಧ ನೀತ ಅನುಸರಿಸುತ್ತಿಲ್ಲ ಎಂದರು.

ಪದೇ ಪದೇ ಸುಳ್ಳು ಹೇಳಿ ಸಂತ್ರಸ್ಥರಿಗೆ ದಾರಿ ತಪ್ಪಿಸಿ ಅವರ ಭಾವನೆ ಕೆರಳಿಸಬೇಡಿ ನಿಮ್ಮ ಕೈಯಲ್ಲಿ ಅವರು ಸಹಾಯ ಮಾಡಲು ಸಾಧ್ಯವಾಗಿದ್ದಾಗ ಸುಮ್ಮನೆ ಇರಿ, ಕಾಂಗ್ರೆಸ್ ಸರ್ಕಾರ ಅವರಿಗೆ ಏನು ಮಾಡಬೇಕು ಮಾಡುತ್ತದೆ ಎಂದರು.

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಸಂಘಟನೆ ಶಕ್ತಿ ಕೊಟ್ಟಿದ್ದಾರೆ. ಈಗ ಕಾರ್ಯಕರ್ತರೇ ಅಭ್ಯರ್ಥಿ ಪ್ರತಿ ಮನೆ-ಮನಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಉಪಸ್ಥಿತಿ :
ಆಯನೂರು ಮಂಜುನಾಥ್, ಮರಿಯಪ್ಪ, ರಮೇಶ್ ಹೆಗಡೆ, ರಮೇಶ್ ಶಂಕರಘಟ್ಟ ಶಿ.ಜು.ಪಾಶ, ಪದ್ಮನಾಭ ಜೆ ಡಿ ಮಂಜುನಾಥ್, ಶಶಿ, ಮೋಹನ್,