ಚಂದ್ರಶೇಖರನ್ ನಿವಾಸಕ್ಕೆ ಭೋವಿ ಸಮಾಜದ ಮುಖಂಡರ ಭೇಟಿ , ಸಾಂತ್ವಾನ
ಚಂದ್ರಶೇಖರನ್ ನಿವಾಸಕ್ಕೆ ಭೋವಿ ಸಮಾಜದ ಮುಖಂಡರ ಭೇಟಿ , ಸಾಂತ್ವಾನ
ಶಿವಮೊಗ್ಗ : ಆಧಿಕಾರಿಗಳ ಒತ್ತಡದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಮಹರ್ಷಿ ವಾಲ್ಮೀಕಿ ನಿಗಮದ ಬೆಂಗಳೂರು ಕಚೇರಿ ಅಧೀಕ್ಷಕ ಶಿವಮೊಗ್ಗದ ಚಂದ್ರಶೇಖರ್ ಅವರ ವಿನೋಬನಗರದ ನಿವಾಸಕ್ಜೆ ಗುರುವಾರ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಭೋವಿ ಸಮಾಜದ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಕುಟುಂಬದರೊಂದಿಗೆ ಮಾತುಕತೆ ನಡೆಸಿದ ಸಮಾಜದ ಮುಖಂಡರು, ಚಂದ್ರಶೇಖರನ್ ಸಾವಿಗೆ ನ್ಯಾಯ ಸಿಗಬೇಕು, ಈ ನಿಟ್ಟಿನಲ್ಲಿ ತಾವು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಸಮಾಜದ ಮುಖಂಡರು ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ಮಾತನಾಡಿ, ಅತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ಅವರು ಭೋವಿ ಸಮಾಜಕ್ಕೆ ಸೇರಿದವರು. ಸಮಾಜದ ಜತೆಗೆ ಸಂಪರದಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಧೈರ್ಯ ಹೇಳಿ, ನೈತಿಕವಾಗಿ ಜತೆಗಿರುವ ಕಾತಣಕ್ಕೆ ನಿವಾಸಕ್ಕೆ ಭೇಟಿ ನೀಡಲಾಗಿತ್ತು ಎಂದರು.
ನಾವು ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದೇವೆ. ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.ಈನಿಟ್ಟಿನಲ್ಲಿ ಸರ್ಕಾರಕ್ಕೆ ಮಾವು ಮನವಿ ಮಾಡಲಿದ್ದೇವೆ ಎಂದರು.ಈ ಸಂದರ್ಭದಲ್ಲಿ ಎಸ್. ರವಿಕುಮಾರ್ ಅವರೊಂದಿಗೆ ಭೋವಿ ಸಮಾಜದ ಮುಖಂಡರಾದ ತಿಮ್ಮರಾಜು,ಕೆ. ಮಾರಪ್ಪ, ಮಂಜುನಾಥ್, ಕೆ.ಹರ್ಷ ಭೋವಿ, ವಿರೇಶ್ ಕ್ಯಾತಿನಕೊಪ್ಪ, ದೇಶಾದ್ರಿ ಹೊಸ್ಮನೆ ಇದ್ದರು.