ಶಿವಮೊಗ್ಗ ಬ್ರೈಟ್ ಹೋಟೆಲ್ಲಿನಲ್ಲಿ 7ಲಕ್ಷ ರೂ ಹಣ ಕದ್ದಿದ್ದ ಸರ್ವರ್ ಹೇಮಂತನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು

ಶಿವಮೊಗ್ಗ ಬ್ರೈಟ್ ಹೋಟೆಲ್ಲಿನಲ್ಲಿ 7ಲಕ್ಷ ರೂ ಹಣ ಕದ್ದಿದ್ದ ಸರ್ವರ್ ಹೇಮಂತನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು

ಗ್ರಾಹಕರೊಬ್ಬರ 7 ಲಕ್ಷ ರೂ., ನಗದು ಹಣವಿದ್ದ ಬ್ಯಾಗನ್ನು ಕದ್ದಿದ್ದ ಶಿವಮೊಗ್ಗದ ಬ್ರೈಟ್ ಹೋಟೆಲ್ ನ ಸರ್ವರ್ ಹೇಮಂತ್ ನನ್ನು ಬಂಧಿಸಿರುವ ದೊಡ್ಡಪೇಟೆ ಠಾಣೆಯ ಪೊಲೀಸರು ಕದ್ದಿದ್ದ 7 ಲಕ್ಷ ರೂ., ಹಣವನ್ನು ವಶಕ್ಕೆ ಪಡೆದಿದ್ದಾರೆ.

ಜೂನ್ 4 ರಂದು ಸಾಗರ ತಾಲ್ಲೂಕಿನ ಜಂಬಾನಿ ಗ್ರಾಮದ ಲೋಕೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಬ್ರೈಟ್ ಹೋಟೆಲ್ಲಿಗೆ ಊಟಕ್ಕೆಂದು ಬಂದಿದ್ದರು. ಜೊತೆಗೆ ನಗದು ಹಣವಿದ್ದ ಬ್ಯಾಗ್ ತಂದಿದ್ದರು. ಊಟದ ನಂತರ ಬ್ಯಾಗನ್ನು ಟೇಬಲ್ ಮೇಲೆಯೇ ಮರೆತು ಹೋಗಿದ್ದರು. ಊಟದ ನಂತರ ಕಾರಲ್ಲೂ ಬ್ಯಾಗ್ ನೋಡಿದ್ದಾರೆ‌. ಅದು ಕಾಣದಿದ್ದಾಗ ವಾಪಸ್ ಬಂದು ಹೋಟೆಲ್ ನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ.

ಆಗ, ಸರ್ವರ್ ಹೇಮಂತ್ ಕುಮಾರ್ ಹಣದ ಬ್ಯಾಗನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಂಡುಬಂದಿದೆ. ಆಗ ಹೇಮಂತನಿಗೆ ಫೋನ್ ಮಾಡಿ ಕೇಳಲಾಗಿದೆ. ಯಾವುದೇ ಬ್ಯಾಗ್, ನಗದು ಹಣ ತೆಗೆದುಕೊಂಡಿಲ್ಲ ಎಂದು ಫೋನ್ ಕಟ್ ಮಾಡಿದ್ದಾನೆ.
ಬೆಳಿಗ್ಗೆ ಹೋಟೆಲ್ ಕೆಲಸಕ್ಕೂ ಬರದೇ ತಪ್ಪಿಸಿಕೊಂಡಿದ್ದಾನೆ.

ನಂತರ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಬಾಬು ಆಂಜಿನಪ್ಪ ಮೇಲ್ವಿಚಾರಣೆಯಲ್ಲಿ ಪಿಐ ರವಿ ಪಾಟೀಲ್ ನೇತೃತ್ವದಲ್ಲಿ ಪಿಎಸ್ ಐ ಸುರೇಶ್, ಹೆಚ್ ಸಿ ತಿಮ್ಮಾಬೋವಿ, ಅಣ್ಣಪ್ಪ, ಸುರೇಶ್, ಪಾಲಾಕ್ಷ ನಾಯ್ಕ, ಸಿಪಿಸಿ ಚಂದ್ರಾನಾಯ್ಕ, ಮನೋಹರ್, ನಿತಿನ್, ಪುನೀತ್ ರಾವ್, ಬಸವರಾಜ್ ಇದ್ದ ತನಿಖಾ ತಂಡ 7 ಲಕ್ಷ ರೂ., ನಗದು ಹಣವನ್ನು ಅಮಾನತು ಪಡಿಸಿಕೊಂಡು ಆರೋಪಿ ಹೇಮಂತ ಕುಮಾರನನ್ನು ಬಂಧಿಸಿದ್ದಾರೆ.