ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ ಬಲ್ಕೀಶ್ ಬಾನುರವರು ಈ ಸಂದರ್ಭಕ್ಕೆ ಏಕೆ ಮುಖ್ಯವಾಗುತ್ತಾರೆಂದರೆ…*

*ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ ಬಲ್ಕೀಶ್ ಬಾನುರವರು ಈ ಸಂದರ್ಭಕ್ಕೆ ಏಕೆ ಮುಖ್ಯವಾಗುತ್ತಾರೆಂದರೆ…*

ನಾನು ಬಹಳ ಹೆಮ್ಮೆ ಪಡುವ ಜೀವ ಶ್ರೀಮತಿ ಬಲ್ಕೀಶ್ ಬಾನು. ಇವತ್ತು ಅವರು ಎಂ ಎಲ್ ಎ ಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು. ಅವರಿಗೆ ಮೊದಲಿಗೆ ಅಭಿನಂದನೆಗಳು…

ಮೊನ್ನೆ ಮೊನ್ನೆ ಮೈಸೂರಲ್ಲಿ ಬಹಳ ಹೊತ್ತು ಜೊತೆಗಿದ್ದರು(ಆಯನೂರು ಮಂಜಣ್ಣನ ನಾಮಿನೇಷನ್ ದಿನ). ನಾನು ಮತ್ತು ನನ್ನ ಮಂಜುನಾಥ ವಡ್ಡಿನಕೊಪ್ಪ ಹಳೆಯ ನೆನಪುಗಳನ್ನು ಕೆದಕುತ್ತಾ, ಸಹ್ಯಾದ್ರಿ ಕಾಲೇಜಿನ ಮುಂದೆ ಬಲ್ಕೀಶ್ ಮೇಡಂ ಕಾರಿಗೆ ಅಡ್ಡ ನಿಂತು ಪ್ರತಿಭಟನೆ ಮಾಡಿದ್ದನ್ನು ನೆನಪಿಸಿದೆವು. ಆ ರಸ್ತೆ ತಡೆ ಮಾಡಿದ ವಿದ್ಯಾರ್ಥಿಗಳಾಗಿದ್ದ ನಮ್ಮ ಸಮಸ್ಯೆ ಆಲಿಸಿ ಕೂಡಲೇ ಅದನ್ನು ಬಗೆಹರಿಸಿದ್ದರು. ಆ ನೆನಪು ಬಲ್ಕೀಶ್ ಮೇಡಂರವರಿಗೂ ಇದ್ದಿದ್ದನ್ನು ಅವರೇ ನೆನಪಿಸಿಕೊಂಡರು.

ಅವರು ಜಿಲ್ಲಾ ಪಂಚಾಯತ್ ಗೆ ಅಧ್ಯಕ್ಷರಾದಾಗ ನಾನು ವಿದ್ಯಾರ್ಥಿಯೂ ಜೊತೆಗೆ ಪೂರ್ಣ ಕಾಲಿಕ ಪತ್ರಕರ್ತನೂ ಆಗಿದ್ದೆ. ಅವರ ಪತ್ರಿಕಾಗೋಷ್ಠಿಗಳು, ಸಭೆಗಳ ವರದಿ ಮಾಡುತ್ತಿದ್ದೆ. ಅವರದೊಂದು ವಿಶೇಷ ಸಂದರ್ಶನ ಕೂಡ ಆಗ ಮಾಡಿದ್ದೆ‌.

ಆಗಿನಿಂದಲೇ *ಪಾಶಾ* ಅಂತ ತಾಯಿ ಪ್ರೀತಿಯಿಂದ ಕರೆಯಲಾರಂಭಿಸಿದ್ದ ಬಲ್ಕೀಶ್ ಬಾನು ಮೇಡಂರವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಲು ಹೋದಾಗಲೂ ಅದೇ *ಪಾಶಾ* ಎಂಬ ಉದ್ಘಾರ! ಅದೇ ಅತ್ಯಾಪ್ತ ತಾಯಿ ಪ್ರೀತಿ…

ಅವರಿಗೆ ಎಂ ಎಲ್ ಸಿ ಸ್ಥಾನ ಹುಡುಕಿಕೊಂಡು ಬಂದಿದೆ. ಅವರು ಅದನ್ನು ಆರು ವರ್ಷಗಳ ಕಾಲ ಅತ್ಯದ್ಭುತವಾಗಿ ನಿಭಾಯಿಸಬಲ್ಲರು.ಅವರನ್ನು ಕೇವಲ ಅಲ್ಪಸಂಖ್ಯಾತರ ಪ್ರತಿನಿಧಿಯಂತೆ ಬಿಂಬಿಸದೇ ಸರ್ವ ಜನಾಂಗದ ಶಾಂತಿಯ ತೋಟದ ಮಾಲಿ ಎಂಬಂತೆ ನೋಡುವಂತಾಗಲಿ…ಅಂಥ ಸರ್ವ ಧರ್ಮ ಸಮನ್ವಯಿ ನಮ್ಮ ಬಲ್ಕೀಶಮ್ಮ…

ಅವರಿಗೆ ಮತ್ತೊಮ್ಮೆ ಅಭಿನಂದನೆ…
(ಚಿತ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮುಜ್ಜು ಭಾಯ್, ಕಿರಿಯ ಮಿತ್ರ ಶಿವು ಇದ್ದಾರೆ)

– *ಶಿ.ಜು.ಪಾಶ*
ಸಂಪಾದಕರು
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ,ಶಿವಮೊಗ್ಗ
( 8050112067)