ಶಿವಮೊಗ್ಗ ಡಿಸಿಸಿ ಬ್ಯಾಂಕಲ್ಲಿ ನೇಮಕಾತಿ ಮಹಾಗೋಲ್ ಮಾಲ್- ಚುನಾವಣೆ ಹೊತ್ತಲ್ಲಿ ಆಯನೂರು ಹಾಕಿದ ಬಾಂಬ್ ಎಂಥದ್ದು!?
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಡಿಸಿಸಿ ಬ್ಯಾಂಕ್)ನ ಇತ್ತೀಚಿನ ನೇಮಕಾತಿಯಲ್ಲಿ ಮಹಾ ಭ್ರಷ್ಟಾಚಾರ ನಡೆದಿದೆ. 84 ಹುದ್ದೆಗಳ ಈ ನೇಮಕಾತಿ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ. ನೇಮಕಾತಿಗೆ ಸುಮಾರು 50 ಲಕ್ಷ ರೂ., ಗಳ ವರೆಗೆ ಲಂಚ ಪಡೆಯಲಾಗಿದೆ. ಈ ಲಂಚದ ಹಣವನ್ನು ನೇಮಕಗೊಂಡವರ ಹೆಸರಲ್ಲಿಯೇ ಸಾಮೂಹಿಕ ಸಾಲ ನೀಡಿ ಪಡೆದಿರುವುದು ನಿಚ್ಚಳವಾಗಿದೆ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಹು ಗಂಭೀರ ಆರೋಪ ಮಾಡಿದ್ದಾರೆ.
2023ರಲ್ಲಿ ನಡೆದ ಬ್ಯಾಂಕಿನ ನೇಮಕಾತಿಯಲ್ಲಿ ನಡೆದಿರುವ ಲೋಪಗಳು:-
ನೇಮಕಾತಿ ಸಂಬಂಧ ಅರ್ಜಿ ಪರಿಶೀಲನೆ ನಂತರ ತಿರಸ್ಕೃತಗೊಂಡ ಅರ್ಜಿದಾರರಲ್ಲಿ ಅನೇಕರು ಈ ಬಗ್ಗೆ ಲಿಖಿತವಾಗಿ ಸ್ಪಷ್ಟಿಕರಣವನ್ನು ಕೇಳಿದಾಗ್ಯೂ ಸ್ಪಷ್ಟಿಕರಣ ನೀಡಿರುವುದಿಲ್ಲ ಹಾಗೂ ಅವರು ನೀಡಿದ ಮನವಿ ಪತ್ರವನ್ನು ಕಛೇರಿ ಕಡತದಲ್ಲಿ ಇರಿಸಿರುವುದಿಲ್ಲ.
• ಅರ್ಜಿಗಳ ಪರಿಶೀಲನೆ ನಂತರ ಪರೀಕ್ಷಾ ದಿನಾಂಕವನ್ನು ಗೊತ್ತುಪಡಿಸುವ ಸಂದರ್ಭದಲ್ಲಿ ನೇಮಕಾತಿ ಸಮಿತಿ ಸಭೆಯನ್ನಾಗಲಿ ಅಥವಾ ಆಡಳಿತ ಮಂಡಲಿ ಸಭೆಯನ್ನಾಗಲಿ ನಡೆಸದೆ ಅಂದಿನ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಅಧ್ಯಕ್ಷರು ಸ್ವಯಂ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ.
• ಲಿಖಿತ ಪರೀಕ್ಷೆ ನಡೆಸುವ ಸಂಬಂಧ ಅಧಿಕೃತ ವಿಶ್ವ ವಿದ್ಯಾನಿಲಯಗಳಿಂದ ನಡೆಸಬೇಕಾಗಿದ್ದು ಅಂತಹ ವಿಶ್ವ ವಿದ್ಯಾನಿಲಯಗಳ ಮಾಹಿತಿ ಪಡೆದು ಆಡಳಿತ ಮಂಡಲಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಂಡಲ ಅಥವಾ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಇವರ ಸಲಹೆಯನ್ನು ಕೂಡ ಪಡೆದಿರುವುದಿಲ್ಲ.
• ಲಿಖಿತ ಪರೀಕ್ಷೆಯನ್ನು ಯಾವ ಸಂಸ್ಥೆಗೆ ನೀಡಲಾಗಿದೆ ಹಾಗೂ ಯಾವ ಅರ್ಹತೆ ಮತ್ತು ಮಾನದಂಡಗಳನ್ನು ಅನುಸರಿಸಿ ಅವರಿಗೆ ಈ ಕೆಲಸವನ್ನು ವಹಿಸಲಾಗಿದೆ ಎನ್ನುವುದರ ಬಗ್ಗೆ ಆಡಳಿತ ಮಂಡಲಿಗೆ ಮಾಹಿತಿ ನೀಡಿರುವುದಿಲ್ಲ ಹಾಗೂ ಆ ಸಂಸ್ಥೆಗೆ ರೂ.38,64,500/- ಗಳನ್ನು ಪಾವತಿಸಿರುವುದು ಸಹ ಆಡಳಿತ ಮಂಡಲಿಯ ಒಪ್ಪಿಗೆ ಪಡೆದಿರುವುದಿಲ್ಲ ಅಥವಾ ಅನುಮೋದನೆಯನ್ನು ಪಡೆದಿರುವುದಿಲ್ಲ.
• ಲಿಖಿತ ಪರೀಕ್ಷೆ ನಡೆಸುವ ಸಂಸ್ಥೆಯವರು ಎಲ್ಲಾ ಪ್ರಕ್ರಿಯೆಕೈಗೊಳ್ಳಲು ರೂ.40,00,000/- ತಗಲುವುದಾಗಿ ದಿನಾಂಕ 19-09-2022 ರಂದು ದರಪಟ್ಟಿ ನೀಡಿರುತ್ತಾರೆ. ಆದರೆ ನೇಮಕಾತಿ ಸಮಿತಿ ಸಭೆಯಲ್ಲಿ ದಿನಾಂಕ 05-09-2022 ರಂದೇ ಅಂದರೆ ದರಪಟ್ಟಿಯನ್ನು ಸಲ್ಲಿಸುವುದಕ್ಕಿಂತ ಮುಂಚಿತವಾಗಿಯೇ ಸಭೆಗೆ ಮಂಡಿಸಿ ಅನುಮೋದಿಸಲಾಗಿದೆ ಇದು ಅನುಮಾನಸ್ಪದವಾಗಿದೆ.
• ಲಿಖಿತ ಪರೀಕ್ಷೆಗೂ ಮುನ್ನ ಸಂಸ್ಥೆಯೊಂದಿಗೆ ಯಾವ ರೀತಿ ಮಾತುಕತೆ ನಡೆಸಿರುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ.
• ದಿನಾಂಕ: 13-11-2022ರಂದು ಲಿಖಿತ ಪರೀಕ್ಷೆ ನಡೆಸಲು ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ದಿನಾಂಕ: 17-10-2022 ರಂದು ಕರೆಪತ್ರವನ್ನು ಕಳುಹಿಸಲಾಗಿದೆ. ಆದರೇ ಈ ಮಧ್ಯೆ ಕೆಲವು ಅಭ್ಯರ್ಥಿಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್: 22251/2022ನ್ನು ಸಲ್ಲಿಸಿ 84 ಹುದ್ದೆಗಳ ನೇಮಕಾತಿ ಸಂಬಂಧ ಬ್ಯಾಂಕಿನಿಂದ 2019 ರಲ್ಲಿ ನೇಮಕಾತಿ ಪ್ರಕಟಣೆ ಹೊರಡಿಸಿ ಈ ಸಂಬಂಧ ಎಲ್ಲಾ ಪ್ರಕ್ರಿಯೆಯನ್ನು ಕೈಗೊಂಡು ಪರೀಕ್ಷಾ ದಿನಾಂಕವನ್ನು ಸಹ ನಿಗದಿಪಡಿಸಿ ಲಿಖಿತ ಪರೀಕ್ಷೆಗೆ ಕರೆಪತ್ರವನ್ನು ಕಳುಹಿಸಿ ಕೊಡಲಾಗಿತ್ತು. ಆದರೆ ಸದರಿ ಲಿಖಿತ ಪರೀಕ್ಷೆಯನ್ನು ಮುಂದೂಡಿ ಮುಂದಿನ ದಿನಾಂಕವನ್ನು ತಿಳಿಯಪಡಿಸುವುದಾಗಿ ಹೇಳಲಾಗಿತ್ತು. ಆದರೆ ಸದರಿ ಮುಂದೂಡಿದ ಪರೀಕ್ಷೆಯನ್ನು ನಡೆಸದೆ ಇದೀಗ ಹೆಚ್ಚುವರಿ 14 ಹುದ್ದೆಗಳನ್ನೊಳಗೊಂಡಂತೆ ಒಟ್ಟು 98 ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದ್ದು ಈ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿರುತ್ತಾರೆ.
• ಈ ಸಂಬಂಧ ಬ್ಯಾಂಕಿಗೆ ದಿನಾಂಕ: 16-11-2022 ರಂದು ಗೌರವ ಮಾನ್ಯ ಉಚ್ಚ ನ್ಯಾಯಾಲಯದಿಂದ ನೋಟೀಸ್ ಸ್ವೀಕೃತವಾಗಿದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ನ್ಯಾಯಾಲಯದಲ್ಲಿ ನೇಮಕಾತಿ ವಿರುದ್ಧ ರಿಟ್ ಪಿಟಿಷನ್ ಸಲ್ಲಿಸಿ ನೋಟೀಸ್ ಸ್ವೀಕೃತವಾಗಿದ್ದರೂ ಸಹ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದ್ದು ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ದಾಖಲಾಗಿರುವುದು ಅಥವಾ ನ್ಯಾಯಾಲಯದಿಂದ ಈ ಸಂಬಂಧ ನೋಟೀಸ್ ಸ್ವೀಕೃತವಾಗಿರುವ ಬಗ್ಗೆ ಆಡಳಿತ ಮಂಡಲಿ ಸಭೆಯ ಗಮನಕ್ಕೆ ತಂದಿರುವುದಿಲ್ಲ.
• ಲಿಖಿತ ಪರೀಕ್ಷೆಗೆ ಗೈರು ಹಾಜರಾದ ಅಭ್ಯರ್ಥಿಗಳ ಮೂಲ ಪುಟವನ್ನು ಕಿತ್ತು ಹಾಜರಾದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳೊಂದಿಗೆ ಸಂಗ್ರಹಿಸಿ ಕೊಂಡಿದ್ದು ಇದರಿಂದ ಗೈರು ಹಾಜರಾದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಿರುವುದಾಗಿ ಪರಿಗಣಿಸಲಾಗಿದೆ.
ಲಿಖಿತ ಪರೀಕ್ಷೆ ನಡೆದ ನಂತರ ಅಭ್ಯರ್ಥಿಗಳಿಂದ ಪ್ರಶ್ನೆಪತ್ರಿಕೆಗಳನ್ನು ವಾಪಾಸ್ಸು ಪಡೆದಿರುವುದು ಅನುಮಾನಸ್ಪದವಾಗಿದೆ.
ಲಿಖಿತ ಪರೀಕ್ಷೆಯಲ್ಲಿ ಪಡೆದಿರುವ ಮೆರಿಟ್ ಅಂಕಗಳ ಪಟ್ಟಿಯನ್ನು ಆಡಳಿತ ಮಂಡಲಿಗೆ ಮಂಡಿಸಿರುವುದಿಲ್ಲ ಮತ್ತು ನಂತರದಲ್ಲಿ ಶಾರ್ಟ್-ಲಿಸ್ಟ್ (Short list) ಮಾಡಿರುವುದನ್ನು ಆಡಳಿತ ಮಂಡಲಿಗೆ ಮಂಡಿಸಿರುವುದಿಲ್ಲ.
• ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಕರೆದಿರುವ ಬಗ್ಗೆ ಯಾವುದೇ ಮಾಹಿತಿ ಆಡಳಿತ ಮಂಡಲಿಗೆ ನೀಡಿರುವುದಿಲ್ಲ.
• ಮಾದರಿ ಉತ್ತರವನ್ನು ವೆಬ್‌ಸೈಟ್‌ನಲ್ಲಿ ಅವಧಿ ಮೀರಿದ ಮೇಲೆ ಪ್ರಕಟಿಸಿದ್ದು, ಮತರ ಅದರಲ್ಲಿ ತಪ್ಪು ಉತ್ತರ ಎಂದು ಮತ್ತೆ ತಿದ್ದುಪಡಿ ಉತ್ತರವನ್ನು ಪ್ರಕಟಿಸಿದ್ದು, ಈ ಬಗ್ಗೆ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದು ಎಲ್ಲಾ ಅಭ್ಯರ್ಥಿಗಳ ಗಮನಕ್ಕೆ ಬಂದಿರುವುದಿಲ್ಲ. ಅವರಿಗೆ ಬೇಕಾದವರನ್ನು ಉತ್ತೀರ್ಣಗೊಳಿಸುವ ಉದ್ದೇಶವಿದೆ ಎಂಬ ಅನುಮಾನವಿರುತ್ತದೆ.
ಸ್ವೀಕೃತವಾದ ಅನೇಕ ಆಕ್ಷೇಪಣೆಗಳಿಗೆ ಬ್ಯಾಂಕಿನಿಂದ ಸಮಜಾಯಿಷಿ నింటి గిద్దు యావుద ಸಮಜಾಯಿಷಿಯನ್ನು ನೀಡಿರುವುದಿಲ್ಲ ಹಾಗೂ ಕೆಲವು ಅಭ್ಯರ್ಥಿಗಳು ಒಂದೇ ಪ್ರಶ್ನೆಗೆ ಎರಡು ಉತ್ತರಗ ಸರಿಯಾಗಿರುವದರ ಬಗ್ಗೆ ತಿಳಿಸಿದ್ದು ಇವುಗಳಲ್ಲಿ ಯಾವುದನ್ನು ಪರಿಗಣಿಸಲಾಗಿದೆ ಎಂಬುದರ ಬಗ್ಗೆ ಹಕ್ಕ ಪಡಿಸಿರುವುದಿಲ್ಲ.
• ಸಂದರ್ಶನಕ್ಕೆ ಕರೆದಿರುವ ಬಹಳಷ್ಟು ಅಭ್ಯರ್ಥಿಗಳಿಗೆ ‘ಸಂದರ್ಶನ ಕರೆ ಪತ್ರ’ವನ್ನು ನಿಯಮಾನುಸಾರ ಉಚೆ ಮೂಲಕ ಕಳುಹಿಸದೇ ದೂರವಾಣಿ ಮೂಲಕ ಕರೆಯಿಸಿಕೊಂಡು ಸಂದರ್ಶನ ದಿನದಂದು ಪ್ರಧಾನ ಕಛೇರಿಯಲ್ಲಿ ಖುದ್ದಾಗಿ ಸಂದರ್ಶನ ಪತ್ರವನ್ನು ನೀಡಿರುವುದು ಅನುಮಾನಸ್ಪದವಾಗಿದೆ.
. ಸಂದರ್ಶನದ ಕರೆಪತ್ರಗಳನ್ನು ಕಳುಹಿಸಿದ ನಂತರ ಕೆಲವು ಜನರಿಗೆ ಮಾತ್ರ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಬದಲಿಸಿ ಪರಿಷ್ಕೃತ ಸಂದರ್ಶನದ ಕರೆಪತ್ರವನ್ನು ಕಳುಹಿಸಿದ್ದು ಈ ಪೈಕಿ 18 ಜನ ಕಿರಿಯ ಸಹಾಯಕರು ಹಾಗೂ ಆಯ್ಕೆಯಾದ ಎಲ್ಲಾ 22 ಜನ ಅಟೆಂಡರ್‌ಗಳು ಒಳಗೊಂಡಿರುವುದು ಅನುಮಾನಸ್ಪದವಾಗಿದೆ.
• ನೇಮಕಾತಿಗೆ ಆಯ್ಕೆಯಾದ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಇದುವರೆಗೂ ಆಡಳಿತ ಮಂಡಲಿಗೆ ಮಂಡಿಸಿ ಒಪ್ಪಿಗೆ ಪಡೆದಿರುವುದಿಲ್ಲ.
• ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನಿಯಮಾನುಸಾರ ನೋಂದಣಿ ಅಂಚೆ ಮೂಲಕ
ಕಳುಹಿಸಬೇಕಾಗಿತ್ತು ಆದರೆ, ಖುದ್ದಾಗಿ ಕರೆಯಿಸಿ ಅದೇ ದಿನ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಸಿಕೊಡಲಾಗಿದೆ.
• ನೇಮಕಾತಿ ಆದೇಶದ ಉಲ್ಲೇಖ (2)ರ ದಿನಾಂಕ: 02-03-2023ರ ಆಡಳಿತ ಮಂಡಲಿ ಸಭೆಯ ತೀರ್ಮಾನವೆಂದು ತಿಳಿಸಲಾಗಿದ್ದು ವಾಸ್ತವವಾಗಿ ಆ ದಿನ ಆಡಳಿತ ಮಂಡಲಿಯ ಸಭೆಯನ್ನೇ ನಡೆಸಿರುವುದಿಲ್ಲ.
ಬ್ಯಾಂಕಿನ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಿಸಿದ್ದು ನೌಕರರಿಗೆ 2.7,14,45,823/- 2 23-10-2020 doch b ಉಳಿತಾಯ ಖಾತೆಗೆ ಜಮಾ ಪಡಿಸಿದ್ದು ಅದೇ ದಿನ ಉಳಿತಾಯ ಖಾತೆಯಿಂದ ಹಣವನ್ನು ವಾಪಸ್ಸು ಪಡೆದು ಬ್ಯಾಂಕಿನ ನೌಕರರ ಒಕ್ಕೂಟದ ಪದಾಧಿಕಾರಿಗಳ ಮೂಲಕ ಅಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯ ಕೆಲವು ನಿರ್ದೇಶಕರುಗಳಿಗೆ ಹಂಚಲಾಗಿದೆ.
ಅದೇ ರೀತಿ ದಿನಾಂಕ: 01-07-2021 ರಿಂದ 30-03-2022 ರವರೆಗಿನ ತುಟ್ಟಿ ಭತ್ಯೆ ಬಾಕಿ ಮೊತ್ತ ರೂ.1,06,84,132/-ಗಳನ್ನು ದಿನಾಂಕ: 04-04-2022 ರಂದು ನೌಕರರ ಉಳಿತಾಯ ಖಾತೆಗೆ ಜಮಾ ಪಡಿಸಿದ್ದು ಅದೇ ದಿನ ಉಳಿತಾಯ ಖಾತೆಯಿಂದ ಹಣವನ್ನು ವಾಪಸ್ಸು ಪಡೆದು ಬ್ಯಾಂಕಿನ ನೌಕರರ ಒಕ್ಕೂಟದ ಪದಾಧಿಕಾರಿಗಳ ಮೂಲಕ ಅಂದಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯ ಕೆಲವು ನಿರ್ದೇಶಕರುಗಳಿಗೆ ಹಂಚಲಾಗಿದೆ.
ನೇಮಕಾತಿ ನಂತರ ಸಾಲದ ನಿಯಮಾವಳಿಗೆ ವಿರುದ್ಧವಾಗಿ ಹೊಸ ನೌಕರರಿಗೆ ಪರೀಕ್ಷಾರ್ಥ ಅವಧಿಯಲ್ಲಿ ಇರುವಾಗಲೇ ಗರಿಷ್ಠ ಮೊತ್ತದ ವೇತನಾಧಾರ ಸಾಲವನ್ನು ನೀಡಿ ನೇಮಕಾತಿಯ ಪ್ರತಿಫಲವಾಗಿ ಅವರಿಂದ ಆ ಮೊತ್ತವನ್ನು ಪಡೆದಿರುತ್ತಾರೆ. ಈ ಸಂಬಂಧ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪಣೆ ಮಾಡಲಾಗಿರುತ್ತದೆ. ನಿಯಮ ಬಾಹಿರವಾಗಿ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಆಗಿರುವ ಲೋಪಗಳ ಬಗ್ಗೆ ಸರ್ಕಾರದಿಂದ ವಿಚಾರಣೆಗೆ ಆದೇಶವಾಗಿ ಶ್ರೀ ಶಶಿಧರ್ ಪಿ., ಸಹಕಾರ ಸಂಘಗಳ ಉಪ ನಿಬಂಧಕರು, 4ನೇ ವಲಯ, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿದ್ದು ವಿಚಾರಣಾಧಿಕಾರಿಗಳು ವಿಚಾರಣೆಯನ್ನು ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರೂ ಇದುವರೆಗೆ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಆಗಿರುವುದಿಲ್ಲ. ಅಂದಿನ ಮುಖ್ಯ ಕಾರ್ಯನಿರ್ವಾಹಕರು ನೇಮಕಾತಿ ಹಾಗೂ ನಿಯಮ ಬಾಹಿರವಾಗಿ ಕೈಗೊಂಡ ಕ್ರಮಗಳಿಂದ ಬ್ಯಾಂಕಿಗೆ ಆದ ಆರ್ಥಿಕ ನಷ್ಟವನ್ನು ವಸೂಲಿ ಮಾಡುವ ಸಂಬಂಧ ಶಾಸನಬದ್ಧ ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ಕ್ರಮ “ಕೈಗೊಳ್ಳಲು ತಿಳಿಸಿದ್ದು ಅದರಂತೆ ಸಹಕಾರಿ ಕಾಯ್ದೆ 1959 ಕಲಂ 70 ರ ಅಡಿಯಲ್ಲಿ ಜಂಟಿ ನಿಬಂಧಕರ ನ್ಯಾಯಾಲಯದಲ್ಲಿ ದಾವಾ ದಾಖಲಿಸಿದ್ದರೂ ಇದುವರೆಗೆ ಕ್ರಮವಾಗಿರುವುದಿಲ್ಲ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್, ಎಸ್.ಟಿ.ಹಾಲಪ್ಪ, ಯು. ಶಿವಾನಂದ, ಶಿ.ಜು.ಪಾಶ, ಜಿ.ಡಿ.ಮಂಜುನಾಥ್, ನೊಂದ ಅಭ್ಯರ್ಥಿ ಮಂಜುನಾಥ್ ಉಪಸ್ಥಿತರಿದ್ದರು.