ಚುಟುಕುಗಳು ಅಧಿಕಾರಸ್ಥರನ್ನು ಕುಟುಕುವಂತಿವೆ-ಪ್ರೊ. ಹೆಚ್. ರಾಚಪ್ಪ

ಚುಟುಕುಗಳು ಅಧಿಕಾರಸ್ಥರನ್ನು ಕುಟುಕುವಂತಿವೆ

-ಪ್ರೊ. ಹೆಚ್. ರಾಚಪ್ಪ

ಶಿವಮೊಗ್ಗ,

ಹಿರಿಯ ಸಾಹಿತಿ ಹೆಚ್. ಎಂ. ಸೋಮಶೇಖರಯ್ಯ ಅವರ ಚುಟುಕುಗಳು ಇಂದಿನ ಅಧಿಕಾರಸ್ಥರು ಹಾಗು ರಾಜಕಾರಣಿಗಳನ್ನು ಕುಟುಕುವಂತಿವೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್. ರಾಚಪ್ಪ ಅಭಿಪ್ರಾಯ ಪಟ್ಟರು.
ಇಂದು ಬೆಳಿಗ್ಗೆ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ನಡೆದ ಹೆಚ್.ಎಂ. ಸೋಮಶೇಖರಯ್ಯ ವಿರಚಿತ “ಚುಟುಕುಗಳು” ಪುಸ್ತಕ ಬಿಡುಗಡೆ ಕಾಯ೯ಕ್ರಮದಲ್ಲಿ ಮಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ್ಯ ಪಡೆದು 76 ವಷ೯ಗಳಾಗಿದ್ದರೂ ಈ ದೇಶದ ಜನ ಅನ್ನ ಉದ್ಯೋಗ ವಸತಿಯಂತಹ ಮೂಲಭೂತ ಸೌಕರ್ಯಗಳಿಗಾಗಿ ಅಂಗಲಾಚುತ್ತಿದ್ದರೆ ಕನಾ೯ಟಕದಷ್ಟೂ ದೊಡ್ಡದಲ್ಲದ ಜಪಾನ್ ಇಸ್ರೇಲ್ ನಂತಹ ದೇಶಗಳು ಅಲ್ಲಿನ ಜನರ ದಕ್ಷತೆ- ಪ್ರಾಮಾಣಿಕತೆಯಿಂದ ಪ್ರಪಂಚದ ದೊಡ್ಡ ಶಕ್ತಿಗಳಾಗಿ ಬೆಳೆದು ಅಮೇರಿಕ ಭಾರತದಂತಹ ದೇಶಗಳಿಗೆ ಸಾಲ ನೀಡುವ ಮಟ್ಟಕ್ಕೆ ಅಭಿವೃದ್ಧಿ ಹೊಂದಿರುವುದು ನಮ್ಮ ಆಡಳಿತಗಾರರ ಕಣ್ಣು ತೆರೆಸುವಂತದು ಎಂದು ಅವರು ಚುಟುಕೊಂದನ್ನು ಉದಾಹರಿಸಿ ನುಡಿದರು.
ಮತ್ತೋವ೯ ಅತಿಥಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಜ್ಜಿ ನಾಗಪ್ಪ ಶಿಕ್ಷಕ-ಅಧಿಕಾರಿಯಾಗಿ ಶಿಸ್ತು-ಸಂಯಮ ದಕ್ಷತೆ-ಪ್ರಾಮಾಣಿಕತೆಗೆ ಹೆಸರಾಗಿದ್ದ ಹೆಚ್.ಎಂ. ಸೋಮಶೇಖರಯ್ಯ ಅವರ ಚುಟುಕುಗಳು ಪುಸ್ತಕದಲ್ಲಿ ಆ ಎಲ್ಲ ಅಂಶಗಳನ್ನು ಒಳಗೊಂಡ ಜೀವನಾನುಭವ ದಾಖಲಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸಕಾ೯ರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ. ಎಂ. ಚಂದ್ರಶೇಖರ್ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದರು ನಿವೃತ್ತ ಮುಖ್ಯ ಶಿಕ್ಷಕ ಆರ್.ಎನ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಪುಸ್ತಕ ಕುರಿತು ಬಿ. ಜನಮೇಜಿರಾವ್, ಕಂದಗಲ್ ಬಸವರಾಜಪ್ಪ, ಶಿರವಂತೆ ಚಂದ್ರಶೇಖರ್ ಮಹೇಶ್ವರಮೂತಿ೯ ಶ್ರೀಮತಿ ನಾಗರತ್ನ ಇತರರು ಮಾತನಾಡಿದರು ಹಿರಿಯ ಚುಟುಕು ಕವಿ ತೊಂಭತ್ತು ವಷ೯ದ ಹೆಚ್. ಎಂ. ಸೋಮಶೇಖರಯ್ಯ ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀಮತಿ ನಾಗರತ್ನ ಸವ೯ರನ್ನೂ ಸ್ವಾಗತಿಸಿದರು ಪ್ರಕಾಶಕ ಆರ್.ಟಿ. ನಟರಾಜ್ ಕಾಯ೯ಕ್ರಮ ನಿರೂಪಿಸಿದರು.