ಗಾಜನೂರು ಡ್ಯಾಂ ಬಳಿ ಯುವತಿ ಅಪಹರಿಸಿ ಲೈಂಗಿಕ ದೌರ್ಜನ್ಯ! ಅಲ್ಲಿ ನಿಜವಾಗಲೂ ನಡೆದಿದ್ದೇನು? ಇಡೀ ರಾತ್ರಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಎಸ್ ಪಿ ಏನಂದ್ರು?

ಗಾಜನೂರು ಡ್ಯಾಂ ಬಳಿ ಯುವತಿ ಅಪಹರಿಸಿ ಲೈಂಗಿಕ ದೌರ್ಜನ್ಯ!

ಅಲ್ಲಿ ನಿಜವಾಗಲೂ ನಡೆದಿದ್ದೇನು?

ಇಡೀ ರಾತ್ರಿ ನಡೆಯಿತಾ ಸಾಮೂಹಿಕ ಅತ್ಯಾಚಾರ?

ಎಸ್ ಪಿ ಏನಂದ್ರು?

ಗಾಜನೂರು ನೋಡಲು ಹೋಗಿದ್ದ ಯುವತಿಯೊಬ್ಬಳನ್ನು ಅಕ್ರಮವಾಗಿ ಕರೆದೊಯ್ದು ಪಂಪ್‌ಹೌಸ್‌ನಲ್ಲಿ ಕೂಡಿ ಹಾಕಿರುವ ಪ್ರಕರಣ ವರದಿಯಾಗಿದ್ದು, ಈ ಪ್ರಕರಣದಲ್ಲಿ ಯುವತಿಯೊಂದಿಗೆ ಪುಂಡರ ಗ್ಯಾಂಗ್ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಅನುಮಾನಗಳಿವೆ. ಪ್ರಕರಣೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಕಿಡ್ನಾಪ್ ಮತ್ತು ಲೈಂಗಿಕ ಕಿರುಕುಳ ಕೇಸ್ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಬರಬೇಕಿದೆ.

ಘಟನೆ ವಿವರ:

ಎನ್.ಆರ್.ಪುರ ಮೂಲದ ಯುವಕರಿಬ್ಬರು ತಮಗೆ ಪರಿಚಿತ ಯುವತಿಯನ್ನು ಕಾರಿನಲ್ಲಿ ಮಂಗಳವಾರ ಸಂಜೆಹೊತ್ತಿಗೆ ಗಾಜನೂರು ಜಲಾಶಯ ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಕತ್ತಲಾದರೂ ಡ್ಯಾಂ ಬಳಿಯೇ ಇದ್ದರು. ಈ ನಡುವೆ ಯುವತಿಯೊಂದಿಗೆ ಹೋಗಿದ್ದ ಯುವಕರ ನಡುವೆ ಯಾವುದೊ ವಿಚಾರಕ್ಕೆ ಗಲಾಟೆಯಾಗಿದೆ ಎನ್ನಲಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ಸ್ಥಳೀಯ ಪುಂಡರು, ಯುವಕರಿಬ್ಬರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರ ದಾಳಿಯಿಂದ ಗಾಬರಿಗೊಂಡ ಯುವಕರು 112 ನಂಬರಿಗೆ ಫೋನ್ ಮಾಡಿ ದೂರು ಸಲ್ಲಿಸಿದ್ದಾರೆ.

ಮೊಬೈಲ್ ಸ್ವಿಚ್ ಆಫ್: ಯುವತಿಯನ್ನು ಕರೆದುಕೊಂಡು ಬಂದಿದ್ದ ಯುವಕರನ್ನು ಬೆದರಿಸಿ ಓಡಿಸಿದ ಪುಂಡರ ಗ್ಯಾಂಗ್‌ ಯುವತಿಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತುಂಗಾ ನಗರ ಪೊಲೀಸರು ಪುಂಡರ ಗ್ಯಾಂಗ್ ಬಗ್ಗೆ ಮಾಹಿತಿ
ಪಡೆದು ಪತ್ತೆ ಕಾರ್ಯ ಶುರುಮಾಡಿದ್ದಾರೆ. ಯುವತಿ ಡ್ಯಾಮಿನ ಪಂಪ್ ಹೌಸಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳಿಸಲಾಗಿದೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಎಸ್.ಪಿ.ಏನಂತಾರೆ?*

ಮೂರು ಮಂದಿ ಸ್ನೇಹಿತರು ಗಾಜನೂರು ಡ್ಯಾಂ ವೀಕ್ಷಿಸಲು ಹೋದ ಸಂದರ್ಭ ಸ್ಥಳೀಯ ಕೆಲ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಮಾಹಿತಿ ಇದೆ.ಯುವತಿಯನ್ನು ರಕ್ಷಣೆ ಮಾಡಿದ್ದೇವೆಂದು ಅವರು ತನಿಖೆಯಲ್ಲಿ ಹೇಳುತ್ತಿದ್ದಾರೆ. ಇಡೀ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.