ಮಾಜಿ ಶಾಸಕರೂ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಇವತ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? ಇಲ್ಲಿವೆ ಪ್ರಮುಖ ಅಂಶಗಳು…

ಮಾಜಿ ಶಾಸಕರೂ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರೂ ಆದ ಕೆ.ಬಿ.ಪ್ರಸನ್ನ ಕುಮಾರ್ ಇವತ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ಇಲ್ಲಿವೆ ಪ್ರಮುಖ ಅಂಶಗಳು…

ಚೋರ್ ಬಜಾರ್ ಬೆಂಕಿ ದುರಂತ ದುರಾದೃಷ್ಟ. ಬಹಳ ಹಳೆಯ ಮಾರುಕಟ್ಟೆ. ಜನತೆಯ ಪರವಾಗಿ ಅಗ್ನಿ ನಂದಿಸಲು ಸಹಕರಿಸಿದ ಅಗ್ನಿ ಶಾಮಕ ದಳ ಮತ್ತು ಸ್ಥಳೀಯರಿಗೆ ಅಭಿನಂದನೆ.

ಈ ನೆಪದಲ್ಲಾದರೂ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಿ.ಜಿಲ್ಲಾಧಿಕಾರಿ, ಆಯುಕ್ತರು ಮನಸು ಮಾಡಬೇಕು. ನಾಲ್ಕರಷ್ಟು ಆದಾಯ ಬರುವಂತೆ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಿ.
ತಾತ್ಕಾಲಿಕ ವ್ಯವಸ್ಥೆಗೆ ಹೊಸ ಕಟ್ಟಡದಲ್ಲಿ ಅವಕಾಶ ಮಾಡಿಕೊಡಲಿ. ಅಂಗಡಿ ಮಾಲೀಕರ ಬಂಡವಾಳ ಪೂರ್ತಿ ಸುಟ್ಟು ಕರಕಲಾಗಿದೆ. ಶಾಸಕರು ಹೇಳಿದಂತೆ ಉತ್ತಮ ಪರಿಹಾರ ನೀಡಲಿ.
ಪಾಲಿಕೆ ಇದೆಯೇ? ವಾರ್ಡಲ್ಲಿ ಪೌರ ಕಾರ್ಮಿಕರೇ ಕಾಣುವುದಿಲ್ಲ. ಸಂಪೂರ್ಣ ಕಡಿಮೆ ಆಗಿದೆ. ಕೂಡಲೇ ನೂತನ ಆಯುಕ್ತರು ಗಮನಹರಿಸಬೇಕು. ಸ್ಮಾರ್ಟ್ ಸಿಟಿ ಕ್ಲೀನಿಂಗ್ ಕಳೆದುಕೊಂಡಿದ್ದು, ಡೆಂಗ್ಯೂ ಹೆಚ್ಚುತ್ತಿದೆ. ಡಿಹೆಚ್ ಓ ಅಂಕಿಅಂಶ ಕಡಿಮೆ ಇದೆ. ಗಲ್ಲಿಗಲ್ಲಿಯ ಕ್ಲೀನಿಕ್ ಗಳಲ್ಲಿ ರೋಗಿಗಳು ಹೆಚ್ಚುತ್ತಿದ್ದಾರೆ.
ಕೂಡಲೇ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಗಮನಹರಿಸಬೇಕು. ಕ್ಲೀನಿಕ್ ಗಳಲ್ಲಿ ರೋಗಿಗಳ ಸಂಖ್ಯೆ ವಿಪರೀತವಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಪಾಲಿಕೆ ಹಣದಲ್ಲಿ ಕಟ್ಟಿರೋ ಹಳೆ ತಾಲ್ಲೂಕು ಕಚೇರಿಯ ಕಟ್ಟಡ ಮತ್ತು ಸವಾರ್ ಲೈನ್ ರಸ್ತೆಯ ಕಟ್ಟಡ ಬೇಗ ಕಾರ್ಯನಿರ್ವಹಿಸುವಂತಾಗಲಿ.

ಜೋರಾಗಿ ಮಳೆ ಬಂದರೆ ಎಂಟರಿಂದ ಒಂಭತ್ತು ಕಡೆ ಸೂಕ್ಷ್ಮ ಪರಿಸ್ಥಿತಿ ಇದೆ. ನೀರು ವೇಗವಾಗಿ ನುಗ್ಗಿ ಅವ್ಯವಸ್ಥೆ ಆಗುತ್ತೆ. ಕೂಡಲೇ ಚರಂಡಿಗಳ ಹೂಳು ತೆಗೆಯುವ ಕೆಲಸವಾಗಬೇಕು.ಇಲ್ಲದಿದ್ದರೆ ಅನಾಹುತ ಕಟ್ಟಿಟ್ಟಬುತ್ತಿ.

ನೆಲ ಅಂತಸ್ತಿನ ಮನೆಯ ತೊಟ್ಟಿಗೂ ನೀರು ಸರಬರಾಜಾಗುತ್ತಿಲ್ಲ. ಪೈಪ್ ಲೈನ್ ಕಾಮಗಾರಿ ಸರಿಯಾದಂತೆ ಕಾಣುತ್ತಿಲ್ಲ. 24/7 ನೀರು ಸರಬರಾಜು ಕನಸಿನ ಮಾತಾಗಿದೆ. ಕೂಡಲೇ ವ್ಯವಸ್ಥೆ ಸರಿಪಡಿಸಬೇಕು.
ವಾಟರ್ ಬೋರ್ಡ್ ಪಾಲಿಕೆ ಮೇಲೆ, ಪಾಲಿಕೆ ವಾಟರ್ ಬೋರ್ಡ್ ಮೇಲೆ ಗೂಬೆ ಕೂರಿಸಿಕೊಂಡು ಕಾಲಹರಣ ಮಾಡುತ್ತಿವೆ. ಯುಜಿಡಿ ಸಮಸ್ಯೆ ಕೂಡ ವಿಪರೀತವಾಗಿದೆ.

ಕೂಡಲೇ ಸರ್ಕಾರ ಪಾಲಿಕೆ ಚುನಾವಣೆ ಘೋಷಣೆ ಮಾಡಬೇಕು. ಖುಷಿ ಖುಷಿಯಾಗಿ ಈ ಸ್ಮಾರ್ಟ್ ಸಿಟಿಯಲ್ಲಿ ವಾಸಿಸುವ ವಾತಾವರಣ ನಿರ್ಮಾಣ ಮಾಡಬೇಕು.

ಪೆಟ್ರೋಲ್, ಹಾಲು ದರ ಹೆಚ್ಚಾಗಿದೆ. ಮುಖ್ಯಮಂತ್ರಿ ಸಬೂಬು ಹೇಳುತ್ತಿದ್ದಾರೆ. ವರ್ಷದ ಸಾಧನೆ ಹೇಳಿಕೊಳ್ಳಬೇಕಾದ ಸಂದರ್ಭದಲ್ಲಿ ದರ ಹೆಚ್ಚಿಸುತ್ತಾ ಜನರಿಗೆ ಹಿಂಸೆ ಕೊಡುತ್ತಿವೆ. ಇಳಿಕೆಯ ಮಾರ್ಗದ ಆಸೆಯಲ್ಲಿದ್ದ ಜನಕ್ಕೆ ಏರಿಕೆ ಮಾರ್ಗವನ್ನು ಸರ್ಕಾರ ತೋರಿಸುತ್ತಿದೆ.
ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಶಿವಮೊಗ್ಗ ನಗರದಲ್ಲಿ ಹೊಸದಾಗಿ ಮಂಜೂರಾದ ಒಂದೇ ಒಂದು ಕಾಮಗಾರಿ ಕಣ್ಣಿಗೆ ಕಾಣುತ್ತಿಲ್ಲ.

ಶಿವಮೊಗ್ಗದಿಂದ 26 ಜನ ದೆಹಲಿಗೆ ಹೋಗಿ ಉಕ್ಕುಮಂತ್ರಿಗಳಾದ ಕುಮಾರಸ್ವಾಮಿಯವರಿಗೆ ಭೇಟಿ ಮಾಡಿ ಶಿವಮೊಗ್ಗದ ಮುಚ್ಚಿದ, ಮುಚ್ಚಲ್ಪಡುತ್ತಿರುವ ಕಾರ್ಖಾನೆಗಳ ಬಗ್ಗೆ ಗಮನ ಹರಿಸಲು ಮನವಿ ನೀಡಿದ್ದೆವು.ತಕ್ಷಣಕ್ಕೆ ಸ್ಪಂದಿಸಿ ವಿಐಎಸ್ ಎಲ್ ಕಾರ್ಖಾನೆಗೂ ಭೇಟಿ ನೀಡಿ ಭರವಸೆ ನೀಡಿದ್ದಾರೆ..

ಬೆಂಕಿ ಬಿದ್ದ ಮಾರುಕಟ್ಟೆಗೂ ಭೇಟಿ ನೀಡಿದ್ದ ಕೆಬಿಪಿ ತಂಡ…

ನೆನ್ನೆ ರಾತ್ರಿ ಶಿವಮೊಗ್ಗ ನಗರದ ಗಾಂಧಿ ಬಜಾರ್ ನ ಉಪ್ಪಾರಕೇರಿಯ 2ನೇ ತಿರುವಿನಲ್ಲಿರುವ ಬಟ್ಟೆ ಮಾರ್ಕೆಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಉಂಟಾದ ಅಗ್ನಿ ಅವಗಢ ಸ್ಥಳಕ್ಕೆ ನಗರದ ಮಾಜಿ ಶಾಸಕರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ನಗರ ಜೆಡಿಎಸ್ ಪ್ರಮುಖರೊಂದಿಗೆ ತೆರಳಿ ಪಾಲಿಕೆ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿ ಸಂತ್ರಸ್ತ ವ್ಯಾಪಾರಸ್ತರಿಗೆ ಧೈರ್ಯ ತುಂಬಿದರು.ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ ಇದೆ ಬೆಂಕಿ ಅವಘಡದ ಸಂತ್ರಸ್ತರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಸೂಕ್ತ ಪರಿಹಾರ ಕಲ್ಪಿಸುವಂತೆ ಅಗ್ರಹಿಸಿದರು.

ಇದೆ ಸಂದರ್ಭ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ಜಿಲ್ಲಾ ಮಹಾ ಪ್ರದಾನ ಕಾರ್ಯದರ್ಶಿ ತ್ಯಾಗರಾಜ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಂಗಾಯ್ಯ, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಕಶ್ಯಪ್, ಪ್ರಮುಖರಾದ ದಯಾನಂದ್, ಗೋಪಿ, ಲೋಹಿತ್, ಪ್ರಶಾಂತ್, ಸಿದ್ದೇಶ್, ಜಯಣ್ಣ, ಅರುಣ್, ಆದಿತ್ಯ ನಿಹಾಲ್,ಹಾಗೂ ಮತ್ತಿತರರು ಉಪಸ್ಥಿತರಿದ್ದರು.