ಕೆರೆಗೆ ಬಿದ್ದ ಕಾರು- ಕುಟುಂಬ ಪಾರು
ಸಾಗರ ತಾಲ್ಲೂಕಿನ ಆಯನೂರು ಬಳಿಯ ಪೆಟ್ರೋಲ್ ಬಂಕ್ ಎದುರಿನ ಕೆರೆಗೆ ಇಂದು ಬೆಳಿಗ್ಗೆ ಕಾರೊಂದು ಬಿದ್ದಿದ್ದು, ಕಾರಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಸಣ್ಣಪುಟ್ಟ ಗಾಯಗಳಾಗಿ, ಜೀವಹಾನಿಯಿಂದ ಪಾರಾಗಿದೆ.
ಕೂಡಲೇ ಅಪಘಾತ ಸ್ಥಳಕ್ಕೆ ತೆರಳಿದ ಪೊಲೀಸರು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.