ಶಿವಮೊಗ್ಗ ಪೀಸ್ ಆರ್ಗನೈಝೇಷನ್ ರಿಯಾಝ್ ಅಹಮದ್ ಗಂಭೀರ ಆರೋಪ;ಸಂತ್ರಸ್ತರ ಹೆಸರಲ್ಲಿ ಅಗಸವಳ್ಳಿಯಲ್ಲಿ ಭೂ ಮಾಫಿಯಾ!50 ಎಕರೆಗೆ ಬೇಲಿ ಸುತ್ತಿ ಭಯದ ವಾತಾವರಣ ನಿರ್ಮಾಣ

ಶಿವಮೊಗ್ಗ ಪೀಸ್ ಆರ್ಗನೈಝೇಷನ್ ರಿಯಾಝ್ ಅಹಮದ್ ಗಂಭೀರ ಆರೋಪ;

ಸಂತ್ರಸ್ತರ ಹೆಸರಲ್ಲಿ ಅಗಸವಳ್ಳಿಯಲ್ಲಿ ಭೂ ಮಾಫಿಯಾ!

50 ಎಕರೆಗೆ ಬೇಲಿ ಸುತ್ತಿ ಭಯದ ವಾತಾವರಣ ನಿರ್ಮಾಣ

ಚಕ್ರ, ಸಾವೆ ಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಹೆಸರಿನಲ್ಲಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂ ಕಬಳಿಕೆ ಮಾಡು ತ್ತಿದ್ದಾರೆ ಎಂದು  ಸಾಮಾಜಿಕ ಹೋರಾಟಗಾರ ರಿಯಾಜ್ ಅಹಮ್ಮದ್ ಆರೋಪಿಸಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ತಾಲ್ಲೂಕು ಅಗಸ ವಳ್ಳಿ ಗ್ರಾಮದ ಸರ್ವೇನಂ. ೧೬೭ರಲ್ಲಿ ೨೦೩೩ ಎಕರೆ ಜಮೀನಿದ್ದು, ಅದರಲ್ಲಿ ೧೧೪೪ ಎಕರೆ ಜಮೀನನ್ನು ಸರ್ಕಾರ ಮುಳುಗಡೆ ಸಂತ್ರಸ್ಥರಿಗೆ ಹಂಚಿಕೆ ಮಾಡಿದ್ದು, ಅದರಲ್ಲಿ ಕೆಲವರು ವಾಸಿಸುತ್ತಿದ್ದಾರೆ. ಕೆಲವರು ಮಾರಾಟ ಮಾಡಿದ್ದಾರೆ. ಕೆಲವರು ಜಮೀನು ಪಡೆಯ ದವರು ಇದ್ದಾರೆ. ಇವರನ್ನೇ ಬಂಡವಾಳ ಮಾಡಿಕೊಂಡ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ಆರ್. ಉಮೇಶ್ ಎಂಬುವವರು ರೈತರ ಜಮೀನಿಗೆ ತಂತಿ ಬೇಲಿ ಹಾಕಿ ಸುಳ್ಳು ಮಾಹಿತಿ ಸುಳ್ಳು ದಾಖಲೆ ಸೃಷ್ಠಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡು ತ್ತಿದ್ದಾರೆಂದು ಆರೋಪಿಸಿದರು.
೨-೩ ಎಕರೆ ಮುಳುಗಡೆ ಸಂತ್ರಸ್ಥರ ದಾಖಲೆಗಳು ಇದ್ದರೆ, ಇದನ್ನೇ ನೆಪಮಾಡಿಕೊಂಡು ಸುಮಾರು ೪೦-೫೦ಎಕರೆ ಜಾಗಕ್ಕೆ ತಂತಿಬೇಲಿ ಹಾಕಿದ್ದಾರೆ. ಈ ಅತಿಕ್ರಮ ತಂತಿಬೇಲಿ ಹಾಕುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಅಧಿಕಾರಿ ಗಳು ಇರುವುದಿಲ್ಲ. ಅಧಿಕಾ ರಿಗಳು ಕೂಡ ಶಾಮಿಲಾ ಗಿದ್ದಾರೆ ಎಂಬ ಶಂಕೆಯಿದೆ. ಇದರಿಂದ ೬ ದಶಕಗಳಿಂದಲು ಭೂ ವಂಚಿತರಾಗಿ ಸಾಗುವಳಿ ಮಾಡಿಕೊಂಡು ಜೀವನ ಸಾಗುತ್ತಿರುವ ನಿಜವಾದ ಮುಳುಗಡೆ ಸಂತ್ರಸ್ಥರು ಭೂ ವಂಚಿತರಾಗಿದ್ದಾರೆ ಎಂದರು.
ಇದಕ್ಕಾಗಿ ವಿಶೇಷ ಸಮಿತಿಯನ್ನು ಸರ್ಕಾರ ರಚಿಸಿ ದ್ದರು ಕೂಡ ಸಮಿತಿಯಿಲ್ಲದೆ ಇರುವುದರಿಂದ ಈ ಇಬ್ಬರು ತಾವೇ ಪುನರ್‌ವಸತಿ ಹೋರಾಟ ಹೆಸರಿನಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಸೇರಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ಮತ್ತು ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಿ ಆಗಿರುವ ವಂಚನೆಯನ್ನು ಪತ್ತೆಹಚ್ಚಿ ಈ ಇಬ್ಬರು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಶರಾವತಿ, ವರಾಹಿ, ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ಥರ ಮತ್ತು ಬಗರ್‌ಹುಕುಂ ಸಾಗುವಳಿ ದಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಮ್ರಾನ್‌ಖಾನ್ ಇದ್ದರು.