ರಾಜೀವ್ ಗಾಂಧಿ ಮತ್ತು ಅರಸು ಬಡವರ ಧ್ವನಿಯಾಗಿದ್ದವರು; ಶಾಸಕಿ ಬಲ್ಕೀಷ್ ಬಾನು

ರಾಜೀವ್ ಗಾಂಧಿ ಮತ್ತು ಅರಸು ಬಡವರ ಧ್ವನಿಯಾಗಿದ್ದವರು; ಶಾಸಕಿ ಬಲ್ಕೀಷ್ ಬಾನು

ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದವರು. ಅದರಲ್ಲೂ ಜೀತ ಪದ್ಧತಿ ಮತ್ತು ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದವರು, ದಮನಿತರ ಧ್ವನಿಯಾಗಿದ್ದವರು ಎಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ‌ಬಲ್ಕೀಶ್ ಬಾನು ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಆರ್.ಪ್ರಸನ್ನ ಕುಮಾರ್;

ದೇವರಾಜ್ ಅರಸುರವರ ಹುಟ್ಟುಹಬ್ಬ ಅರ್ಥಪೂರ್ಣ. ಇವತ್ತಿಗೂ ನೆನಪು ಮಾಡ್ಕೋತಿರೋದು ಅವರ ಕಾರ್ಯಗಳಿಂದ. ಸಣ್ಣಪುಟ್ಟ ಜಾತಿಗಳಲ್ಲಿ ನಾಯಕತ್ವ ಹುಟ್ಟು ಹಾಕಿದವರು. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಅರಸರ ಕಾರಣದಿಂದಲೇ ರಾಜಕಾರಣಕ್ಕೆ ಬಂದವರು.

ಭೂ ಸುಧಾರಣೆ ಕಾಯ್ದೆ ಅನುಷ್ಠಾನಕ್ಕೆ ತರುವುದು ಸುಲಭವಿರಲಿಲ್ಲ. ಆ ಕೆಲಸ ಬೇರೆಯವರು ಮಾಡಿದ್ರೆ ರಕ್ತಪಾತ ನಡೆದು ಹೋಗ್ತಿತ್ತು. ಬಡವರ ಪರವಾದ ಅವರ ಕೆಲಸಗಳು ಇಂದು ಸಿದ್ದರಾಮಯ್ಯರ ಕಾಲದಲ್ಲೂ ಮುಂದುವರೆದಿವೆ. ಬಹಳ ದೊಡ್ಡ ವ್ಯಕ್ತಿತ್ವ ಅರಸುರವರದು. ಜನರಿಗಾಗಿ ಬದುಕಿದವರು. ಅವರು ಆಸ್ತಿಪಾಸ್ತಿ ಮಾಡಿದವರಲ್ಲ.

ರಾಜೀವ್ ಗಾಂಧಿಯವರು 40 ವರ್ಷಗಳ ಹಿಂದೆಯೇ ಡಿಜಿಟಲ್ ಇಂಡಿಯಾ ಜಾರಿಗೆ ತಂದವರು. ಬಹಳ ಉನ್ನತ ಸ್ಥಿತಿಗೆ ದೇಶವನ್ನು ತಂದವರು. ಹೊಸ ಆಶಾಕಿರಣ ಆಗಿದ್ದು. ಜಗತ್ತಿನ ಕ್ಲೀನ್ ಪಿಎಂ ಆಗಿದ್ದವರು. ದೇಶಕ್ಲಾಗಿ ಕಟು ನಿಲುವು ತಳೆದಿದ್ದರಿಂದ ಇಂದಿರಾ ರಾಜೀವ್ ಬಲಿಯಾಗಬೇಕಾಯ್ತು.

ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ. ಮೋದಿ ಕಾಲ ಮುಗಿಯುವ ಕಾಲ ಬಂದಿದೆ. ಇಂಡಿಯಾ ಒಕ್ಕೂಟಕ್ಕೆ ಅಪಾರ ಬೆಂಬಲ ಸಿಗ್ತಿದೆ. ಸಿದ್ದರಾಮಯ್ಯರವರ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಳ್ಳಬೇಕು.

ಮಾಜಿ ಸೂಡಾ ಅಧ್ಯಕ್ಷರೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಎನ್.ರಮೇಶ್;

ದುರ್ಬಲ ವರ್ಗದವರು ಬದುಕುತ್ತಿರೋದು ದೇವರಾಜ್ ಅರಸರ ಕೊಡುಗೆಯಿಂದ
ಸಿಎಂ ಮೇಲೆ ರಾಜ್ಯಪಾಲರ ಪ್ರಾಸಿಕ್ಯೂಷನ್ ದುರಾದೃಷ್ಟಕರ.
ಸರಿಸಮಾನ ಸ್ಥಾನಮಾನ ಹಿಂದುಳಿದ ವರ್ಗದವರಿಗೂ ಸಿಗುವಂತೆ ಮಾಡಿದವರು ಅರಸು.
ರಾಜೀವ್ ಗಾಂಧಿ, ದೇವರಾಜ್ ಅರಸರ ವಿಚಾರಧಾರೆಗಳು ದಾರಿದೀಪವಾಗಬೇಕು

ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ;
ಇಂದಿರಾಗಾಂಧಿಯವರಿಗೆ ರಾಜಕೀಯವಾಗಿ ಪುನರ್ಜನ್ಮ ಕೊಟ್ಟವರು ದೇವರಾಜ ಅರಸು. ಕಾಂಗ್ರೆಸ್ ನವರು ಬಲಿದಾನ ಕೊಟ್ಟವರು. ಬಿಜೆಪಿಯವರ ಬಲಿದಾನ ಏನಿದೆ?
ಬಿಜೆಪಿಯವರದೀಗ ನಾಯಿಪಾಡಾಗಿದೆ. ಚುಪ್ ಅಂದ್ರೆ ಹೆದರಿ ಕುಳಿತುಕೊಳ್ಳುವ ಮಟ್ಟಕ್ಕೆ ಮೋದಿ- ಶಾ ಇಳಿದಿದ್ದಾರೆ. ಶಿವಮೊಗ್ಗದಲ್ಲೇ ಬಿಜೆಪಿಯ ಹಗರಣಗಳು ಕಡಿಮೆ ಇವೆಯೇ? ಬೀದಿಗಿಳಿದು ಹೋರಾಟ ಮಾಡಬೇಕು. ಫ್ಲೈವೋರ್ ನಲ್ಲಿ ಬಿಜೆಪಿಯವರು ದುಡ್ಡು ತಿಂದ್ರು. ಅಕ್ಕಪಕ್ಕದಲ್ಲಿರೋರು ಬೇವರ್ಸಿಗಳಾದ್ರು. ಅರಸುರವರಿಗೆ ಪ್ರಧಾನಿ ಆಗೋ ಶಕ್ತಿ ಇತ್ತು.

ಇಕ್ಕೇರಿ ರಮೇಶ್, ಹೆಚ್.ಟಿ.ಹಾಲಪ್ಪ,ಆರ್.ಮೋಹನ್, ಶಿ.ಜು.ಪಾಶ, ಜಿ.ಪದ್ಮನಾಭ್, ಆಫ್ತಾಬ್ ಪರ್ವೀಜ್, ಸ್ಟೆಲ್ಲಾ ಮಾರ್ಟಿನ್, ಚಿನ್ನಪ್ಪ, ಎನ್.ಉಮಾಪತಿ, ಜಿ.ಡಿ.ಮಂಜುನಾಥ್, ನೇತಾಜಿ, ನೂರುಲ್ಲಾ, ಗಂಗಾಧರ್,ನಯಾಜ್ ಅಹಮದ್, ನಾಜಿಮಾ, ಸಮೀನಾ, ಅರ್ಚನಾ, ಹಾಲಪ್ಪ, ಹುಸೇನ್, ಮೊಹಮದ್ ಜಫ್ರುಲ್ಲಾ ಮತ್ತಿತರರು ಉಪಸ್ಥಿತರಿದ್ದರು.