ವಿನೋಬನಗರದ ಲೈರಾ ಸ್ಪಾದಲ್ಲಿ ವೇಶ್ಯಾವಾಟಿಕೆ;ಇಬ್ಬರು ಸಂತ್ರಸ್ತರನ್ನು ಉಳಿಸಿದ ಪೊಲೀಸರು…ಮಿಳಘಟ್ಟ ಮೂಲದ ಸೌಮ್ಯ ಪ್ರಭು ಬಂಧನ

ವಿನೋಬನಗರದ ಲೈರಾ ಸ್ಪಾದಲ್ಲಿ ವೇಶ್ಯಾವಾಟಿಕೆ;

ಇಬ್ಬರು ಸಂತ್ರಸ್ತರನ್ನು ಉಳಿಸಿದ ಪೊಲೀಸರು…

ಮಿಳಘಟ್ಟ ಮೂಲದ ಸೌಮ್ಯ ಪ್ರಭು ಬಂಧನ

ಸ್ಪಾ ಸಲೂನ್ ಗಳಲ್ಲಿ ನಡೆಯುತ್ತಿದೆಯೇ ವೇಶ್ಯಾವಾಟಿಕೆ? ಹೌದು ಎನ್ನುತ್ತದೆ ಈ ಪೊಲೀಸ್ ವರದಿ.

ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೀರಣ್ಣ ಲೇ ಔಟ್ ನ ಮೂರನೇ ತಿರುವಿನಲ್ಲಿರೋ ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಎಂಡ್ ಸ್ಪಾನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಇಬ್ಬರು ಸಂತ್ರಸ್ತ ಮಹಿಳೆಯರನ್ನಿಟ್ಟುಕೊಂಡು ಮಿಳಘಟ್ಟ ಮೂಲದ ಸೌಮ್ಯಾ ಪ್ರಭು ಎಂಬ 33 ವರ್ಷ ವಯಸ್ಸಿನ ಮಹಿಳೆಯನ್ನು ಬಂಧಿಸಿದ್ದಾರೆ.

ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಡಿವೈಎಸ್ ಪಿ ಸುರೇಶ್ ರವರ ಮೇಲ್ವಿಚಾರಣೆಯಲ್ಲಿ ಇನ್ಸ್ ಪೆಕ್ಟರ್ ಚಂದ್ರಕಲಾ ಮತ್ತು ಭರತ್ ಕುಮಾರ್ ರವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.

ಪೊಲೀಸರು ಬಂಧಿತ ಮಹಿಳೆ ಮೇಲೆ IMMORAL TRAFFIC PREVENTION ACT ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಮುಂದುರೆಸಿದ್ದಾರೆ.