ಶಿವಮೊಗ್ಗದಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ ಕಾಳಿಂಗ ದರ್ಶನ

ಶಿವಮೊಗ್ಗದ

ಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ

ಕಾಳಿಂಗ ದರ್ಶನ

ಶಿವಮೊಗ್ಗ  ನಗರದ ಓ ಟಿ ರಸ್ತೆಯ ಗುಜರಿ ಅಂಗಡಿಯಲ್ಲಿ ಸುಮಾರು 2 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡು ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಗಾಬರಿಗೊಂಡ ಸ್ಥಳೀಯರು ಕೂಡಲೇ ಉರಗ ರಕ್ಷಕರಾದ ಸ್ನೇಕ್ ವಿಕ್ಕಿ ಮತ್ತು ಉರಗತಜ್ಞರಾದ ಜಯಂತ್ ಬಾಬುರವರಿಗೆ ಕರೆಮಾಡಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸಂರಕ್ಷಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.