ಕವಿಸಾಲು
01
ಶಿವಮೊಗ್ಗ ಜೈಲಿನ ಮೇಲೆ ನೂರಕ್ಕೂ ಹೆಚ್ಚಿನ ಪೊಲೀಸ್ ದಾಳಿ…ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಏನಾದರೂ ಸಿಕ್ಕಿತಾ?
ಶಿವಮೊಗ್ಗ ಜೈಲಿನ ಮೇಲೆ ನೂರಕ್ಕೂ ಹೆಚ್ಚಿನ ಪೊಲೀಸ್ ದಾಳಿ…
ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಏನಾದರೂ ಸಿಕ್ಕಿತಾ?
ಇಂದು ಬೆಳ್ ಬೆಳಗ್ಗೆ ಪೊಲೀಸ್ ಅಧಿಕಾರಿಗಳು, ಬರೋಬ್ಬರಿ ನೂರು ಜನ ಪೊಲೀಸರು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಗೃಹದ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಎಸ್ ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಡಿಎಆರ್ ಡಿವೈಎಸ್ ಪಿ ಕೃಷ್ಣಮೂರ್ತಿ, ತುಂಗಾನಗರ ಸಿಪಿಐ ಮಂಜುನಾಥ್, ದೊಡ್ಡಪೇಟೆ ಸಿಪಿಐ ರವಿ ಪಾಟೀಲ್, ಕೋಟೆ ಸಿಪಿಐ ದೀಪಕ್,ಶಿವಮೊಗ್ಗ ಗ್ರಾಮಾಂತರ ಸಿಪಿಐ ಸತ್ಯನಾರಾಯಣ, ಡಿಎಆರ್ ಸಶಸ್ತ್ರ ಪೊಲೀಸ್ ನಿರೀಕ್ಷಕ ಪ್ರಶಾಂತ್ ಹಾಗೂ ಇಬ್ಬರು ಪಿಎಸ್ ಐ ಮತ್ತು ನೂರು ಜನ ಪೊಲೀಸ್ ಸಿಬ್ಬಂದಿಗಳ ತಂಡ ಸೋಗಾನೆ ಜೈಲಿನ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಪರಿಶೀಲಿಸಿತು.
ಪೊಲೀಸ್ ಪರಿಶೀಲನೆ ವೇಳೆಯಲ್ಲಿ ಏನಾದರೂ ಸಿಕ್ಕಿತಾ? ಮಾಹಿತಿ ಲಭ್ಯವಾಗಿಲ್ಲ.