ಆಹಾರ ಕಲಬೆರಕೆ ತಡೆಗಟ್ಟಲು ದಾಳಿ : ನಿಯಮ ಉಲ್ಲಂಘನೆ ವಿರುದ್ದ ದಂಡಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ವಾತಿ ಎಂಟರ್ಪ್ರೈಸಸ್ ಗೆ ರೂ.10,000/-  ಹಾಟ್‌ಸ್ಪಾಟ್ ಕೆಫೆ ಹಾಗೂ ರೈಲ್ವೆ ನಿಲ್ದಾಣದಲ್ಲಿನ ಕಾಫಿ ಶಾಪ್ ಗಳಿಗೆ ತಲಾ ರೂ.5000/- ಗಳ ದಂಡ

ಆಹಾರ ಕಲಬೆರಕೆ ತಡೆಗಟ್ಟಲು ದಾಳಿ : ನಿಯಮ ಉಲ್ಲಂಘನೆ ವಿರುದ್ದ ದಂಡ

ಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ವಾತಿ ಎಂಟರ್ಪ್ರೈಸಸ್ ಗೆ ರೂ.10,000/- 

ಹಾಟ್‌ಸ್ಪಾಟ್ ಕೆಫೆ ಹಾಗೂ ರೈಲ್ವೆ ನಿಲ್ದಾಣದಲ್ಲಿನ ಕಾಫಿ ಶಾಪ್ ಗಳಿಗೆ ತಲಾ ರೂ.5000/- ಗಳ ದಂಡ

ಶಿವಮೊಗ್ಗ,
ಆಹಾರ ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಗಳು ಜಂಟಿಯಾಗಿ ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ದಾಳಿ ನಡೆಸಿ ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ವಿಧಿಸಿರುತ್ತಾರೆ.
ಆಹಾರ ಸುರಕ್ಷತೆ ಮತ್ತು ಕಲಬೆರಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘನೆ ಪ್ರಕರಣದಡಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ವಾತಿ ಎಂಟರ್ಪ್ರೈಸಸ್ ಇವರಿಗೆ ರೂ.10,000/- ಮತ್ತು ಹಾಟ್‌ಸ್ಪಾಟ್ ಕೆಫೆ ಹಾಗೂ ರೈಲ್ವೆ ನಿಲ್ದಾಣದಲ್ಲಿನ ಕಾಫಿ ಶಾಪ್ ಇವರಿಗೆ ತಲಾ ರೂ.5000/- ಗಳ ದಂಡವನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ವಿಧಿಸಿರುತ್ತಾರೆ.
ಮತ್ತು ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದ ಮೂರು ಹೋಟೆಲ್ ಗಳಿಂದ ಒಟ್ಟು ಏಳು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿರುತ್ತಾರೆ.
ತಯಾರಿ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ಇಲ್ಲದ ಆಹಾರ ಪದಾರ್ಥಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ದಿನಾಂಕ ನಮೂದಾಗಿರದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿರುತ್ತಾರೆ.