ಸಣ್ಣ ಹುಡುಗರ ಮೂತ್ರಕ್ಕಿದೆ ಭಾರೀ ಬೇಡಿಕೆ!**ಯಾಕೆ?*

*ಸಣ್ಣ ಹುಡುಗರ ಮೂತ್ರಕ್ಕಿದೆ ಭಾರೀ ಬೇಡಿಕೆ!*

*ಯಾಕೆ?*

ಮಕ್ಕಳಿಗೆ ಮೂತ್ರ ವಿಸರ್ಜನೆಗೆ ಟಾಯ್ಲೆಟ್​ನಲ್ಲಿ ತರಬೇತಿ ನೀಡುವುದು ಸಹಜ. ಆದರೆ, ಚೀನಾದಲ್ಲಿ ಚಿಕ್ಕ ಹುಡುಗರಿಂದ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಅದಕ್ಕಾಗಿ ಶಾಲೆಗಳಲ್ಲಿ ಬಕೆಟ್‌ಗಳನ್ನು ಇಡಲಾಗುತ್ತದೆ. ಅದು ಯಾಕೆಂದು ತಿಳಿದರೆ ನೀವು ಶಾಕ್ ಆಗುತ್ತೀರಿ.

“ಚೀನಾದಲ್ಲಿ ಮೇಜು, ಮಂಚ ಮತ್ತು ಕುರ್ಚಿಗಳನ್ನು ಹೊರತುಪಡಿಸಿ 4 ಕಾಲುಗಳಿರುವ ಎಲ್ಲವನ್ನೂ ತಿನ್ನಲಾಗುತ್ತದೆ” ಎಂದು ಚೀನಾದ ಬಗ್ಗೆ ಒಂದು ಮಾತು ಇದೆ. ಆದರೆ ಇಂದು ನಾವು ತಿಳಿಸುತ್ತಿರುವ ಈ ಭಕ್ಷ್ಯವು ನಿಮಗೆ ಆಶ್ಚರ್ಯ ಉಂಟುಮಾಡಬಹುದು. ಚೀನಾದಲ್ಲಿ ಇದನ್ನು “ವರ್ಜಿನ್ ಎಗ್ಸ್” ಎಂದು ಕರೆಯಲಾಗುತ್ತದೆ. ಇದನ್ನು ಚಿಕ್ಕ ಹುಡುಗರ ಮೂತ್ರವನ್ನು ಬಳಸಿ ತಯಾರಿಸಲಾಗುತ್ತದೆ.

ಈ ಖಾದ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ. “ವರ್ಜಿನ್ ಎಗ್ಸ್” ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವಸಂತಕಾಲ ಪ್ರಾರಂಭವಾಗುತ್ತಿದ್ದಂತೆ ಅಲ್ಲಿನ ಜನರು ಈ ಖಾದ್ಯವನ್ನು ತಿನ್ನಲು ಉತ್ಸುಕತೆಯಿಂದ ಎದುರು ನೋಡುತ್ತಾರೆ.
ಈ ಖಾದ್ಯದ ವಿಶಿಷ್ಟ ಅಂಶವೆಂದರೆ ಇದನ್ನು ಚಿಕ್ಕ ಹುಡುಗರ ಮೂತ್ರವನ್ನು ಬಳಸಿ ತಯಾರಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು, ಆದರೆ ಇದು ನಿಜ. ಈ ಭಕ್ಷ್ಯದಲ್ಲಿ ಬಳಸುವ ಮೊಟ್ಟೆಗಳನ್ನು ಹುಡುಗರ ಮೂತ್ರದಲ್ಲಿ ನೆನೆಸಲಾಗುತ್ತದೆ. ಅದಕ್ಕಾಗಿಯೇ ಈ ಭಕ್ಷ್ಯವನ್ನು “ವರ್ಜಿನ್ ಎಗ್ಸ್” ಎಂದು ಕರೆಯಲಾಗುತ್ತದೆ

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ವರ್ಜಿನ್ ಎಗ್ಸ್​ಗಳನ್ನು ತಯಾರಿಸಲು, ಮೊಟ್ಟೆಗಳನ್ನು ಮೊದಲು ಚಿಕ್ಕ ಹುಡುಗರ ಮೂತ್ರದಲ್ಲಿ ಕುದಿಸಲಾಗುತ್ತದೆ. ಕುದಿಸಿದ ನಂತರ, ಮೊಟ್ಟೆಗಳನ್ನು ಸಿಪ್ಪೆ ಸುಲಿದು, ಮತ್ತೆ ಬಿಸಿಯಾದ ಮೂತ್ರದಲ್ಲಿ ಕುದಿಸಿ ಮೊಟ್ಟೆಗಳಿಗೆ ಮೂತ್ರದ ಪರಿಮಳವನ್ನು ಸೇರಿಸಲಾಗುತ್ತದೆ.
ಈ ಖಾದ್ಯವನ್ನು ತಯಾರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಪ್ರಮಾಣದ ಮೂತ್ರ ಬೇಕಾಗುತ್ತದೆ. ಆದ್ದರಿಂದ ಮಕ್ಕಳಿಂದ ಮೂತ್ರವನ್ನು ಸಂಗ್ರಹಿಸಲು ಶಾಲೆಗಳಲ್ಲಿ ಬಕೆಟ್​ಗಳನ್ನು ಇರಿಸಲಾಗುತ್ತದೆ. ನಂತರ ಈ ಮೂತ್ರವನ್ನು ದೊಡ್ಡ ಪಾತ್ರೆಗಳಿಗೆ ವರ್ಗಾಯಿಸಲಾಗುತ್ತದೆ. ಅದರಲ್ಲಿ ಮೊಟ್ಟೆಗಳನ್ನು ದಿನವಿಡೀ ನಿಧಾನವಾಗಿ ಬೇಯಿಸಲಾಗುತ್ತದೆ.

ಮೊಟ್ಟೆಗಳನ್ನು ಮೂತ್ರದಲ್ಲಿ ಚೆನ್ನಾಗಿ ಕುದಿಸಿದ ನಂತರ, ಅವುಗಳನ್ನು ತುಂಡು ಮಾಡಿ ತಿನ್ನಲಾಗುತ್ತದೆ. ಸ್ಥಳೀಯರು ಈ ಖಾದ್ಯವನ್ನು ಬಹಳ ಎಂಜಾಯ್ ಮಾಡುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬುತ್ತಾರೆ. ಈ ಖಾದ್ಯವನ್ನು ಸ್ಥಳೀಯವಾಗಿ “ಟಾಂಗ್ಜಿ ಡಾನ್” ಎಂದು ಕರೆಯಲಾಗುತ್ತದೆ. ಕೆಲವರು ಇದನ್ನು “ಬಾಯ್ ಎಗ್ಸ್” ಎಂದೂ ಕರೆಯುತ್ತಾರೆ.