ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿಹಿಂದೂಮಹಾಸಭಾ ರಾಜಬೀದಿ ಉತ್ಸವ ಅಭೂತಪೂರ್ವ ಯಶಸ್ಸು- ಈದ್ ಮಿಲಾದ್ ಕೂಡ ಶಾಂತಿಯಿಂದ ನಡೆಯಲಿ

ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ

ಹಿಂದೂಮಹಾಸಭಾ ರಾಜಬೀದಿ ಉತ್ಸವ
ಅಭೂತಪೂರ್ವ ಯಶಸ್ಸು- ಈದ್ ಮಿಲಾದ್ ಕೂಡ ಶಾಂತಿಯಿಂದ ನಡೆಯಲಿ

ಶಾಂತಿಯುತ, ಅತ್ಯಂತ ವಿಜೃಂಭಣೆಯಿಂದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಆಗಿದೆ. ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪಾಲ್ಗೊಂಡ ಯುವಕ-ಯುವತಿಯರು ಸಂಭ್ರಮಿಸಿದ್ದಾರೆ. ನಿಜವಾದ ರಾಜಬೀದಿ ಉತ್ಸವ. ವೈಭವಯುತವಾಗಿ ಆಗೋದಕ್ಕೆ ಹಿಂದೂ ಸಮಾಜದ ಮುಖಂಡರ ಸೇವೆಯೂ ಕಾರಣ.

ಶಿವಮೊಗ್ಗದ ದಾಸೋಹಕ್ಕೆ ಹೆಸರುವಾಸಿ ಎಂಬುದನ್ನು ಈ ರಾಜಬೀದಿ ಉತ್ಸವ ಕೂಡ ತೋರಿಸಿಕೊಟ್ಟಿದೆ. ಕೇಸರಿಮಯ ಶಿವಮೊಗ್ಗಕ್ಕೆ ಕೇಸರಿ ಹಿಂದೂ ಅಲಂಕಾರ ಸಮಿತಿ ಶ್ರಮ ದೊಡ್ಡದು.

ಅರ್ಥ ಮಾಡಿಕೊಂಡ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಎಲ್ಲವೂ ಒಟ್ಟುಗೂಡಿ ವಿಜೃಂಭಣೆಯಿಂದ ಗಣೇಶೋತ್ಸವ ಮುಗಿದಿದೆ. ಬೆಳಿಗ್ಗೆ 4.16 ಕ್ಕೆ ವಿಸರ್ಜನೆ ಮುಗಿದಿದೆ. ಎಲ್ಲರಿಗೂ ಅಭಿನಂದನೆಗಳು.

ಅನೇಕ ಯುವಕ ಸಂಘಗಳ ಪಾತ್ರವೂ ಈ ಯಶಸ್ಸಲ್ಲಿದೆ. ನೂರಾರು ಮಾಲಾರ್ಪಣೆಗಳಾದವು. ಪಕ್ಷಭೇದ ಮರೆತು ಈ ಯಶಸ್ಸಿಗೆ ಜನ ಕಾರಣೀಭೂತರಾಗಿದ್ದಾರೆ. ಬೆಕ್ಕಿನ ಕಲ್ಮಠದ ಶ್ರೀಗಳ ಆಶೀರ್ವಾದದಿಂದ ಸಾಧ್ಯವಾಗಿದೆ. ಒಟ್ಟಾಗಿ ಸೇರಿ ಶ್ರಮಿಸಿದರೆ ವೈಭವ ಹೇಗಿರುತ್ತೆ ಎಂಬುದಕ್ಕೆ ಶಿವಮೊಗ್ಗ ಸಾಕ್ಷಿಯಾಯ್ತು.

ಆತಂಕಗೊಂಡಿದ್ದವರಿಗೆ ನೆಮ್ಮದಿ ಸಿಕ್ಕಿದೆ. ಶಿವಮೊಗ್ಗದಲ್ಲಿ ಆತಂಕದ ವಾತಾವರಣದ ಸೃಷ್ಟಿಗೆ ಅವಕಾಶಕೊಡಲ್ಲ. ಮಾಧ್ಯಮದ ಸಹಕಾರ ವಿಶೇಷವಾಗಿ ಸಿಕ್ಕಿದೆ ಈ ಬಾರಿ.
ಅವರಿಗೂ ಅಭಿನಂದನೆಗಳು.

22ರಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ. ಶಾಂತಿಯುತವಾಗಿ ಮೆರವಣಿಗೆ ನಡೆಯುತ್ತೆ ಎಂಬ ಭಾವನೆ ಇದೆ.

ಪ್ಯಾಲೆಸ್ತೀನ್ ಈಗ ಚರ್ಚೆಗೊಳಗಾಗಿದೆ. ಈಗಲೇ ಆ ಸಮಾಜದವರು ಕಟ್ಟೆಚ್ಚರ ವಹಿಸಬೇಕು. ಸರ್ಕಾರ ಕೂಡ ಹಗುರವಾಗಿ ತಗೋಬಾರದು. ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ಉಪಸ್ಥಿತಿ; ಎಸ್.ಜ್ಞಾನೇಶ್ವರ್, ಮೋಹನ್ ರೆಡ್ಡಿ, ನಾಗರಾಜ್, ದೀನದಯಾಳ್, ಶ್ರೀನಾಗ್ ಸೇರಿದಂತೆ ಹಲವರಿದ್ದರು.