ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನಲ್ಲಿ  ಜ್ಞಾನದೀಪ ಶಾಲೆಗೆ ಬಂಗಾರದ ಪದಕ

ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನಲ್ಲಿ  ಜ್ಞಾನದೀಪ ಶಾಲೆಗೆ ಬಂಗಾರದ ಪದಕ

ಅಕ್ಟೋಬರ್ 10 ರಿಂದ   13   ನೇ ತಾರೀಖಿನಲ್ಲಿ  ಮಧ್ಯಪ್ರದೇಶದ ಗ್ವಾಲಿಯರ್ ನ ಭಾರತೀಯ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ  ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ಷಿಪ್ 2024 – ಇದರಲ್ಲಿ  ಒಟ್ಟು  103 ತಂಡಗಳು ನೊಂದಾಯಿತ ಶಾಲೆಗಳಿದ್ದವು  ಅವುಗಳಲ್ಲಿ
 14 ವರ್ಷದ ಮಕ್ಕಳ  ಫಿಟ್ನೆಸ್ ಏರೋಬಿಕ್ ವಿಭಾಗದಲ್ಲಿ ಪ್ರಥಮ ಸ್ಥಾನ.ಮತ್ತು  ಬಂಗಾರದ ಪದಕ
19 ವರ್ಷದ ಮಕ್ಕಳ ಫಿಟ್ನೆಸ್ ಏರೋಬಿಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು  ಬಂಗಾರದ ಪದಕ
ಪಡೆದು ಶಿವಮೊಗ್ಗದ ಜಾವಳ್ಳಿಯ ಜ್ಞಾನ ದೀಪ ಶಾಲೆಯ ಮಕ್ಕಳು ಶಿವಮೊಗ್ಗ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ  ರಾಷ್ಟ್ರೀಯ  ತೀರ್ಪುಗಾರ ಮತ್ತು ತರಬೇತದಾರ  ಹಾಗೂ ಜ್ಞಾನ ದೀಪ ಶಾಲೆಯ ದೈಹಿಕ ನಿರ್ದೇಶಕ  ಸುದರ್ಶನ ಮತ್ತು ತಂಡದ ಮ್ಯಾನೇಜರ್ ಶ್ರೀಮತಿ ಭಾನುಮತಿ ಅವರ ಮಾರ್ಗದರ್ಶನ ದಲ್ಲಿ ಮಕ್ಕಳು ಸಾಧನೆ ಮಾಡಿರುವುದರಿಂದ
ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ನೀಲಕಂಠ ಮೂರ್ತಿ ಹಾಗೂ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಎಂ ಹೆಗಡೆ ಮತ್ತು ಶಾಲೆಯ ಸಿಬ್ಬಂಧಿ ವರ್ಗದವರು ಮಕ್ಕಳ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.