ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಸರ್ಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನರ ಚಿಕಿತ್ಸಾ ಸೌಲಭ್ಯಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ.ಧನಂಜಯ ಸರ್ಜಿ ಮಾಹಿತಿ
ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಸರ್ಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ನರ ಚಿಕಿತ್ಸಾ ಸೌಲಭ್ಯ
ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ.ಧನಂಜಯ ಸರ್ಜಿ ಮಾಹಿತಿ
ಶಿವಮೊಗ್ಗ ನಗರದ ಪ್ರತಿಷ್ಠಿತ ಸರ್ಜಿ ಆಸ್ಪತ್ರೆಗಳ ಸಮೂಹವು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ನರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯ ಗಳೊಂದಿಗೆ ನರರ ಸ್ಥಾನಿಕ ಇಂಟರ್ವನ್ನನ್ಸ್ ಚಿಕಿತ್ಸಾ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನರ್ಜಿ ಆಸ್ಪತ್ರೆಗಳ ಸಮೂಹದ ಲೇರ್ಮನ್ ಡಾ.ಧನಂಜಯ ಸರ್ಜಿ ಅವರು ಮಾಹಿತಿ ನೀಡಿ, ವಿಶ್ವದಲ್ಲಿ ಹೃದಯರೋಗಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನಲ್ಲಿದ್ದರೆ, ಮೆದುಳು ಮತ್ತು ಸ್ಕೋರ್ ಮುಬಂಧಿಸಿದ ಸಾವಿನ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಭಾರತದಲ್ಲಿ ಪ್ರತಿ ವರ್ಷ 100 ಜನರ ಪೈಕಿ ಒಬ್ಬರಿಗೆ ಸ್ಟೋಕ್ ಆಗುತ್ತಿದೆ. ಬೆಂಗಳೂರು ಮೈಸೂರು, ಹುಬ್ಬಳ್ಳಿ ಬೆಳಗಾಂ ಸೇರಿದಂತೆ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯವಿದ್ದು, ಇದೀಗ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೆದುಳು ಮತ್ತು ಬೆನ್ನು ಹುರಿದುಹಲವಾರು ರೋಗಗಳಿಗೆ ಯಾವುದೇ ತೆರೆದ ಶಸ್ತ್ರಚಿಕಿತ್ಸೆ ಇಲ್ಲದೆಯೇ, ರಕ್ತ ನಾಳದ ಮೂಲಕ ಜಿಯೋಗ್ರಾಮ್ ಮಾದರಿಯಲ್ಲಿ ಅಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಹೃದಯಾಘಾತ ಅಥವಾ ಹೃದಯದ ರಕ್ತ ನಾಳದ ತೊಂದರೆ ಆದಾಗ ಹೇಗೆ ಓಪನ್ ಹಾರ್ಟ್ ಸರ್ಜರಿ ಇಲ್ಲದೇ ಅಂಜಿಯೋಪ್ಲಾಸ್ಸಿ / ಸೈಂಟಿಂಗ್ ಮಾಡಲಾಗುವುದೋ ಅದೇ ರೀತಿಯಲ್ಲಿ ಮೆದುಳಿನಲ್ಲೂ ಮೆದುಳಿನ ರಕ್ತನಾಳಗಳ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆದುಳಿನಲ್ಲಿ ರಕ್ತ ಸ್ರಾವ ಅಥವಾ ರಕ್ತ ಸಂಚಾರ ಕಡಿತವಾಗಿ ಸ್ಟೋಕ್ /ಪಾರ್ಶ್ವವಾಯು ಉಂಟಾದಾಗ ಎಂ.ಆರ್ ಐ / ಸೀ.ಟೀ ನ್ಯಾನಿಂಗ್ ಅಥವಾ ಅಂಜಿಯೋಗ್ರಾಮ್ ಮಾಡಿ ರಕ್ತನಾಳಗಳಲ್ಲಿನ ದೋಷವನ್ನು ಪತ್ತೆ ಮಾಡಲಾಗುತ್ತದೆ. ರಕ್ತನಾಳದಲ್ಲಿ ದೋಷ ಕಂದು ಬಂದಲ್ಲಿ ಸಾಮಾನ್ಯವಾಗಿ ಮೆದುಳಿನ ಸರ್ಜರಿ ಮಾಡಬೇಕಾಗಬಹುದು, ಇಂತಹ ತೊಂದರೆಗಳನ್ನು ಸರ್ಜರಿ ಇಲ್ಲದೇ ಹಾರದೋಳ್ತಾಪ್ತಿ ಅಥವಾ ಕಾಯ್ತಿನ್ಸ್ ಮಾಡಿ ಗುಣಪಡಿಸಬಹುದಾಗಿದೆ, ಈ ಚಿಕಿತ್ಸಾ ವಿಧಾನವು ಸರ್ಜರಿಗೆ ಹೋಲಿಸಿದರೆ ಬಹಳ ಸುರಕ್ಷಿತವಾದುದು ಹಾಗೂ ಇದರಿಂದ ರೋಗಿಯು ಬೇಗ ಗುಣಮುಖರಾಗುತ್ತಾರೆ ಎಂದರು.
ಮೆದುಳು ಅಥವಾ ಬೆನ್ನು ಹುರಿಯಲ್ಲಿನ ಸಣ್ಣ ಸಮಸ್ಯೆಗಳು ಮತ್ತು ಕಷ್ಟಕರ ಸ್ಥಳಗಳನ್ನು ಸಹ ಈ ವಿಧಾನದಿಂದ ಸುಲಭವಾಗಿ ತಲುಪಬಹುದು ಮತ್ತು ಚಿಕಿತ್ಸೆ ನೀಡಬಹುದು ಆದಲ್ಲದೇ ಮಕ್ಕಳು, ವಯೋವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರು, ಕರಿವಳಿಕೆ ಮನೆನ್ನಕ್ಕಾಗ ಹಾಗೂ ಸರ್ಜರಿಗೆ ಯೋಗ್ಯವಲ್ಲದವರಲ್ಲೂ ಈ ಚಿಕಿತ್ಸೆ ಮಾಡಬಹುದಾಗಿದೆ ಎಂದು ತಿಳಿಸಿದರು.